ETV Bharat / city

ಎರಡು ದಿನಗಳ ACB ದಾಳಿ ಅಂತ್ಯ.. ಬಯಲಾದ BDA ನೂರಾರು ಕೋಟಿ ಕರ್ಮಕಾಂಡ..

author img

By

Published : Nov 20, 2021, 8:43 PM IST

ಕಳೆದ ಎರಡು ದಿನಗಳಿಂದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಭ್ರಷ್ಟಾಚಾರ ನಿಗ್ರಹ ದಳ (ACB) ನಡೆಸಿ ದಾಳಿಯಲ್ಲಿ ನೂರಾರು ಕೋಟಿ ಅಕ್ರಮ ಎಸಗಿರುವ ದಾಖಲೆಗಳು ಪತ್ತೆಯಾಗಿವೆ..

ACB attack on BDA office
ಬಿಡಿಎ ಕಚೇರಿ ಮೇಲೆ ಎಸಿಬಿ ದಾಳಿ

ಬೆಂಗಳೂರು : ಕಳೆದ ಎರಡು ದಿನಗಳಿಂದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಭ್ರಷ್ಟಾಚಾರ ನಿಗ್ರಹ ದಳ (ACB) ನಡೆಸಿದ ದಾಳಿಯಲ್ಲಿ ನೂರಾರು ಕೋಟಿ ಅಕ್ರಮ ಎಸಗಿರುವ ದಾಖಲೆಗಳು ಪತ್ತೆಯಾಗಿವೆ. ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿ ದಾಳಿ ವೇಳೆಯಲ್ಲಿ ಪತ್ತೆಯಾದ ಅಕ್ರಮಗಳ ಕುರಿತು ಮಾಹಿತಿ ನೀಡಿದೆ ಎಸಿಬಿ.

ಭ್ರಷ್ಟಾಚಾರ ನಿಗ್ರಹ ದಳದ ದಾಳಿ ವೇಳೆ ಪತ್ತೆಯಾದ ಅಕ್ರಮಗಳು :

