ETV Bharat / city

ಬಿಡಿಎದಲ್ಲಿ ಏಜೆಂಟ್ ಗಿರಿ ನಿಲ್ಲಬೇಕು; ಇನ್ನೂ ಮೂವರು ಪ್ರಭಾವಿಗಳ ಮೇಲೆ ದಾಳಿ ನಡೆಯಬೇಕಿದೆ: ಎಸ್‌.ಆರ್‌.ವಿಶ್ವನಾಥ್‌

author img

By

Published : Mar 22, 2022, 1:52 PM IST

Updated : Mar 22, 2022, 2:26 PM IST

ಬಿಡಿಎ ಅಧ್ಯಕ್ಷ ಆಗಿದ್ದು ತಪ್ಪು. ಆ ಸ್ಥಾನದಿಂದ ಕೂಡ ತೆಗೆಯಬೇಕೆಂದು ಸಂಚು ನಡೆಯುತ್ತಿದೆ. ನಾನು ಯಾವುದಕ್ಕೂ ಜಗ್ಗುವುದಿಲ್ಲ. ಇರುವಷ್ಟು ದಿನ ಒಳ್ಳೆಯ ಹೆಸರು ಮಾಡಬೇಕು ಎಂಬ ಪ್ರಯತ್ನ ಮಾಡುತ್ತಿದ್ದೇನೆ ಎಂದು ಬಿಡಿಎ ಅಧ್ಯಕ್ಷ ಎಸ್‌.ಆರ್‌.ವಿಶ್ವನಾಥ್‌ ಬೆಂಗಳೂರಿನಲ್ಲಿ ಹೇಳಿದ್ದಾರೆ.

Bda chairman s.r. vishwanath reaction on Acb raid on bda broker house in bangalore
ಬಿಡಿಎನಲ್ಲಿ ಏಜೆಂಟ್ ಗಿರಿ ನಿಲ್ಲಬೇಕು; ಇನ್ನೂ ಮೂವರು ಪ್ರಭಾವಿಗಳ ಮೇಲೆ ದಾಳಿ ನಡೆಯಬೇಕಿದೆ: ಎಸ್‌.ಆರ್‌.ವಿಶ್ವನಾಥ್‌

ಬೆಂಗಳೂರು: ಇನ್ನೂ ಮೂವರು ಪ್ರಭಾವಿಗಳ ಮೇಲೆ ದಾಳಿ ನಡೆಯಬೇಕು. ಈ ದಾಳಿಯಲ್ಲಿ ಅವರ ಲಿಂಕ್‌ಗಳು ಸಿಗುವ ಸಾಧ್ಯತೆಯಿದೆ ಎಂದು ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಹೇಳಿದ್ದಾರೆ. ವಿಧಾನಸೌಧದಲ್ಲಿ ‌ಮಾತನಾಡಿದ ಅವರು, ಅತ್ಯುತ್ತಮ ಸಂಸ್ಥೆ ಕೆಲವರ ದುರುದ್ದೇಶದಿಂದ ಹಾಳಾಗಿದೆ. ಅಲ್ಲಿ ಆಗಿರುವ ಅವ್ಯವಹಾರ ಬಯಲಾಗಿದ್ದು, ತನಿಖೆ ನಡೆಯುತ್ತಿದೆ. ರೈತ ನೇರವಾಗಿ ಬಂದರೆ ಕೆಲಸ ಆಗಲ್ಲ, ಏಜೆಂಟ್ ಮೂಲಕ ಬಂದ್ರೆ ಕೆಲಸ ಆಗುತ್ತೆ ಎಂದು ಹೇಳಿದರು.

ಬಿಡಿಎದಲ್ಲಿ ಏಜೆಂಟ್ ಗಿರಿ ನಿಲ್ಲಬೇಕು; ಇನ್ನೂ ಮೂವರು ಪ್ರಭಾವಿಗಳ ಮೇಲೆ ದಾಳಿ ನಡೆಯಬೇಕಿದೆ: ಎಸ್‌.ಆರ್‌.ವಿಶ್ವನಾಥ್‌

ಎಸಿಬಿ ದಾಳಿಗೆ ಒಳಗಾಗಿರುವ ವ್ಯಕ್ತಿ ನನ್ನ ಮೇಲೆ ಮಾನಹಾನಿ ಕೇಸ್ ಹಾಕಿದ್ದ. 25 ಕೋಟಿ ರೂ. ಮಾನ ಹಾನಿ ಕೇಸ್ ದಾಖಲು ಮಾಡಿದ್ದಾನೆ. ಅವರ ಹೆಸರು ಬೇಡ. ಕೋರ್ಟ್‌ನಲ್ಲಿದೆ. ಕುಮಾರಸ್ವಾಮಿ ಹೇಳಿದ ಹಾಗೆ ಏಜೆಂಟ್‌ ಗಿರಿ ನಿಲ್ಲಬೇಕು. ಕೋಟ್ಯಂತರ ರೂಪಾಯಿ ಮೋಸ ಮಾಡಿದ್ದಾರೆ. ಇಬ್ಬರು ಮೂರು ಜನ ಎಸ್ಕೇಪ್ ಆಗಿದ್ದಾರೆ. ಈ ರೇಡ್ ಲಿಂಕ್ ನಲ್ಲಿ ಅವರೆಲ್ಲ ಸಿಗಬಹುದು. ಈ ರೇಡ್ ಅನ್ನು ನಾನು ಸ್ವಾಗತ ಮಾಡುತ್ತೇವೆ ಎಂದರು.

