ETV Bharat / city

Omicron: ಕರ್ನಾಟಕದಲ್ಲಿ ಮತ್ತೆ 5 ಒಮಿಕ್ರಾನ್ ಪತ್ತೆ, ಬೆಳಗಾವಿಯಲ್ಲೂ ಕಂಡುಬಂತು ಹೊಸ ರೂಪಾಂತರಿ!

author img

By

Published : Dec 16, 2021, 8:59 PM IST

Updated : Dec 16, 2021, 10:22 PM IST

ಕರ್ನಾಟಕದಲ್ಲಿ ಇಂದು 5 ಒಮಿಕ್ರಾನ್ ಪ್ರಕರಣಗಳು ಕಂಡುಬಂದಿದ್ದು, ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 8ಕ್ಕೆ ಏರಿದೆ.

Omicron in karnataka,ಕರ್ನಾಟಕದಲ್ಲಿ ಒಮಿಕ್ರಾನ್
Omicron

ಬೆಂಗಳೂರು: ರಾಜ್ಯದಲ್ಲಿ ಒಮಿಕ್ರಾನ್ ರೂಪಾಂತರಿ ನಿಧಾನವಾಗಿ ಆವರಿಸುತ್ತಿದ್ದು, ಇಂದು ಮತ್ತೆ 5 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಈ ಮೂಲಕ ರಾಜ್ಯದಲ್ಲಿ ಒಮಿಕ್ರಾನ್ ಸೋಂಕಿತರ ಸಂಖ್ಯೆ 8ಕ್ಕೆ ಏರಿಕೆ ಆಗಿದೆ.

ಯುಕೆಯಿಂದ ಬಂದಿದ್ದ 19 ವರ್ಷದ ಯುವಕನಲ್ಲಿ, ದೆಹಲಿಯಿಂದ ವಾಪಸಾಗಿರುವ 36 ವರ್ಷ ವಯಸ್ಸಿನ ವ್ಯಕ್ತಿಗೆ, 70 ವರ್ಷ ವಯಸ್ಸಿನ ವೃದ್ಧೆಗೆ ಸೋಂಕು ತಗುಲಿದೆ. ಹಾಗೆಯೇ ನೈಜಿರಿಯಾದಿಂದ ಬಂದಿರುವ 52 ವರ್ಷದ ವ್ಯಕ್ತಿ ಹಾಗೂ ದಕ್ಷಿಣ ಆಫ್ರಿಕಾದಿಂದ ಬಂದಿರುವ 33 ವರ್ಷದ ವ್ಯಕ್ತಿಗೆ ಹೊರ ರೂಪಾಂತರಿ ಕಾಣಿಸಿಕೊಂಡಿದೆ.

ಸದ್ಯ ಎಲ್ಲರೂ ಸರ್ಕಾರ ಸೂಚಿಸಿರುವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಹೊಸ ಸೋಂಕಿತರ ಕುರಿತು ಆರೋಗ್ಯ ಸಚಿವ ಸುಧಾಕರ್ ಟೀಟ್ವ್ ಮಾಡಿ, ಮಾಹಿತಿ ನೀಡಿದ್ದಾರೆ.

  • Five more cases of #Omicron have been detected in Karnataka today:

    🔹19 yr male returning from UK
    🔹36 yr male returning from Delhi
    🔹70 yr female returning from Delhi
    🔹52 yr male returning from Nigeria
    🔹33 yr male returning from South Africa @BSBommai #Omicronindia

    — Dr Sudhakar K (@mla_sudhakar) December 16, 2021 " class="align-text-top noRightClick twitterSection" data=" ">

ನೈಜಾರಿಯಾದಿಂದ ಕುಂದಾನಗರಿಗೆ ಬಂದಿದ್ದ ವ್ಯಕ್ತಿಗೆ ಸೋಕು ದೃಢ:

ನೈಜೇರಿಯಾದಿಂದ ಬೆಳಗಾವಿಗೆ ಬಂದಿದ್ದ 52 ವರ್ಷದ ವ್ಯಕ್ತಿಗೆ ಒಮಿಕ್ರಾನ್ ದೃಢಪಟ್ಟಿದೆ. ಡಿಸೆಂಬರ್ 13ರಂದು ನೈಜೇರಿಯಾದಿಂದ ಈ ಸೋಂಕಿತ ವ್ಯಕ್ತಿ ಬೆಳಗಾವಿಗೆ ಬಂದಿದ್ದರು. RT-PCR ಟೆಸ್ಟ್ ವೇಳೆ 52 ವರ್ಷದ ವ್ಯಕ್ತಿಗೆ ಕೋವಿಡ್ ಸೋಂಕು ದೃಢಪಟ್ಟಿತ್ತು. ಜಿನೋಮ್ ಸಿಕ್ವೆನ್ಸಿಂಗ್ ವರದಿಯಲ್ಲಿ ಒಮಿಕ್ರಾನ್ ದೃಢವಾಗಿದೆ. ಒಮಿಕ್ರಾನ್ ಸೋಂಕಿತನ ಪ್ರಾಥಮಿಕ ಸಂಪರ್ಕದಲ್ಲಿ 10 ಜನರಿದ್ದರು. ಆರೋಗ್ಯ ಇಲಾಖೆ ಸಿಬ್ಬಂದಿ ಹತ್ತು ಜನರ ಥ್ರೋಟ್ ಸ್ವ್ಯಾಬ್ ಪಡೆದು ಪ್ರಯೋಗಾಲಯಕ್ಕೆ ರವಾನಿಸಿದ್ದಾರೆ. ಒಮಿಕ್ರಾನ್ ಸೋಂಕಿತನಿಗೆ ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇಡೀ ಸರ್ಕಾರವೇ ಬೆಳಗಾವಿಯಲ್ಲಿದೆ. ಒಮ್ರಿಕಾನ್ ಪತ್ತೆ ಜಿಲ್ಲೆಯ ಜನರ‌ ಜೊತೆಗೆ ಸರ್ಕಾರವನ್ನು ಆತಂಕಕ್ಕೆ ‌ದೂಡಿದೆ.

(ಇದನ್ನೂ ಓದಿ: ಬೀದಿ ಶ್ವಾನಗಳಿಗೆ ಮಹಾ ತಾಯಿಯಾದರು ಮಂಗಳೂರಿನ ಈ ಮಹಿಳೆ: ನಿತ್ಯ 800 ನಾಯಿಗಳಿಗೆ 2 ಕ್ವಿಂಟಾಲ್‌ ಆಹಾರ !)

Last Updated : Dec 16, 2021, 10:22 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.