ETV Bharat / city

ಯಾವುದೇ ಫ್ರೂಪ್ ಕೊಡದೆ ಆರೋಪ ಮಾಡುತ್ತಿರುವುದು ಷಢ್ಯಂತ್ರ, ಮ್ಯಾಚ್ ಫಿಕ್ಸಿಂಗ್ ಅಷ್ಟೇ: ಸಚಿವ ಅಶ್ವತ್ಥ್ ನಾರಾಯಣ್

author img

By

Published : May 2, 2022, 3:56 PM IST

Updated : May 2, 2022, 4:19 PM IST

ಡಿಕೆಶಿ ಬಂಡವಾಳ ಬಿಚ್ಚಿಡ್ತೀನಿ. ಇವತ್ತಿಂದಲೇ ಬಂಡವಾಳ ಬಿಚ್ಚಿಡುತ್ತೇನೆ. ಡಿಕೆಶಿಯ ಕೊಳಕಿನ ಜಾಲ ಬಿಡಿಸ್ತೀನಿ. ಡಿಕೆಶಿ ನನ್ನ ವಿರುದ್ಧ ಷಢ್ಯಂತ್ರ ಮಾಡಿದ್ದಾರೆ ಎಂದು ರಾಮನಗರ ಜಿಲ್ಲಾ ಉಸ್ತುವಾರಿಯೂ ಆಗಿರುವ ಉನ್ನತ ಶಿಕ್ಷಣ ಸಚಿವ ಅಶ್ವತ್ಥ್​ ನಾರಾಯಣ್​ ಹೇಳಿದ್ದಾರೆ.

C. N. Ashwath Narayan
ಸಚಿವ ಅಶ್ವತ್ಥ್ ನಾರಾಯಣ್

ಬೆಂಗಳೂರು: ಪಿಎಸ್​ಐ ಪರೀಕ್ಷಾ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್​ ಅವರು ನಮ್ಮ ಸಹೋದರ ಸತೀಶ್ ಅವರ ಮೇಲೆ ಆರೋಪ ಮಾಡಿದಾರಲ್ಲ, ಸಾಕ್ಷ್ಯ ಕೊಟ್ಟಿದ್ದಾರಾ?.‌ ಇದೊಂದು ಮ್ಯಾಚ್ ಫಿಕ್ಸಿಂಗ್ ಎಂದು ಸಚಿವ ಅಶ್ವತ್ಥ್ ನಾರಾಯಣ್ ತಿಳಿಸಿದ್ದಾರೆ.

ವಿಕಾಸಸೌಧದಲ್ಲಿ ‌ಮಾತನಾಡಿದ ಅವರು, ನಮ್ಮ ಕುಟುಂಬದಲ್ಲಿ ಭ್ರಷ್ಟಾಚಾರ ಪದ್ಧತಿ, ಅಧಿಕಾರ ದುರ್ಬಳಕೆ ಪದ್ಧತಿ ಇಲ್ಲ. ನಮ್ಮದು ಡಿಕೆಶಿ ಕುಟುಂಬ ಅಲ್ಲ, ಇದೆಲ್ಲ ಪದ್ಧತಿ ಇರೋದಿಕ್ಕೆ. ನಾವು ಸಹಾಯ ಮಾಡ್ತೀವಿ ಅಂತ ಒಬ್ಬೇ ಒಬ್ಬರಿಗೂ ಹೇಳಿಲ್ಲ. ಪಿಎಸ್ಐ ನೇಮಕಾತಿ ವಿಚಾರದಲ್ಲಿ ಯಾವುದೇ ವ್ಯಕ್ತಿಗೂ ಶಿಫಾರಸು, ನೆರವು ಕೊಡೋ ಪ್ರಶ್ನೆ ಉದ್ಭವಿಸಲ್ಲ ಎಂದು ಡಿಕೆಶಿಗೆ ಸಚಿವ ಅಶ್ವತ್ಥ್​ ನಾರಾಯಣ ತಿರುಗೇಟು ನೀಡಿದರು.

