ETV Bharat / city

ಮಾಜಿ ಸಿಎಂ ಬಿಎಸ್​ವೈಗೆ ಸಂಪುಟ ದರ್ಜೆಯ ಸೌಲಭ್ಯ ಒದಗಿಸಿ ಆದೇಶ

author img

By

Published : Aug 7, 2021, 9:09 PM IST

ರಾಜೀನಾಮೆ ನೀಡಿದ ಬಳಿಕವೂ ಬಿ ಎಸ್ ಯಡಿಯೂರಪ್ಪನವರಿಗೆ ಸಚಿವ ಸಂಪುಟ ದರ್ಜೆಯ ಸ್ಥಾನಮಾನಗಳನ್ನು ಒದಗಿಸಿ ಸರ್ಕಾರ ಆದೇಶ ಹೊರಡಿಸಿದೆ. ಆದ್ರೆ, ಮಾಜಿ ಸಿಎಂಗೆ ಈ ಸ್ಥಾನಮಾನ‌ ನೀಡಲು ಸಂವಿದಾನದಡಿ ಅವಕಾಶ ಇದೆಯಾ, ಇದ್ದರೂ ಅದರ ಅಗತ್ಯತೆ ಏನು ಎಂಬ ಬಗ್ಗೆ ಹಲವು ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಮೂಡಿವೆ..

yediyurappa
ಬಿಎಸ್​ವೈ

ಬೆಂಗಳೂರು : ನೂತನ ಸಿಎಂ ಪದವಿ ಅವಧಿ ಇರುವವರೆಗೂ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರಿಗೆ ಸಂಪುಟ ದರ್ಜೆಯ ಸಚಿವರಿಗೆ ನೀಡುವ ಸೌಲಭ್ಯ ಒದಗಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಶಿಷ್ಟಾಚಾರ ವಿಭಾಗ ಶನಿವಾರ ಆದೇಶ ಹೊರಡಿಸಿದೆ. ರಾಜ್ಯಪಾಲರ ಆದೇಶದ ಅನುಸಾರ ಈ ಸೂಚನೆ ನೀಡಲಾಗಿದೆ.

ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಯಡಿಯೂರಪ್ಪರಿಗೆ ಸರ್ಕಾರಿ ಕಾರು, ನಿವಾಸ, 10-11 ಸಿಬ್ಬಂದಿ ಜೊತೆಗೆ ಸಚಿವರಿಗೆ ನೀಡುವ ಪ್ರೊಟೋಕಾಲ್​ಗನ್ನು ಸಹ ಒದಗಿಸಲಾಗುತ್ತದೆ. ಸದ್ಯ ಮಾಜಿ ಸಿಎಂಗೆ ಸಂಪುಟ ದರ್ಜೆಯ ಸ್ಥಾನಮಾನ ನೀಡಿರುವುದು ಹಲವು ಅಚ್ಚರಿಗೆ ಕಾರಣವಾಗಿದೆ.

ಈಗಾಗಲೇ ಬಿಎಸ್​ವೈ ಜಿಲ್ಲಾ ಪ್ರವಾಸ ಕೈಗೊಳ್ಳಲು ಮುಂದಾಗಿದ್ದಾರೆ. ಈ ವೇಳೆ ಸಂಪುಟ ದರ್ಜೆಯ ಸ್ಥಾನಮಾನ ಅವರಿಗೆ ಅನುಕೂಲವಾಗಲಿದೆ. ಪ್ರವಾಸದ ವೇಳೆ ಸಚಿವರುಗಳಿಗೆ ಲಭ್ಯವಾಗುವ ಪ್ರೊಟೋಕಾಲ್ ಇದೀಗ ಮಾಜಿ ಸಿಎಂ ಬಿಎಸ್​ವೈಗೆ ಸಿಗಲಿದೆ.

ಆದರೆ, ಮಾಜಿ ಸಿಎಂಗೆ ಈ ಸ್ಥಾನಮಾನ‌ ನೀಡಲು ಸಂವಿದಾನದಡಿಯಲ್ಲಿ ಅವಕಾಶ ಇದೆಯಾ, ಇದ್ದರೂ ಅದರ ಅಗತ್ಯತೆ ಏನು ಎಂಬ ಬಗ್ಗೆ ಹಲವು ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಮೂಡಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.