ETV Bharat / city

Congressನಿಂದ ಕತ್ತಲೆಯಲ್ಲಿ ಕಪ್ಪು ಬೆಕ್ಕು ಹುಡುಕುವ ಪ್ರಯತ್ನ: ಬಿಜೆಪಿ ಟ್ವೀಟಾಸ್ತ್ರ

author img

By

Published : Nov 12, 2021, 2:30 PM IST

ಬಿಟ್ ಕಾಯಿನ್ ಹಗರಣ (bitcoin case) ವಿಚಾರದಲ್ಲಿ ಕಾಂಗ್ರೆಸ್ ನಾಯಕರು ಅಕ್ಷರಶಃ ಕತ್ತಲೆಯಲ್ಲಿ ಕಪ್ಪು ಬೆಕ್ಕು ಹುಡುಕುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಬಿಜೆಪಿ ಟ್ವೀಟ್ (bjp tweet against congress)​ ಮೂಲಕ ಟೀಕಿಸಿದೆ.

bjp tweet
ಬಿಜೆಪಿ ಟ್ವೀಟ್​

ಬೆಂಗಳೂರು: ಬಿಟ್ ಕಾಯಿನ್ ಹಗರಣ (bitcoin case) ವಿಚಾರದಲ್ಲಿ ಕಾಂಗ್ರೆಸ್ ನಾಯಕರು(congress leaders) ಅಕ್ಷರಶಃ ಕತ್ತಲೆಯಲ್ಲಿ ಕಪ್ಪು ಬೆಕ್ಕು ಹುಡುಕುವ ಪ್ರಯತ್ನ ನಡೆಸುತ್ತಿದ್ದಾರೆ. ಇಲ್ಲದ ವಸ್ತುವನ್ನು ಇದೆಯೆಂದು ಸ್ಥಾಪಿಸುವ ಭ್ರಮಾತ್ಮಕ ಕಾಯಿಲೆ ಕಾಂಗ್ರೆಸ್ ನಾಯಕರನ್ನು ಕಾಡುತ್ತಿರುವಂತಿದೆ ಎಂದು ಬಿಜೆಪಿ(bjp) ಟೀಕಿಸಿದೆ.

  • ಬಿಟ್ ಕಾಯಿನ್ ಹಗರಣ ವಿಚಾರದಲ್ಲಿ ಕಾಂಗ್ರೆಸ್ ನಾಯಕರು ಅಕ್ಷರಶಃ ಕತ್ತಲೆಯಲ್ಲಿ ಕಪ್ಪು ಬೆಕ್ಕು ಹುಡುಕುವ ಪ್ರಯತ್ನ ನಡೆಸುತ್ತಿದ್ದಾರೆ.

    ಇಲ್ಲದ ವಸ್ತುವನ್ನು ಇದೇ ಎಂದು ಸ್ಥಾಪಿಸುವ ಭ್ರಮಾತ್ಮಕ ಕಾಯಿಲೆ ಕಾಂಗ್ರೆಸ್ ನಾಯಕರನ್ನು ಕಾಡುತ್ತಿರುವಂತಿದೆ.#ಕಮಿಷನ್‌ಕಾಂಗ್ರೆಸ್

    — BJP Karnataka (@BJP4Karnataka) November 12, 2021 " class="align-text-top noRightClick twitterSection" data=" ">

ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಬಿಟ್ ಕಾಯಿನ್ ದಂಧೆ ನಡೆದಿದೆ. ಈ ದಂಧೆಯ ಆರೋಪಿಯು ಯುವ ಕಾಂಗ್ರೆಸ್ ನಿಯೋಜಿತ ಅಧ್ಯಕ್ಷ ಮಹಮ್ಮದ್ ನಲಪಾಡ್ ಹಾಗೂ ಮಾಜಿ ಸಚಿವ ಲಮಾಣಿ ಪುತ್ರ ದರ್ಶನ್ ನಡುವೆ ಅವ್ಯವಹಾರ ನಡೆಸಿರುವ ಬಗ್ಗೆ ನ್ಯಾಯಾಲಯಕ್ಕೆ ಸಲ್ಲಿಸಲಾದ ಚಾರ್ಜ್ ಶೀಟ್‌ನಲ್ಲಿ ಉಲ್ಲೇಖವಿದೆ ಎಂದು ಬಿಜೆಪಿ ಟ್ವಿಟ್(bjp tweet against congress) ಮಾಡಿ ಕಾಂಗ್ರೆಸ್​ಗೆ ತಿರುಗೇಟು ನೀಡಿದೆ.