ಯಾವುದೇ ಫ್ರೂಪ್ ಕೊಡದೆ ಆರೋಪ ಮಾಡುತ್ತಿರುವುದು ಷಢ್ಯಂತ್ರ

ಈ ಆರೋಪ ಮಾಡಿರೋರು ಸ್ಪಷ್ಟತೆ ಕೊಡಲಿ. ಯಾವುದನ್ನೂ ಸ್ಪಷ್ಟವಾಗಿ ಹೇಳುತ್ತಿಲ್ಲ. ಇರಬಹುದು, ಮಾಡಿರಬಹುದು, ಅವರ ತಮ್ಮ ಇರಬಹುದು ಅಂತಿದ್ದಾರೆ. ಹೇಳಿಕೆ ಸ್ಪಷ್ಟವಾಗಿ ಇರಲಿ. ಮಸಿ ಬಳಿಯಲು ಹೇಳೋದು ಬೇಡ. ಹೆಸರು ಹೇಳದೇ ಸುಳ್ಳು ಆರೋಪ ಮಾಡಲಾಗಿದೆ. ಗಾಳಿಯಲ್ಲಿ ಗುಂಡು ಹೊಡೆದಿದ್ದಾರೆ ಕೈ ನಾಯಕರು. ಸಂಪೂರ್ಣ ದುರುದ್ದೇಶದ ಹೇಳಿಕೆ ಕೊಟ್ಟಿದ್ದಾರೆ. ನಿರಾಧಾರ ಹೇಳಿಕೆ, ಸುಳ್ಳು ಹೇಳಿಕೆ ಕೊಟ್ಟಿದ್ದಾರೆ.‌ ಇದೊಂದು ಷಡ್ಯಂತ್ರವಾಗಿದೆ ಎಂದು ಸಚಿವರು ವಾಗ್ದಾಳಿ ನಡೆಸಿದ್ದಾರೆ.

ನನ್ನ ರಾಜಕೀಯ ಬೆಳವಣಿಗೆ ಸಹಿಸದೇ ಸುಳ್ಳು ಆರೋಪ ಮಾಡಲಾಗಿದೆ. ತನಿಖೆಯ ವರದಿ ಬರಲಿ, ಉಪ್ಪು ತಿಂದೋನು ನೀರು ಕುಡಿದೇ ಕುಡೀತಾನೆ. ಒಂದು ಹೇಳಿಕೆ ಕೊಡಲು ಧೈರ್ಯ, ಸ್ಥೈರ್ಯ ಬೇಕು. ಅವರ ನಿರಾಧಾರ ಹೇಳಿಕೆಗೆ ನನ್ನ ಪ್ರಯಿಕ್ರಿಯೆ ಕೇಳಿದ್ದೇ ತಪ್ಪು. ಶಿವಕುಮಾರ್ ಬಾಯಿಯಲ್ಲಿ ಹೇಳಿಕೆ‌ ಬರುತ್ತೆ ಅಂದ್ರೆ ಅದರಲ್ಲಿ ದುರುದ್ದೇಶ ಇದೆ ಅಂತರ್ಥ. ಅಶ್ವತ್ಥ್​ ನಾರಾಯಣ ಮುಖ್ಯಮಂತ್ರಿ ಆಗಿಬಿಡ್ತಾನೆ ಅನ್ನೋ ಭಯ ಇದೆ ಡಿಕೆಶಿಗೆ. ನಮ್ಮ ನಾಯಕತ್ವ, ಗುಣದ ಭಯ ಇರಲಿ ಅವರಿಗೆ ಎಂದು ಕಿಡಿಕಾರಿದರು.

ಇದನ್ನೂ ಓದಿ: ನಾವು ಗಂಡಸರಲ್ಲ, ಅವರೋಬ್ಬರೇ ಗಂಡಸರು. ಹೀಗಾಗಿ ನಮಗೆ ಭಯ ಆಗುತ್ತಿದೆ: ಡಿಕೆಶಿ

ಕಾಂಗ್ರೆಸ್ ನವರು ಆಧಾರ ಸಹಿತ ಮಾತಾಡ್ತಿಲ್ಲ. ನನಗೆ ಯಾರ ಜತೆಗೂ ಸಂಬಂಧ ಇಲ್ಲ. ದರ್ಶನ್ ಗೌಡ ಹೆಸರು ಈಗಲೇ ಕೇಳ್ತಿರೋದು ನಾನು. ನಾನು ಭ್ರಷ್ಟಾಚಾರ ಮಾಡಲು ಬಂದವನಲ್ಲ. ಭ್ರಷ್ಟಾಚಾರ‌ ಮಾಡಲು ಬಂದವರೇ ಬೇರೆ ಇದ್ದಾರೆ. ತನಿಖೆ ಪಾರದರ್ಶಕವಾಗಿ ನಡೆಯುತ್ತಿದೆ ಎಂದು ತಿಳಿಸಿದರು.

