ETV Bharat / city

ACB ದಾಳಿ ಬಳಿಕ BDA ವಿರುದ್ಧ ಸಾಲು ಸಾಲು ದೂರುಗಳು.. ಬಯಲಾಗುತ್ತಾ ಬಿಡಿಎ ಬ್ರಹ್ಮಾಂಡ ಭ್ರಷ್ಟಾಚಾರ!?

author img

By

Published : Nov 22, 2021, 2:59 PM IST

ಎರಡು ದಿನಗಳ ಸರ್ಕಾರಿ ರಜೆಯ ಬಳಿಕ ನಾಳೆಯಿಂದ ಮತ್ತೆ ಬಿಡಿಎ (BDA) ಕಚೇರಿಯಲ್ಲಿ ಎಸಿಬಿ ಅಧಿಕಾರಿಗಳು ಶೋಧ ಕಾರ್ಯ ಮುಂದುವರೆಸಲಿದ್ದಾರೆ. ಅಲ್ಲದೇ ಯಾವುದಾದರೊಂದು ಕಡತದಲ್ಲಿ ಅಕ್ರಮ ಕಂಡು ಬಂದರೂ ಅದಕ್ಕೆ ಪ್ರತ್ಯೇಕ ಎಫ್​ಐಆರ್​ ದಾಖಲಿಸಲು ಅಧಿಕಾರಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ. ಎಸಿಬಿ ದಾಳಿ (ACB Raid) ಬಳಿಕ ಬಿಡಿಎ ವಿರುದ್ಧ ಸಾಲು ಸಾಲು ದೂರುಗಳು ಬರುತ್ತಿವೆ. ಉದ್ಯಮಿಗಳು, ಸಾರ್ವಜನಿಕರು, ಬಿಡಿಎ ಸೈಟ್ ವಂಚಿತರು ದಾಖಲೆಗಳ ಸಹಿತ ದೂರು ನೀಡಲು ಶುರು ಮಾಡಿದ್ದಾರಂತೆ..

ACB raid on BDA office, ಬಿಡಿಎ ಮೇಲೆ ಎಸಿಬಿ ದಾಳಿ
ACB ದಾಳಿ ಬಳಿಕ BDA ವಿರುದ್ಧ ಸಾಲು ಸಾಲು ದೂರುಗಳು

ಬೆಂಗಳೂರು : ಬಿಡಿಎ ಕೇಂದ್ರ ಕಚೇರಿ ಮೇಲೆ ದಾಳಿ ಮಾಡಿ (ACB raid on BDA office) ನೂರಾರು ಕೋಟಿ ಅಕ್ರಮ ಅವ್ಯವಹಾರ ಬಯಲಿಗೆಳೆದಿರುವ ಭ್ರಷ್ಟಾಚಾರ ‌ನಿಗ್ರಹ ದಳ (ACB) ಅಧಿಕಾರಿಗಳು ಎರಡು ದಿನಗಳ ಸರ್ಕಾರಿ ರಜೆ ಬಳಿಕ ನಾಳೆಯು (ನ.23) ಕಚೇರಿಯಲ್ಲಿ ದಾಳಿ ಮುಂದುವರೆಸಿ ಪರಿಶೀಲನೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ‌.

ಎಸಿಬಿ ಅಧಿಕಾರಿಗಳ ಬಳಿಯೇ ಇರುವ ಬಿಡಿಎ ಕಚೇರಿ ಬೀಗದ ಕೈ : ಎರಡು ದಿನಗಳ ಸರ್ಕಾರಿ ರಜೆ ಹಿನ್ನೆಲೆ ಬಿಡಿಎ ಕಚೇರಿಯ (BDA Office) ಬೀಗದ ಕೈ ಸಹ ತಮ್ಮ ವಶದಲ್ಲಿ‌ ಎಸಿಬಿ ಅಧಿಕಾರಿಗಳು ಇಟ್ಟುಕೊಂಡಿದ್ದಾರೆ.

