ETV Bharat / city

ಅನಿವಾರ್ಯ ಆದ್ರೆ ಲಾಕ್ ಡೌನ್, ನಮ್ಮಲ್ಲಿ ಸದ್ಯಕ್ಕೆ ಆ ಸ್ಥಿತಿ ಬಂದಿಲ್ಲ: ಆರಗ ಜ್ಞಾನೇಂದ್ರ

author img

By

Published : Jan 12, 2022, 12:38 PM IST

ಕೊರೊನಾ ಬಹಳ ವೇಗವಾಗಿ ಹಬ್ಬುತ್ತಿದೆ. ಲಾಕ್​ಡೌನ್ ಮಾಡಿದ್ರೆ ಬಹಳ ದೊಡ್ಡ ಹೊಡೆತ ಬೀಳುತ್ತದೆ. ಕಳೆದ ಬಾರಿ ಲಾಕ್​ಡೌನ್ ಮಾಡಿ ಎಷ್ಟು ಸಮಸ್ಯೆ ಅನುಭವಿಸಿದ್ದೇವೆ ಅಂತಾ ಗೊತ್ತಿದೆ. ಲಾಕ್​ಡೌನ್ ಕೊನೆಯ ಅವಕಾಶ, ಈ ವರೆಗೂ ಆ ಪರಿಸ್ಥಿತಿ ಬಂದಿಲ್ಲ. ಬೇರೆ ಬೇರೆ ರಾಜ್ಯಗಳಲ್ಲಿ ಈಗಾಗಲೇ ಲಾಕ್​ಡೌನ್ ಶುರುವಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ಆರಗ ಜ್ಞಾನೇಂದ್ರ
ಆರಗ ಜ್ಞಾನೇಂದ್ರ

ಬೆಂಗಳೂರು: ಲಾಕ್​ಡೌನ್ ಕೊನೆಯ ಅವಕಾಶ, ಲಾಕ್​ಡೌನ್ ಮಾಡಬಾರದು ಅಂತಾ ಬಹಳಷ್ಟು ಜನ ಗೋಳಾಡುತ್ತಿದ್ದಾರೆ. ಈವರೆಗೂ ಆ ಪರಿಸ್ಥಿತಿ ಬಂದಿಲ್ಲ. ಆದರೆ, ಪರಿಸ್ಥಿತಿ ಕೈ ಮೀರಿದ್ರೆ ಏನೂ ಮಾಡಲು ಸಾಧ್ಯವಿಲ್ಲ. ಜನರ ಪ್ರಾಣ ಮುಖ್ಯ, ಅನಿವಾರ್ಯ ಆದ್ರೆ ಲಾಕ್​ಡೌನ್ ಮಾಡಲಾಗುತ್ತದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಪಷ್ಟಪಡಿಸಿದ್ದಾರೆ.

ಅಧಿಕೃತ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ಬಹಳ ವೇಗವಾಗಿ ಹಬ್ಬುತ್ತಿದೆ. ಲಾಕ್​ಡೌನ್ ಮಾಡಿದರೆ ಬಹಳ ದೊಡ್ಡ ಹೊಡೆತ ಬೀಳುತ್ತದೆ. ಕಳೆದ ಬಾರಿ ಲಾಕ್​ಡೌನ್ ಮಾಡಿ ಎಷ್ಟು ಸಮಸ್ಯೆ ಅನುಭವಿಸಿದ್ದೇವೆ ಅಂತಾ ಗೊತ್ತಿದೆ. ಬೆಂಗಳೂರು ರಾಜ್ಯದಲ್ಲೇ ಹಾಟ್ ಸ್ಪಾಟ್ ಆಗಿದೆ. ಲಾಕ್​ಡೌನ್ ಕೊನೆಯ ಅವಕಾಶ, ಲಾಕ್​ಡೌನ್ ಮಾಡಬಾರದು ಅಂತಾ ಬಹಳಷ್ಟು ಜನ ಗೋಳಾಡುತ್ತಿದ್ದಾರೆ.

