ETV Bharat / city

ದೊಡ್ಡಜಾಲ ಗ್ರಾ.ಪಂಗೆ ಕೇಂದ್ರ ಸಚಿವ ಕಪಿಲ್ ಮೊರೇಶ್ವರ್ ಭೇಟಿ

author img

By

Published : Nov 8, 2021, 6:06 PM IST

ಕೇಂದ್ರ ಸಚಿವ ಕಪಿಲ್ ಮೊರೇಶ್ವರ್ ದೊಡ್ಡಜಾಲ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಕಾರ್ಯಗಳ ವೀಕ್ಷಣೆ ನಡೆಸಿದರು. ಡಿಜಿಟಲ್ ಲೈಬ್ರರಿ, ಗ್ರಾಮದಲ್ಲಿನ ವೈಫೈ ಅಳವಡಿಕೆ, ನಮ್ಮ ಮೆಡಿಕಲ್ ಶಾಪ್, ನಮ್ಮ ಬ್ಯಾಡ್ಮಿಂಟನ್, ಈಜುಕೊಳಕ್ಕೆ ಭೇಟಿ ನೀಡಿದರು.

central minister
ಕೇಂದ್ರ ಸಚಿವ ಕಪಿಲ್ ಮೊರೇಶ್ವರ್

ಯಲಹಂಕ: ಗ್ರಾಮೀಣಾಭಿವೃದ್ಧಿಯಲ್ಲಿ ಪ್ರಗತಿ ಸಾಧಿಸಿ ಹಲವು ಪ್ರಶಸ್ತಿಗಳಿಗೆ ಪಾತ್ರರಾಗಿರುವ ದೊಡ್ಡಜಾಲ ಗ್ರಾಮ ಪಂಚಾಯಿತಿಗೆ ಕೇಂದ್ರ ಗ್ರಾಮೀಣಾಭಿವೃದ್ಧಿ ರಾಜ್ಯ ಖಾತೆ ಸಚಿವ ಕಪಿಲ್ ಮೊರೇಶ್ವರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬೆಂಗಳೂರು ಉತ್ತರ ತಾಲೂಕಿನಲ್ಲಿರುವ ದೊಡ್ಡಜಾಲ ಗ್ರಾಮ ಪಂಚಾಯತಿ ಗ್ರಾಮೀಣಾಭಿವೃದ್ಧಿಯಲ್ಲಿ ಮಹತ್ತರ ಪ್ರಗತಿ ಸಾಧಿಸಿದೆ.

ಕೇಂದ್ರ ಸಚಿವ ಕಪಿಲ್ ಮೊರೇಶ್ವರ್ ದೊಡ್ಡಜಾಲ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಕಾರ್ಯಗಳ ವೀಕ್ಷಣೆ ನಡೆಸಿದರು. ಡಿಜಿಟಲ್ ಲೈಬ್ರರಿ, ಗ್ರಾಮದಲ್ಲಿನ ವೈಫೈ ಅಳವಡಿಕೆ, ನಮ್ಮ ಮೆಡಿಕಲ್ ಶಾಪ್, ನಮ್ಮ ಬ್ಯಾಡ್ಮಿಂಟನ್, ಈಜುಕೊಳಕ್ಕೆ ಭೇಟಿ ನೀಡಿದರು.

ಅಲ್ಲದೇ, ಡಿಜಿಟಲ್​ ಲೈಬ್ರರಿ ಭೇಟಿ ವೇಳೆ ಮಕ್ಕಳ ಜತೆ ಮಾತುಕತೆ ನಡೆಸಿದರು. ಇಲ್ಲಿನ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ವೇಳೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹಾಗೂ ಸದಸ್ಯರು, ಬೆಂಗಳೂರು ನಗರ ಸಿಇಒ, ಬೆಂಗಳೂರು ಉತ್ತರ ಇಒ ಉಪಸ್ಥಿತರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.