ಡಿಕೆಶಿ ಬಂಡವಾಳ ಬಿಚ್ಚಿಡುತ್ತೇನೆ: ರಾಮನಗರ ಜಿಲ್ಲೆಯ ಜನ ಯಾವತ್ತೂ ಡಿಕೆಶಿನ ಸಂಪೂರ್ಣ ಒಪ್ಪಿಲ್ಲ. ಡಿಕೆಶಿ ರಾಮನಗರದಲ್ಲಿ ಸೀಮಿತ ನಾಯಕ ಅಷ್ಟೇ. ನಾನೂ ರಾಮನಗರದವನೇ, ನಮ್ಮ ಪೂರ್ವಜರೂ ಅಲ್ಲಿಯವರೇ. ಡಿಕೆಶಿ ದಿಕ್ಕು ತಪ್ಪಿಸುವ ಹೇಳಿಕೆ ಕೊಟ್ಟಿದ್ದಾರೆ. ಆಧಾರ ರಹಿತ ಹೇಳಿಕೆ ಕೊಟ್ಟಿದ್ದಾರೆ. ಆರ್ಗನೈಸ್ಡ್ ಕ್ರೈಂ ಇದು. ಡಿಕೆಶಿ ಬಂಡವಾಳ ಬಿಚ್ಚಿಡ್ತೀನಿ. ಇವತ್ತಿಂದಲೇ ಬಂಡವಾಳ ಬಿಚ್ಚಿಡುತ್ತೇನೆ ಎಂದು ಎಚ್ಚರಿಕೆ ರವಾನಿಸಿದರು.

ಡಿಕೆಶಿಯ ಕೊಳಕಿನ ಜಾಲ ಬಿಡಿಸ್ತೀನಿ. ಡಿಕೆಶಿ ನನ್ನ ವಿರುದ್ಧ ಷಢ್ಯಂತ್ರ ಮಾಡಿದ್ದಾರೆ. ನಾಚಿಕೆ ಆಗಲ್ವಾ ಉಗ್ರಪ್ಪಗೆ. ಭ್ರಷ್ಟಾಚಾರ ಮಾಡಿದ್ರೆ ಹೇಳಲಿ. ಉಗ್ರಪ್ಪ ತಮ್ಮ ರಾಜಕೀಯ ಅನುಭವದಿಂದ ಮಾತಾಡಲಿ. 80 ಲಕ್ಷ ರೂ. ಕೊಟ್ಟಿದ್ದಾರೇನ್ರಿ? ಇದು ಕಟು ಸುಳ್ಳು. ಪ್ರಕರಣಕ್ಕೂ ನಮಗೂ ಸಂಬಂಧ ಇಲ್ಲ. ಉಗ್ರಪ್ಪನನ್ನೇ ಕೇಳಿ, ಆತ ಡಿಕೆಶಿ ವಿರುದ್ಧ ಕಡು ಭ್ರಷ್ಟ ಎಂದು ಆರೋಪಿಸಿದ್ದ ಎಂದು ವಾಗ್ದಾಳಿ ನಡೆಸಿದರು.

ನಮ್ಮಣ್ಣ ಸತೀಶ್​ಗೂ ಪ್ರಕರಣಕ್ಕೂ ಸಂಬಂಧ ಇಲ್ಲ: ನೂರಕ್ಕೆ ನೂರು‌ ನಮ್ಮಣ್ಣ ಸತೀಶ್​ಗೂ ಈ ಪ್ರಕರಣಕ್ಕೂ ಸಂಬಂಧವೇ ಇಲ್ಲ. ಇಂಥ ಸಾವಿರ ಜನ ಪ್ರಯತ್ನ ಮಾಡಿದ್ರೂ ಅಶ್ವತ್ಥ್​ ನಾರಾಯಣಗೆ ಮಸಿ ಬಳಿಯಲು ಆಗಲ್ಲ ಎಂದು ಸ್ಪಷ್ಟಪಡಿಸಿದರು. ಅವರು ಯಾವುದಾದರು ಫ್ರೂಪ್ ಕೊಟ್ಟಿದ್ದಾರಾ?. ಇದು ಆಧಾರರಹಿತ ಆರೋಪ. ಉಗ್ರಪ್ಪರೇ ಡಿಕೆಶಿ ಕಡು ಭ್ರಷ್ಟ ಅಂದಿದ್ದರು. ಇಂಥವರು ಆರೋಪ ಮಾಡಲು ನಾಚಿಕೆ ಆಗಲ್ವಾ ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ಹಗರಣ ಮಾಡುವ, ಶಾಂತಿ ಕದಡುವ RSS, ಭಜರಂಗ ದಳದ ಮೇಲೆ ನಿಮ್ಮ ಹಾರ್ಡ್‌ ಅಸ್ತ್ರ ಬಳಸಿ.. ಸಿಎಂಗೆ ತಿವಿದ ಹೆಚ್.ವಿಶ್ವನಾಥ್

Last Updated : May 2, 2022, 4:19 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.