ಈ ವರೆಗೂ ಆ ಪರಿಸ್ಥಿತಿ ಬಂದಿಲ್ಲ. ಬೇರೆ ಬೇರೆ ರಾಜ್ಯಗಳಲ್ಲಿ ಈಗಾಗಲೇ ಲಾಕ್​ಡೌನ್ ಶುರುವಾಗಿದೆ. ಕಾಂಗ್ರೆಸ್ ಅಧಿಕಾರಲ್ಲಿರುವ ಜಾರ್ಖಂಡ್, ಪಂಜಾಬ್​ನಲ್ಲಿ ಲಾಕ್​ಡೌನ್ ಆಗುತ್ತಿದೆ. ನಮ್ಮಲ್ಲಿ ಆ ದಿನಗಳು ಬರದೇ ಇರಲಿ ಎಂದು ಹಾರೈಸೋಣ ಎಂದರು.

ಓದಿ: ಪಾದಯಾತ್ರೆಯಿಂದ ಸುಸ್ತಾಗಿದ್ದ ಸಿದ್ದರಾಮಯ್ಯ ಆರೋಗ್ಯ ವಿಚಾರಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ

ಕಾಂಗ್ರೆಸ್ ಪಾದಯಾತ್ರೆಗೆ ಬೆಂಗಳೂರಿನಲ್ಲಿ ಅವಕಾಶ ವಿಚಾರ ಕುರಿತು ಪ್ರತಿಕ್ರಿಯೆ ‌ನೀಡಿದ ಗೃಹ ಸಚಿವರು, ಜನರ ಶವದ ಮೇಲೆ ರಾಜಕಾರಣ ಮಾಡಬಾರದು ಎಂಬ ಪರಿಜ್ಞಾನ ಕಾಂಗ್ರೆಸ್​ನವರಿಗೆ ಇರಬೇಕು. ಪಾದಯಾತ್ರೆ ಬಳಿಕ ರಾಮನಗರ, ಮಂಡ್ಯ ಭಾಗದಲ್ಲಿ ಕೊರೊನಾ ಜಾಸ್ತಿ ಆಗಿದೆ. ಕೊರೊನಾ ಎಷ್ಟು ಜಾಸ್ತಿಯಾಗುತ್ತದೆ ಅಂತಾ ನೋಡಿಕೊಂಡು ಬೆಂಗಳೂರು ಪ್ರವೇಶಕ್ಕೆ ಅವಕಾಶ ನೀಡುವ ಬಗ್ಗೆ ನೋಡುತ್ತೇವೆ‌ ಎಂದರು.

ಕಾಂಗ್ರೆಸ್ ಸುಳ್ಳು ಹೇಳುತ್ತಿದೆ. ರೈತರಿಗೆ ನೀರು ಕೊಡುತ್ತೇವೆ ಎಂದು ಭಾಷಣ ಮಾಡುತ್ತಿದ್ದಾರೆ. ಇವರು ಸುಳ್ಳು ಹೇಳಿ ರೈತರನ್ನು ರ‍್ಯಾಲಿಗೆ ಕರೆ ತರುತ್ತಿದ್ದಾರೆ. ಪಾದಯಾತ್ರೆ ಕ್ಲಿಪಿಂಗ್ ಸುಪ್ರೀಂಗೆ ಸಿಕ್ಕರೆ ಮತ್ತೆ ತೊಂದರೆ ಆಗುತ್ತದೆ. ಹೀಗಾಗಿ ಈ ರೀತಿ ಸುಳ್ಳು ಹೇಳಬಾರದು, ಈ ಯೋಜನೆ ಜಾರಿ ಆಗಬಾರದು ಅಂತ ಕಾಂಗ್ರೆಸ್​ನವರು ಹೀಗೆ ಹೇಳುತ್ತಿದ್ದಾರೆ. ಇವರು ಈ ಯೋಜನೆಗೆ ಅಸಮರ್ಥರು ಎಂದರು.

ಓದಿ: ಪಾದಯಾತ್ರೆ ಕೈಬಿಡಿ, ಜನತೆ ಬಳಿ ಕ್ಷಮೆ ಕೇಳಿ: ಕೈ ನಾಯಕರಿಗೆ ಆರಗ ಜ್ಞಾನೇಂದ್ರ ಆಗ್ರಹ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.