ಬೆಂಗಳೂರಿನ ಕೇಂಬ್ರಿಡ್ಜ್ ತಾಂತ್ರಿಕ ಕಾಲೇಜಿನಲ್ಲಿ ಘಟಿಕೋತ್ಸವ: ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

author img

By

Published : Oct 10, 2021, 12:54 PM IST

cambridge-technical-university-convocation

ಕೇಂಬ್ರಿಡ್ಜ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಘಟಿಕೋತ್ಸವ ಸಮಾರಂಭ ನಡೆದಿದ್ದು, ಸುಮಾರು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.

ಬೆಂಗಳೂರು: ಕೇಂಬ್ರಿಡ್ಜ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಡೆದ ಪದವಿ ಪ್ರದಾನ ಸಮಾರಂಭದಲ್ಲಿ 2019-20 ಮತ್ತು 2020-21 ನೇ ಸಾಲಿನ ಬಿಇ, ಎಂಟೆಕ್, ಎಂಬಿಎ ಹಾಗೂ ಎಂಸಿಎ ಪದವಿ ಮತ್ತು ಸ್ನಾತಕೋತ್ತರ ವಿಭಾಗದ 1000 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.

ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ವಿಪ್ರೋ ಕಂಪನಿಯ ನೇಮಕಾತಿ ಮುಖ್ಯಸ್ಥರಾದ ಲವಣಂ ಅಂಬಾಲ, ನೀವು ಪದವೀಧರರಾಗಲು ನಿಮ್ಮ ಪೋಷಕರು ಮತ್ತು ಗುರುಗಳ ಪರಿಶ್ರಮವಿದ್ದು, ಅವರನ್ನು ಈ ಸಂದರ್ಭದಲ್ಲಿ ನೆನೆಯಬೇಕಾದದ್ದು ನಿಮ್ಮೆಲ್ಲರ ಕರ್ತವ್ಯ. ನಿಮ್ಮ ಆಸಕ್ತಿಗೆ ಅನುಗುಣವಾಗಿ ಸತತ ಪ್ರಯತ್ನಗಳ ಮೂಲಕ ಯಶಸ್ವಿ ಉದ್ಯೋಗಿಗಳು ಅಥವಾ ಉದ್ಯಮಿಗಳಾಗಬಹುದು. ಯಾವುದೇ ರೀತಿಯ ಹಿಂಜರಿಕೆಯಿಲ್ಲದೇ, ಎಲ್ಲಾ ಅವಕಾಶಗಳನ್ನು ಸ್ವೀಕರಿಸಿ ಯಶಸ್ಸನ್ನು ಕಾಣಬಹುದು ಎಂದು ತಿಳಿಸಿದರು.

ಕ್ಯಾಪ್‌ಜಿಮಿನಿ ಕಂಪನಿಯ ಕಾರ್ಯಕ್ರಮ ವ್ಯವಸ್ಥಾಪಕ ಸೌರವ್ ನಾರಾಯಣ್ ಬಿಸ್ವಾಸ್ ಮಾತನಾಡಿ, ವಿದ್ಯಾರ್ಥಿಗಳು ಸತತ ಪ್ರಯತ್ನ, ಪರಿಶ್ರಮ ಮತ್ತು ತಯಾರಿಗಳಿಂದ ತಮ್ಮ ಯಶಸ್ಸನ್ನು ಕಾಣಬಹುದು. ವೃತ್ತಿಪರ ಜೀವನದಲ್ಲಿ ಎಲ್ಲಾ ತರಹದ ಅಡೆತಡೆಗಳು ಮತ್ತು ಒತ್ತಡಗಳನ್ನು ಸಂಯಮದಿಂದ ಎದುರಿಸಿ, ತಂಡದ ನಾಯಕ ಮತ್ತು ಸದಸ್ಯರು ಒಟ್ಟಾಗಿ ಕೆಲಸ ಮಾಡಿ ಗೆಲುವು ಸಾಧಿಸಬೇಕು ಎಂದು ಹೇಳಿದರು.

ಘಟಿಕೋತ್ಸವ ಸಮಾರಂಭ

ವಿದ್ಯಾರ್ಥಿ ಜೀವನದಿಂದ ವೃತ್ತಿಪರ ಜೀವನಕ್ಕೆ ಕಾಲಿಟ್ಟ ಮೇಲೆ ನಿಮ್ಮ ಜವಾಬ್ದಾರಿ ಹೆಚ್ಚಾಗುತ್ತದೆ. ಅದಕ್ಕೆ ಅನುಗುಣವಾಗಿ ನೀವು ಹೆಚ್ಚು ಶ್ರಮಪಡಬೇಕು. ನಮ್ಮ ಸಂಸ್ಥೆಯಿಂದ ನಿಮ್ಮ ಶೈಕ್ಷಣಿಕ ಅಭಿವೃದ್ದಿಗಾಗಿ ಮತ್ತು ನಿಮ್ಮೆಲ್ಲರ ಉದ್ಯೋಗಗಳಿಗಾಗಿ ಕ್ರಮವನ್ನು ಕೈಗೊಂಡಿರುತ್ತೇವೆ. ಇದಲ್ಲದೇ ಕಾಲೇಜಿನಲ್ಲಿ ಸಂಶೋಧನೆಗಾಗಿ ಹೆಚ್ಚು ಒತ್ತನ್ನು ಕೊಟ್ಟಿರುತ್ತೇವೆ ಎಂದು ಕೇಂಬ್ರಿಡ್ಜ್ ವಿದ್ಯಾಸಂಸ್ಥೆಯ ಅಧ್ಯಕ್ಷ ಡಿ.ಕೆ. ಮೋಹನ್‌ ಅವರು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ವಿಪ್ರೊ ಕಂಪನಿಯ ನೇಮಕಾತಿ ಮುಖ್ಯಸ್ಥ ಲವಣಂ ಅಂಬಾಲ ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿದರು. ಕ್ಯಾಪ್‌ಜಿಮಿನಿ ಕಂಪನಿಯ ಕಾರ್ಯಕ್ರಮ ವ್ಯವಸ್ಥಾಪಕ, ಸೌರವ್ ನಾರಾಯಣ್ ಬಿಸ್ವಾಸ್, ಸಂಸ್ಥೆಯ ಅಧ್ಯಕ್ಷ ಡಿ.ಕೆ.ಮೋಹನ್, ಪಾಂಶುಪಾಲರಾದ ಡಾ. ಯೋಗೇಶ್ ವೆಲೆಂಕರ್‌ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಇದನ್ನೂ ಓದಿ: ಸ್ತನ ಕ್ಯಾನ್ಸರ್ ಜಾಗೃತಿ.. ಸಮಯೋಚಿತ ತಪಾಸಣೆ, ಚಿಕಿತ್ಸೆ ಕಾಯಿಲೆಗೆ ರಾಮಬಾಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.