ನ.25ರವರೆಗೆ ನ್ಯಾಯಾಲಯದಿಂದ ಸರ್ಚ್ ವಾರೆಂಟ್ (Search Warrent) ಪಡೆದಿರುವ ಎಸಿಬಿ ನಾಳೆಯು ಸಹ ಬಿಡಿಎ ಕಚೇರಿಯಲ್ಲಿ ಪರಿಶೀಲನೆ ನಡೆಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಅಗತ್ಯಬಿದ್ದರೆ ಮತ್ತೆ ಸರ್ಚ್ ವಾರೆಂಟ್ ಪಡೆದು ಹೆಚ್ಚು ದಿನಗಳನ್ನು ನೀಡುವಂತೆ ಕೋರ್ಟ್​ಗೆ ಮನವಿ ಮಾಡುವ ಸಾಧ್ಯತೆಯಿದೆ ಎಂದು ಸಹ ಹೇಳಲಾಗುತ್ತಿದೆ.

ನಾಳೆ ಬೆಳಗ್ಗೆಯಿಂದ ಮತ್ತೆ ಶೋಧ ಕಾರ್ಯ ಆರಂಭ : ಮೂವರು ಎಸ್ಪಿಗಳ ನೇತೃತ್ವದಲ್ಲಿ ಶೋಧ ಕಾರ್ಯ ನಡೆಯುತ್ತಿದೆ. ನಾಳೆ ಬೆಳಗ್ಗೆಯಿಂದ ಮತ್ತೆ ಶೋಧ ಕಾರ್ಯ ಆರಂಭವಾಗಲಿದೆ. ಬಿಡಿಎ ಕಚೇರಿಯಲ್ಲಿರುವ ನಾಲ್ಕೈದು ವರ್ಷಗಳ ಹಿಂದಿನ ಫೈಲ್​ಗಳನ್ನು ಕೂಡ ಎಸಿಬಿ ಅಧಿಕಾರಿಗಳು ಕೂಲಂಕಷವಾಗಿ ಪರಿಶೀಲಿಸುತ್ತಿದ್ದಾರೆ.

ಯಾವುದೊಂದಾದರೂ ಕಡತದಲ್ಲಿ ಅಕ್ರಮ ಕಂಡು ಬಂದರೂ ಅದಕ್ಕೆ ಪ್ರತ್ಯೇಕ ಎಫ್​ಐಆರ್​ (FIR) ದಾಖಲಿಸಲು ಅಧಿಕಾರಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ. ಅಕ್ರಮವಾಗಿರುವ ಒಂದೊಂದು ಫೈಲ್​ಗೂ ಒಂದೊಂದು ಎಫ್​ಐಆರ್ ಅಂದರೆ ಅಂದಾಜು 40-50ಕ್ಕೂ ಹೆಚ್ಚು ಎಫ್​ಐಆರ್ ದಾಖಲಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

30ಕ್ಕೂ ಹೆಚ್ಚು ಹೊಸ ದೂರುಗಳು ದಾಖಲು : ಎಸಿಬಿ ದಾಳಿ ಬಳಿಕ ಬಿಡಿಎ ವಿರುದ್ಧ ಸಾಲು ಸಾಲು ದೂರುಗಳು ಬರುತ್ತಿವೆ. ಉದ್ಯಮಿಗಳು, ಸಾರ್ವಜನಿಕರು, ಬಿಡಿಎ ಸೈಟ್ ವಂಚಿತರು ದಾಖಲೆಗಳ ಸಹಿತ ದೂರು ನೀಡಲು ಶುರು ಮಾಡಿದ್ದಾರಂತೆ.

ಈವರೆಗೆ ಎಸಿಬಿಗೆ ಹೊಸದಾಗಿ 30ಕ್ಕೂ ಹೆಚ್ಚು ದೂರುಗಳು ಬಂದಿವೆ. ಪ್ರತಿಯೊಂದು ದೂರನ್ನು ಪರಿಶೀಲಿಸಿ ಸಾಕ್ಷಿ ಕಲೆ ಹಾಕಿ ಕೇಸ್ ದಾಖಲು ಮಾಡಲು ಎಸಿಬಿ ನಿರ್ಧಾರ ಮಾಡಿರುವುದಾಗಿ ತಿಳಿದು ಬಂದಿದೆ.

ಓದಿ: ACB Raid : ಬಿಡಿಎ ಕಚೇರಿ ಮೇಲೆ 40ಕ್ಕೂ ಹೆಚ್ಚು ಅಧಿಕಾರಿಗಳಿಂದ ದಾಳಿ, ಕಡತಗಳ ಪರಿಶೀಲನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.