ETV Bharat / city

ಕೃಷಿ ಮೇಳದಲ್ಲಿ ಗಮನ ಸೆಳೆಯುತ್ತಿದೆ ಕೃಷಿ ವಿಜ್ಞಾನ ಕೇಂದ್ರದ ಪ್ರಾತ್ಯಕ್ಷಿಕೆ..!

author img

By

Published : Nov 12, 2021, 8:52 PM IST

ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯ ಆವರಣದಲ್ಲಿ ನಡೆಯುತ್ತಿರುವ ನಾಲ್ಕು ದಿನಗಳ ಕೃಷಿ ಮೇಳದ (Bangalore agricultural fair) ಎರಡನೇ ದಿನವಾದ ಇಂದು ಕೃಷಿ ವಿಜ್ಞಾನ ಕೇಂದ್ರಕ್ಕೆ ಸಾವಿರಾರು ಮಂದಿ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ಜನರಿಗೆ ಅತ್ಯಂತ ಸರಳವಾಗಿ ಅರ್ಥವಾಗುವ ರೀತಿಯಲ್ಲಿ ಪ್ರಾತ್ಯಕ್ಷಿಕೆಗಳನ್ನು ರೂಪಿಸಿ ಇಡಲಾಗಿದೆ. ಬೆಳೆಗಳನ್ನು ಯಾವ ರೀತಿ ಹೇಗೆ ಬೆಳೆಸಬೇಕು ಎಂಬುದನ್ನು ವಿವರಿಸುವ ಕಾರ್ಯ ಮಾಡಲಾಗುತ್ತಿದೆ..

bangalore agricultural fair demonstration of the Different types of farming
ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯ

ಬೆಂಗಳೂರು : ರೈತರಿಗೆ ಕೃಷಿ ಕ್ಷೇತ್ರದ ಹೊಸ ಆವಿಷ್ಕಾರ ಪರಿಚಯಿಸುವ, (New invention of agriculture demonstration) ಉನ್ನತೀಕರಣದ ಮಾಹಿತಿ ಒದಗಿಸುವ ಹಾಗೂ ವಿಭಿನ್ನ ಪ್ರಕಾರದ ಕೃಷಿ ಪದ್ಧತಿಯನ್ನು ಪರಿಚಯಿಸುವ ಕಾರ್ಯ ಪ್ರಸಕ್ತ ಕೃಷಿ ಮೇಳದಲ್ಲಿ (Bangalore agricultural fair) ನಡೆಯುತ್ತಿದೆ.

ಕೃಷಿ ವಿಜ್ಞಾನ ಕೇಂದ್ರದ ಪಾತ್ರವೂ ಇದರಲ್ಲಿ ಬಹು ದೊಡ್ಡದಿದೆ. ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯ ಆವರಣದಲ್ಲಿ ನಡೆಯುತ್ತಿರುವ ನಾಲ್ಕು ದಿನಗಳ ಕೃಷಿ ಮೇಳದ ಎರಡನೇ ದಿನವಾದ ಇಂದು ಕೃಷಿ ವಿಜ್ಞಾನ ಕೇಂದ್ರಕ್ಕೆ ಸಾವಿರಾರು ಮಂದಿ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.

ಕೃಷಿ ಮೇಳದಲ್ಲಿ ಗಮನ ಸೆಳೆಯುತ್ತಿದೆ ಕೃಷಿ ವಿಜ್ಞಾನ ಕೇಂದ್ರದ ಪ್ರಾತ್ಯಕ್ಷಿಕೆ..

ಜನರಿಗೆ ಅತ್ಯಂತ ಸರಳವಾಗಿ ಅರ್ಥವಾಗುವ ರೀತಿಯಲ್ಲಿ ಪ್ರಾತ್ಯಕ್ಷಿಕೆಗಳನ್ನು ರೂಪಿಸಿ ಇಡಲಾಗಿದೆ. ಬೆಳೆಗಳನ್ನು ಯಾವ ರೀತಿ ಹೇಗೆ ಬೆಳೆಸಬೇಕು ಎಂಬುದನ್ನು ವಿವರಿಸುವ ಕಾರ್ಯ ಮಾಡಲಾಗುತ್ತಿದೆ. ವಿಶೇಷವಾಗಿ ಇಲ್ಲಿ ಗಮನ ಸೆಳೆಯುವ ಅಂಶವೆಂದರೆ ಯಾವುದೇ ವಿಚಾರವನ್ನು ತಿಳಿಸಿಕೊಡುವ ಅಗತ್ಯ ಎದುರಾಗದ ರೀತಿ ಹತ್ತು ಹಲವು ವಿಧದ ಕೃಷಿ ಪದ್ಧತಿ, ಕೈಗೊಳ್ಳಬೇಕಾದ ಕ್ರಮಗಳ ವಿಸ್ತೃತ ಚಿತ್ರಣವನ್ನೇ ಸಿದ್ಧಪಡಿಸಿ ಇರಿಸಲಾಗಿದೆ.