ನಾನು ಇರುವಾಗ ಯಾವ ಬ್ರೋಕರ್ ಬಂದ್ರು ಬಿಡುತ್ತಿರಲಿಲ್ಲ. ಒಳಗೆ ಯಾರನ್ನು ಬಿಡಬಾರದು ಅಂತ ಹೇಳಿದ್ದೆ. ನಾನು ಇಲ್ಲಿ ಮಾತನಾಡುವುದನ್ನು ಅವರಿಗೆ ತಿಳಿಸುವ ಲಿಂಕ್ ಇಟ್ಟುಕೊಂಡಿದ್ದಾರೆ. ಕೆಲವು ಅಧಿಕಾರಿಗಳನ್ನು ಅವರು ಕರೆಸಿಕೊಂಡು ವ್ಯವಹಾರ ಮಾಡಿರುವುದು ನಿಜ ಇದೆ. ದಾಳಿಯಲ್ಲಿ ಭಾಗಿಯಾದ ಅಷ್ಟು ಜನರನ್ನು ಹೊರಗೆ ತೆಗೆಯುತ್ತೇವೆ. ಎಸಿಬಿ ಹಲ್ಲಿಲ್ಲ ಅಂತಿದ್ರು ಅದನ್ನು ಸುಳ್ಳು ಮಾಡುತ್ತೇವೆ. ಅಧಿಕಾರಿಗಳು ಸಮರ್ಥವಾಗಿ ರೇಡ್ ಮಾಡುತ್ತಿದ್ದಾರೆ. ಕೋಟ್ಯಂತರ ರೂ. ಆಸ್ತಿ ಬಿಡಿಎಗೆ ಬರಬೇಕು. ಒಳ್ಳೆದು ಆಗುತ್ತೆ ಎಂದು ಅಂದು ಕೊಂಡಿದ್ದೇವೆ ಎಂದು ತಿಳಿಸಿದರು.

'ಯಾರನ್ನು ಬಿಡುವುದಿಲ್ಲ': ಇದರಲ್ಲಿ ಎಲ್ಲ ದಾಖಲೆ ಬಿಡಲಿಲ್ಲ ಅಂದ್ರೆ ನಮ್ಮ ಬಳಿ ದಾಖಲೆ ಇವೆ ಅದನ್ನು ಬಿಡುತ್ತೇವೆ. ಯಾರನ್ನೂ ಬಿಡುವುದಿಲ್ಲ. ನಮಗೆ ಫೈಲ್ ಬರುತ್ತಿರಲಿಲ್ಲ ಈವಾಗ ಬರುವಂತೆ ಮಾಡಿದ್ದೇನೆ. ಬಿಡಿಎ ಮೇಲೆ ಸಾಕಷ್ಟು ತಪ್ಪು ಅಭಿಪ್ರಾಯವಿದೆ. ಬಿಡಿಎ ಒಂದು ಕಾಲಕ್ಕೆ ಜನರಿಗೆ ಉಪಯೋಗಕ್ಕೆ ಇದ್ದ ಸಂಸ್ಥೆ. ದುರಾಸೆಗೆ ಒಳಗಾಗಿ ಈಗ ಏಂಜಟ್‌ಗಳ ದರ್ಬಾರ್ ನಡೆಯುತ್ತಿದೆ. ಕಳೆದ ತಿಂಗಳು ಬಿಡಿಎ ಮೇಲೆ ಎಸಿಬಿ ರೈಡ್ ನಡೆದಿತ್ತು.

ಆ ವೇಳೆ ಸಾಕಷ್ಟು ದಾಖಲೆ ವಶಕ್ಕೆ ಪಡೆದಿತ್ತು. ಅದರ ಆಧಾರದ ಮೇಲೆ ಇಂದು 9 ಕಡೆ ಎಸಿಬಿ ದಾಳಿ ಮಾಡಿದೆ, ಈಗ ತನಿಖೆ ನಡೆಯುತ್ತಿದೆ. ನೇರವಾಗಿ ಬಂದರೆ ಕೆಲಸ ಆಗಲ್ಲ ಅಂತ ಇತ್ತು. ನಾನು ಅಧ್ಯಕ್ಷ ಆದ ಮೇಲೆ ಅದನ್ನು ಬದಲಾವಣೆ ಮಾಡಿದ್ದೇನೆ ಎಂದು ಎಸ್‌.ಆರ್‌.ವಿಶ್ವನಾಥ್‌ ಹೇಳಿದರು.