  1. ಅರ್ಕಾವತಿ ಬಡಾವಣೆ, ಕೆಂಪೇಗೌಡ ಬಡಾವಣೆ, ವಿಶ್ವೇಶ್ವರಯ್ಯ ಬಡಾವಣೆ 75 ಕೋಟಿ ರೂ. ಬೆಲೆ ಬಾಳುವ 6 ನಿವೇಶನಗಳನ್ನ ಸುಳ್ಳು ಮಾಹಿತಿ ನೀಡಿ ನಕಲಿ ದಾಖಲೆ ಸೃಷ್ಟಿ.
  2. ಕೆಂಗೇರಿ ಹೋಬಳಿಯಲ್ಲಿ ಉಲ್ಲಾಳ ಗ್ರಾಮದಲ್ಲಿ 1.5 ಕೋಟಿ ರೂ. ಮೌಲ್ಯದ ಅಕ್ರಮ ನಿವೇಶನಗಳು ಮಂಜೂರು.
  3. ಸ್ಯಾಟ್‌ಲೈಟ್ ಟೌನ್ ಬಳಿ 80 ಲಕ್ಷ ರೂ. ಮೌಲ್ಯದ ನಿವೇಶನ ಅಕ್ರಮವಾಗಿ ಮಂಜೂರು ಮಾಡಿದ್ದು.
  4. ಚಂದ್ರಾಲೇಔಟ್‌ನಲ್ಲಿ 2400 ಚದರ ಅಡಿಯ 5 ಕೋಟಿ ರೂ. ಮೌಲ್ಯದ ನಿವೇಶನ ಅಕ್ರಮ.
  5. ಕೆಂಪೇಗೌಡ ಲೇಔಟ್‌ನಲ್ಲಿ 30 ಲಕ್ಷ ರೂ. ಮೌಲ್ಯದ ಅಕ್ರಮ ನಿವೇಶನ ಕೊಟ್ಟಿರುವುದು.
  6. ಒಂದು ನಿವೇಶನವನ್ನು ಒಂದಕ್ಕಿಂತ ಹೆಚ್ಚು ವ್ಯಕ್ತಿಗಳಿಗೆ ನೋಂದಣಿ.
  7. ವಿಶ್ವೇಶ್ವರಯ್ಯ ಲೇಔಟ್‌ನಲ್ಲಿ 52 ಲಕ್ಷ ರೂ. ಮೌಲ್ಯದ ನಿವೇಶನದ ಅಕ್ರಮ
  8. ಅರ್ಕಾವತಿ ಲೇಔಟ್‌ನಲ್ಲಿ ಫಲಾನುಭವಿಗಳಿಗಲ್ಲದೆ ಬೇರೆಯವರಿಗೆ ನಿವೇಶನ.
  9. ಕೆಂಪೇಗೌಡ ಲೇಔಟ್, ಶಿವರಾಮ ಕಾರಂತ ಲೇಔಟ್ ಮೊದಲಾದ ಕಡೆ ಅಧಿಕಾರಿಗಳು ಮತ್ತು ಮಧ್ಯವರ್ತಿಗಳೊಂದಿಗೆ ಅಕ್ರಮವಾಗಿ ಸೈಟ್ ಗಳು.
  10. ಕೋಟ್ಯಂತರ ಮೌಲ್ಯದ ಪರಿಹಾರ ಧನ ಫಲಾನುಭವಿ ವ್ಯಕ್ತಿಗಳಿಗೆ ನೀಡದೆ ಬೇರೆಯವರಿಗೆ ನೀಡಿರುವುದು.
  11. ಅಂಜನಾಪುರ ಬಡಾವಣೆಯಲ್ಲಿ ಮೂಲ ಮಾಲೀಕನಿಗಲ್ಲದೆ ಬೇರೆಯವರಿಗೆ ನಿವೇಶನ ನೀಡಿರುವ ದಾಖಲೆ ಪತ್ತೆ.
  12. ಅರ್ಕಾವತಿ ಲೇಔಟ್ ಸೇರಿದಂತೆ ಇತರೆ ಕಡೆ ಅರ್ಜಿದಾರರಿಂದ ಹಣ ಪಡೆದು ನಿವೇಶನ ನೀಡದೆ ಅಧಿಕಾರಿಗಳಿಂದ ತೊಂದರೆ.
  13. ಅರ್ಜಿದಾರರಿಗೆ ನಿವೇಶನ ಹಂಚಿಕೆ ಪತ್ರ ನೀಡದೆ ವಿಳಂಬ ಪತ್ತೆ.

ಸದ್ಯ ಎಲ್ಲಾ ದಾಖಲಾತಿಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದು, ಕಚೇರಿಗೆ ಕೊಂಡೊಯ್ದಿದ್ದಾರೆ. ಎಸಿಬಿ ಅಧಿಕಾರಿಗಳು ಅಕ್ರಮ ಎಸಗಿರುವ ಬಿಡಿಎ ಅಧಿಕಾರಿಗಳು, ಸಿಬ್ಬಂದಿ ಮತ್ತು ಮಧ್ಯವರ್ತಿಗಳ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ಸೂಕ್ತ ಕಾನೂನು ಕ್ರಮ ಜರುಗಿಸಲು ಸಿದ್ಧತೆ ನಡೆಸುತ್ತಿದೆ. ಎರಡು ದಿನದ ದಾಳಿ ಅಂತ್ಯಗೊಂಡಿದ್ದು, ಅವಶ್ಯಕತೆ ಕಂಡು ಬಂದಲ್ಲಿ ಮಂಗಳವಾರವೂ ಶೋಧ ಕಾರ್ಯ ಮುಂದುವರೆಸುವುದಾಗಿ ಎಸಿಬಿ ಪ್ರಕಟಣೆಯಲ್ಲಿ ತಿಳಿಸಿದೆ.

ಓದಿ: ACB Raid : ಬಿಡಿಎ ಕಚೇರಿ ಮೇಲೆ 40ಕ್ಕೂ ಹೆಚ್ಚು ಅಧಿಕಾರಿಗಳಿಂದ ದಾಳಿ, ಕಡತಗಳ ಪರಿಶೀಲನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.