ಬೆಂಗಳೂರು ಕೃಷಿ ವಿಜ್ಞಾನ ಕೇಂದ್ರದ (Agricultural University of Bangalore) ಮುಖ್ಯಸ್ಥ ಹಾಗೂ ಹಿರಿಯ ವಿಜ್ಞಾನಿ ಡಾ. ಮಲ್ಲಿಕಾರ್ಜುನ ಗೌಡ ಅವರ ನೇತೃತ್ವದಲ್ಲಿ ಈ ಕಾರ್ಯ ಮುಂದುವರೆಯುತ್ತಿದೆ. ಅವರೇ ನೀಡುವ ಮಾಹಿತಿ ಪ್ರಕಾರ, ಕೃಷಿ ವಿಶ್ವವಿದ್ಯಾಲಯದ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ವ್ಯಾಪ್ತಿಯಲ್ಲಿ ಏಳು ಕೃಷಿ ವಿಜ್ಞಾನ ಕೇಂದ್ರಗಳಿವೆ.

ಆಯಾ ಜಿಲ್ಲೆಯ ಕೃಷಿ ಮತ್ತು ಕೃಷಿ ಸಂಬಂಧಿತ ಜ್ಞಾನ ಮತ್ತು ಸಂಪನ್ಮೂಲ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತವೆ. ಕ್ಷೇತ್ರ ಪ್ರಾತ್ಯಕ್ಷಿಕೆ, ಮುಂಚೂಣಿ ಪ್ರಾತ್ಯಕ್ಷಿಕೆ, ಕ್ಷೇತ್ರ ಪ್ರಯೋಗಗಳು, ರೈತರು, ಮಹಿಳೆಯರು ಆಸಕ್ತರಿಗೆ ಅವಶ್ಯಕತೆಗೆ ಅನುಗುಣವಾಗಿ ತರಬೇತಿ, ವಿವಿಧ ಇಲಾಖೆಯ ವಿಸ್ತರಣಾ ಕಾರ್ಯಕರ್ತರಿಗೆ ತರಬೇತಿ ನೀಡುವುದು, ರೈತರಿಗೆ ಕಡಿಮೆ ದರದಲ್ಲಿ ಉತ್ತಮ ಬೀಜ, ಸಸಿಗಳನ್ನು ನೀಡುವುದು ನಮ್ಮ ಧ್ಯೇಯವಾಗಿದೆ.

2023ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವುದು ಕೇಂದ್ರ ಸರ್ಕಾರದ ಕನಸಾಗಿದೆ. ಇದಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನೇಕ ಯೋಜನೆಗಳನ್ನು ಜಾರಿಗೆ ತಂದಿವೆ.

ಈ ನಿಟ್ಟಿನಲ್ಲಿ ನಾವು ನಾಲ್ಕು ಅಂಶವನ್ನು ಪರಿಗಣಿಸಿ, ಇಳುವರಿ ಹೆಚ್ಚಳ, ವ್ಯವಸಾಯ ವೆಚ್ಚ ಕಡಿಮೆಗೊಳಿಸುವುದು, ಬೆಳೆ ವೈವಿದ್ಯತೆ ಪರಿಚಯ ಹಾಗೂ ಬೆಳೆದ ಬೆಳೆ ಹಾಗೂ ಉತ್ಪನ್ನದ ಮೌಲ್ಯವರ್ಧನೆ ಹಾಗೂ ಮಾರುಕಟ್ಟೆ ಜ್ಞಾನ ಹೇಗೆ ಹೆಚ್ಚಿಸಬೇಕೆಂಬ ನಿಟ್ಟಿನಲ್ಲಿ ಕಳೆದ ಮೂರು ವರ್ಷದಲ್ಲಿ ಕೆಲಸ ಮಾಡುತ್ತಿದ್ದೇವೆ.

ಈ ಸಾರಿಯ ಕೃಷಿ ಮೇಳದಲ್ಲಿ ನಾವು ಮಳಿಗೆಯಲ್ಲಿ ಎಲ್ಲಾ ನಾಲ್ಕು ಅಂಶಗಳ ಜ್ಞಾನವನ್ನು ವಿವರಿಸುವ ಕಾರ್ಯ ಮಾಡಿದ್ದೇವೆ. ಜನ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ ಎಂದು ವಿವರಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.