ETV Bharat / city

ಅಕ್ರಮ ಆಸ್ತಿ ಗಳಿಕೆ ಸಾಬೀತು: ಸಿಸಿಬಿ ಇನ್ಸ್‌ಪೆಕ್ಟರ್​ಗೆ 4 ವರ್ಷ ಜೈಲು, ₹50 ಲಕ್ಷ ದಂಡ, ಪತ್ನಿಗೂ ಶಿಕ್ಷೆ

author img

By

Published : Aug 2, 2022, 9:50 PM IST

2006ರಲ್ಲಿ ಬೆಂಗಳೂರು ನಗರ ಸಿಸಿಬಿ ಶಾಖೆಯಲ್ಲಿ ಇನ್​ಸ್ಪೆಕ್ಟರ್ ಆಗಿ ಕರ್ತವ್ಯದಲ್ಲಿದ್ದಾಗ ಆದಾಯಕ್ಕಿಂತ ಹೆಚ್ಚು ಆಸ್ತಿ ಸಂಪಾದನೆ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಆಗಿನ ಲೋಕಾಯುಕ್ತ ಪೊಲೀಸರು ಮನೆ ಮೇಲೆ ದಾಳಿ ಮಾಡಿ, ಅಕ್ರಮ ಆಸ್ತಿ ಜಪ್ತಿ ಮಾಡಿದ್ದರು. ಈ ಪ್ರಕರಣದಲ್ಲಿ ನ್ಯಾಯಾಲಯ ಇದೀಗ ಮಹತ್ವದ ತೀರ್ಪು ಪ್ರಕಟಿಸಿದೆ.

ccb-inspector-jailed-for-four-years
ಅಕ್ರಮ ಆಸ್ತಿ ಗಳಿಕೆ ಸಾಬೀತು

ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಆರೋಪದಡಿ ಸಿಸಿಬಿಯಲ್ಲಿ ಕರ್ತವ್ಯ ನಿರ್ವಹಿಸಿದ್ದ ಇನ್​​ಸ್ಪೆಕ್ಟರ್​ಗೆ ನಾಲ್ಕು ವರ್ಷಗಳ ಜೈಲು ಶಿಕ್ಷೆ ಹಾಗೂ 50 ಲಕ್ಷ ರೂ.ದಂಡ ವಿಧಿಸಿ 23ನೇ ಸಿಸಿಎಚ್ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ.

2006ರಲ್ಲಿ ಬೆಂಗಳೂರು ನಗರ ಸಿಸಿಬಿ ಶಾಖೆಯಲ್ಲಿ ಇನ್​ಸ್ಪೆಕ್ಟರ್ ಆಗಿ ಕರ್ತವ್ಯ ಮಾಡುವಾಗ ಆದಾಯಕ್ಕಿಂತ ಹೆಚ್ಚು ಆಸ್ತಿ ಸಂಪಾದನೆ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಆಗಿನ ಲೋಕಾಯುಕ್ತ ಪೊಲೀಸರು ಮನೆ ಮೇಲೆ ದಾಳಿ ನಡೆಸಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುವಾಗ 79,79,966 ರೂಪಾಯಿ ಅಕ್ರಮವಾಗಿ ಹಣ ಸಂಪಾದನೆ ಮಾಡಿರುವುದನ್ನು ಪತ್ತೆ ಹಚ್ಚಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

16 ವರ್ಷಗಳ ವಿಚಾರಣೆ ಬಳಿಕ ತೀರ್ಪು ನೀಡಿರುವ 23 ನೇ ಸಿಸಿಎಚ್ ವಿಶೇಷ ನ್ಯಾಯಾಲಯದ ನ್ಯಾ.ಕೆ.ಲಕ್ಷ್ಮೀನಾರಾಯಣ ಭಟ್ ಅವರು ಇನ್‌ಸ್ಪೆಕ್ಟರ್‌ಗೆ ನಾಲ್ಕು ವರ್ಷ ಸಜೆ ಹಾಗೂ 50 ಲಕ್ಷ ದಂಡ ವಿಧಿಸಿದೆ. ದಂಡ ಕಟ್ಟಲು ವಿಫಲನಾದರೆ 6 ತಿಂಗಳು ಸಾಧಾರಣ ಶಿಕ್ಷೆ ಅನುಭವಿಸಬೇಕು ಎಂದು ಹೇಳಿದೆ.

ಪತ್ನಿಗೂ ಶಿಕ್ಷೆ ವಿಧಿಸಿದ ಕೋರ್ಟ್​ : ಇನ್​ಸ್ಪೆಕ್ಟರ್ ಪತ್ನಿ ಬಿಲ್ಕೀಶ್ ಜಹಾನ್ ಅಕ್ರಮ ಆಸ್ತಿ ಗಳಿಕೆ‌ಗೆ ಪತಿಗೆ ಪ್ರಚೋದನೆ ನೀಡಿದ್ದರು. ಈಕೆಯ ಹೆಸರಿನಲ್ಲಿ ಆಸ್ತಿ ಕೂಡ ಹೊಂದಿರುವುದು ವಿಚಾರಣೆ ಸಾಬೀತಾಗಿದ್ದರಿಂದ 3 ವರ್ಷ ಜೈಲು ಹಾಗೂ 50 ಸಾವಿರ ದಂಡ ವಿಧಿಸಿದೆ. ದಂಡ ಕಟ್ಟದಿದ್ದಲ್ಲಿ ಹೆಚ್ಚುವರಿಯಾಗಿ ಎರಡು ತಿಂಗಳು ಸಾಧಾರಣ ಜೈಲು ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.

ಇದನ್ನೂ ಓದಿ : ಬಿಬಿಎಂಪಿ ಮಾಜಿ ಮಹಿಳಾ ಕಾರ್ಪೋರೇಟರ್‌ಗೆ ಸೇರಿದ 3. 35 ಕೋಟಿ ರೂ. ಮೌಲ್ಯದ ಆಸ್ತಿ ಮುಟ್ಟುಗೋಲು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.