ಬಿಟ್ ಕಾಯಿನ್ ದಂಧೆಯ ಆರೋಪಿ ಶ್ರೀಕಿ(shreeki)ಯನ್ನು ಸಿದ್ದರಾಮಯ್ಯ(Siddaramaiah) ಅವಧಿಯಲ್ಲಿ ಬಂಧಿಸಿ ಬಿಡುಗಡೆಗೊಳಿಸಲಾಗಿತ್ತು. ಅದೇ ಸಿದ್ದರಾಮಯ್ಯ ಈಗ ಬಿಟ್ ಕಾಯಿನ್ ಆರೋಪಿಗೆ ಕಾಂಗ್ರೆಸ್ ನಾಯಕರ ಜೊತೆ ಇರುವ ಸಂಬಂಧವನ್ನು ಉಲ್ಲೇಖ ಮಾಡದೇ, ಬಿಜೆಪಿ ವಿರುದ್ಧ ಹೇಳಿಕೆ ನೀಡುತ್ತಿರುವುದು ದುರದೃಷ್ಟಕರ. ಬಿಟ್ ಕಾಯಿನ್ ವಿಚಾರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬೇಜವಾಬ್ದಾರಿ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು. ಬಿಟ್ ಕಾಯಿನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷ್ಯಗಳಿದ್ದರೆ ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದೆ.

ಇದನ್ನೂ ಓದಿ: ತಂದೆ ಮಾಡಿದ್ದ ಸಾಲಕ್ಕೆ ಅಪ್ರಾಪ್ತ ಮಗನಿಗೆ ಬ್ಯಾಂಕ್ ನೋಟಿಸ್​: ಪ್ರಕರಣ ದಾಖಲಿಸುವಂತೆ ಮಕ್ಕಳ ಆಯೋಗದ ಸೂಚನೆ

ತಾವು ಮಾಡಿದ ತಪ್ಪುಗಳನ್ನು ಬಿಜೆಪಿ ತಲೆಗೆ ಕಟ್ಟುವ ಚಾಳಿ ಕಾಂಗ್ರೆಸ್ ಪಕ್ಷ(congress party) ಹೊಂದಿದೆ. ರಫೇಲ್ ಯುದ್ಧ ವಿಮಾನ ಖರೀದಿಗೆ ಲಂಚ ಬಯಸಿದ್ದ ಕಾಂಗ್ರೆಸ್ ನಾಯಕರು ನಂತರ ಬಿಜೆಪಿ ವಿರುದ್ಧ ಆರೋಪಿಸಿದ್ದರು. ಬಿಟ್ ಕಾಯಿನ್ ವಿಚಾರವೂ ಇದೇ ರೀತಿಯಲ್ಲಿ ಸಾಗುತ್ತಿದೆ.

ಡಾರ್ಕ್ ನೆಟ್ ಮತ್ತು ಬಿಟ್ ಕಾಯಿನ್ ಜೊತೆ ಡ್ರಗ್ಸ್ ಹಗರಣಕ್ಕೆ ನಂಟಿದೆ ಎಂದು ನಾವು ಮೊದಲೇ ಪ್ರತಿಪಾದಿಸಿದ್ದೆವು. ಡಿಕೆಶಿ ಆಪ್ತ ಮೊಹಮ್ಮದ್ ನಲಪಾಡ್ ಮತ್ತು ಉಮರ್ ನಲಪಾಡ್ ಬಿಟ್ ಕಾಯಿನ್ ದಂಧೆಯ ಆರೋಪಿಯ ಜೊತೆ ಹೊಂದಿರುವ ನಂಟೇ ಇದಕ್ಕೆ ಸಾಕ್ಷಿ. ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲೇ ಶ್ರೀಕಿ ನಿರಾತಂಕವಾಗಿ ಇದ್ದಿದ್ದಲ್ಲವೇ? ಎಂದು ಬಿಜೆಪಿ ಪ್ರಶ್ನಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.