ಬಿಡಿಎ ಅಧ್ಯಕ್ಷ ಆಗಿದ್ದು ತಪ್ಪು. ಆ ಸ್ಥಾನದಿಂದ ಕೂಡ ತೆಗೆಯಬೇಕೆಂದು ಸಂಚು ನಡೆಯುತ್ತಿದೆ. ನಾನು ಯಾವುದಕ್ಕೂ ಜಗ್ಗುವುದಿಲ್ಲ. ಇರುವಷ್ಟು ದಿನ ಒಳ್ಳೆಯ ಹೆಸರು ಮಾಡಬೇಕು ಎಂಬ ಪ್ರಯತ್ನ ಮಾಡುತ್ತಿದ್ದೇನೆ. ಸರ್ಕಾರ ಕೂಡ ಸಹಾಯ ಮಾಡುತ್ತದೆ. ಮಾಜಿ ಸಿಎಂ ಬಿಎಸ್‌ವೈ ಮತ್ತು ಸಿಎಂ ಬೊಮ್ಮಾಯಿ ಕೂಡ ಬೆಂಬಲ ನೀಡುತ್ತಿದ್ದಾರೆ. ಬ್ರೋಕರ್ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳಲು ಸರ್ಕಾರ ಸ್ವಾತಂತ್ರ್ಯ ನೀಡಿದೆ. ಇಂದು ದಾಳಿಯಾಗಿರೋದು ನಿಜಕ್ಕೂ ಒಳ್ಳೆಯ ಬೆಳವಣಿಗೆ. ದಾಖಲೆಗಳಲ್ಲಿ ಏಜೆಂಟ್‌ಗಳು ಸಿಕ್ಕಿ ಹಾಕಿಕೊಳ್ಳಲ್ಲ, ಸಹಿ ಕೂಡ ಇರುವುದಿಲ್ಲ. ಮೋಸ ಹೋದ ಮೇಲೆ ಭಾದಿತರು ಯಾರು ಅಂತ ಗೊತ್ತಾಗುತ್ತಿದೆ ಎಂದರು.

'ಎಸಿಬಿ ದಾಳಿ ಕಣ್ಣೊರೆಸುವ ತಂತ್ರ, ಭ್ರಷ್ಟರಿಗೆ ಶಿಕ್ಷೆ ಆಗುತ್ತಿಲ್ಲ': ಪದೇ ಪದೆ ಎಸಿಬಿ ದಾಳಿ ನಡೆಯುತ್ತಿದೆ. ಕೋಟ್ಯಂತರ ರೂಪಾಯಿ ಹಣ, ಚಿನ್ನಾಭರಣ, ಆಸ್ತಿ ವಶಕ್ಕೆ ಪಡೆಯಲಾಗುತ್ತಿದೆ. ಆದರೆ, ಎಷ್ಟು ಜನಕ್ಕೆ ಶಿಕ್ಷೆ ಆಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಎಸಿಬಿಯಿಂದ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ದಾಳಿ ಪ್ರಕರಣಗಳು ನೋಡುತ್ತಿದ್ದೇನೆ. ಎಷ್ಟು ಪ್ರಕರಣದಲ್ಲಿ ಶಿಕ್ಷೆಯಾಗಿದೆ? ಎಷ್ಟು ಪ್ರಕರಣದಲ್ಲಿ ಆಸ್ತಿ ಮುಟ್ಟುಗೋಲು ಆಗಿದೆ? ಕೇವಲ ಎಸಿಬಿ ದಾಳಿ ನಡೆಸಿದರೆ ಉಪಯೋಗ ಇಲ್ಲ. ಏನು ಕ್ರಮ ಆಗಿದೆ ಅನ್ನೋದು ಯಾರಿಗೂ ಮಾಹಿತಿ ಇಲ್ಲ. ಕೇವಲ ಕಣ್ಣೊರೆಸುವ ತಂತ್ರವಾಗಿ ಎಸಿಬಿ ದಾಳಿ ನಡೆಯುತ್ತಿದೆ. ಎಸಿಬಿ ದಾಳಿ ತೋರ್ಪಡಿಕೆಗೆ ನಡೆಯುತ್ತಿದೆ. ಇದರಿಂದ ಯಾವುದೇ ಪರಿಣಾಮ ಆಗುತ್ತಿಲ್ಲ. ಭ್ರಷ್ಟರಿಗೆ ಶಿಕ್ಷೆ ಆದರೆ ಜನರಿಗೆ ಇಂತಹ ದಾಳಿಗಳ ಮೇಲೆ ನಂಬಿಕೆ ಬರುತ್ತದೆ ಎಂದು ಹೇಳಿದರು.

ಇದನ್ನೂ ಓದಿ: ಎಸಿಬಿ ದಾಳಿ : ಬ್ರೋಕರ್‌ಗಳ ಮನೆಯಲ್ಲಿ ಕಣ್ಣು ಹಾಯಿಸಿದಷ್ಟು ಚಿನ್ನಾಭರಣ ; ದುಬಾರಿ ಬೆಲೆಯ ಗಾಗಲ್ಸ್, ವಾಚ್‌ಗಳು ವಶ

Last Updated : Mar 22, 2022, 2:26 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.