ETV Bharat / city

ಇಂದು ಜಯದೇವದಲ್ಲಿ ಉದ್ಘಾಟನೆಯಾಗಲಿದೆ 350 ಬೆಡ್‌ ಸಾಮರ್ಥ್ಯದ ನೂತನ ಕಟ್ಟಡ

author img

By

Published : Nov 17, 2021, 9:24 AM IST

ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆ (Jayadeva hospital ) ಆವರಣದಲ್ಲಿ ಇನ್ಫೋಸಿಸ್‌ ಫೌಂಡೇಶನ್‌ (Infosys Foundation) ವತಿಯಿಂದ ನಿರ್ಮಾಣಗೊಂಡಿರುವ ನೂತನ ಕಟ್ಟಡವನ್ನು ಸಿಎಂ ಬಸವರಾಜ ಬೊಮ್ಮಾಯಿ (Karnataka Chief Minister Basavaraj Bommai) ಉದ್ಘಾಟನೆ ಮಾಡಲಿದ್ದಾರೆ.

Jayadeva
Jayadeva

ಬೆಂಗಳೂರು: ಇನ್ಫೋಸಿಸ್ ಫೌಂಡೇಶನ್ (Infosys Foundation) ವತಿಯಿಂದ ಜಯದೇವ ಹೃದ್ರೋಗ ಆಸ್ಪತ್ರೆಯ (Jayadeva hospital ) ಆವರಣದಲ್ಲಿ ನಿರ್ಮಾಣವಾಗಿರುವ 350 ಹಾಸಿಗೆಗಳ ಸಾಮರ್ಥ್ಯದ ನೂತನ ಕಟ್ಟಡ (ಇನ್ಫೋಸಿಸ್‌ ಬ್ಲಾಕ್‌) ಅನ್ನು ಇಂದು ಸಿಎಂ ಬಸವರಾಜ ಬೊಮ್ಮಾಯಿ (Karnataka Chief Minister Basavaraj Bommai) ಉದ್ಘಾಟನೆ ಮಾಡಲಿದ್ದಾರೆ.

ಹೊಸ ಕಟ್ಟಡವನ್ನು 103 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಈ ಮೂಲಕ ಜಯದೇವ, ದಕ್ಷಿಣ ಏಷ್ಯಾದ ಅತಿ ದೊಡ್ಡ ಹೃದ್ರೋಗ ಆಸ್ಪತ್ರೆಯಾಗಿ ಹೊರಹೊಮ್ಮಲಿದೆ. ಹೃದಯದ ಚಿಕಿತ್ಸೆಯ ತುರ್ತು ಸ್ಥಿತಿಗಳು ಮತ್ತು ಹೃದಯ ಆರೈಕೆಗಾಗಿ ನಿತ್ಯ ಹೆಚ್ಚುತ್ತಿರುವ ಪ್ರಕರಣಗಳನ್ನು ನಿರ್ವಹಿಸಲು ಈ ನೂತನ ಕಟ್ಟಡ ನೆರವಾಗಲಿದೆ.

ಇದನ್ನೂ ಓದಿ: ಸೂಸೈಡ್ ಬಾಂಬರ್​ಗಳ ದಾಳಿಗೆ 3 ಸಾವು: ದಾಳಿ ಹೊಣೆ ಹೊತ್ತ ಐಸಿಸ್

ಜಯದೇವ ಆಸ್ಪತ್ರೆಗೆ ಇನ್ಫೋಸಿಸ್​ನ ನಾರಾಯಣ ಮೂರ್ತಿ ಹಾಗೂ ಸುಧಾಮೂರ್ತಿ ಭೇಟಿ ನೀಡಿದ್ದ ವೇಳೆ, ನಮಗೆ ಕಟ್ಟಡದ ಕೊರತೆ ಇದೆ, ಕಡಿಮೆ ದರದಲ್ಲಿ ಹೆಚ್ಚು ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ. 200 ಹಾಸಿಗೆ ಸಾಮರ್ಥ್ಯದ ಕಟ್ಟಡ ನಿರ್ಮಿಸಿ ಕೊಡಿ ಎಂದು ಜಯದೇವ ಸಂಸ್ಥೆಯವರು ಮನವಿ ಮಾಡಿದ್ದರು. ನಂತರ 350 ಸಾಮರ್ಥ್ಯದ ಹಾಸಿಗೆಗಳ ಆಸ್ಪತ್ರೆ ನಿರ್ಮಿಸಿ ಕೊಡುವುದಾಗಿ ಸುಧಾಮೂರ್ತಿ ಹೇಳಿದ್ದರಂತೆ. ಅದರಂತೆ ಕಟ್ಟಡ ನಿರ್ಮಾಣವಾಗಿದ್ದು, ಇಂದು ಲೋಕಾರ್ಪಣೆಯಾಗಲಿದೆ.

ಇದನ್ನೂ ಓದಿ: ಸೇತುವೆ ಕೊರತೆ: ಭಯದಲ್ಲೇ ಮೃತದೇಹ ಹೊತ್ತು ನದಿ ದಾಟಿದ ಗ್ರಾಮಸ್ಥರು

ಇನ್ನು ಈ ನೂತನ ಸಂಕೀರ್ಣದಲ್ಲಿ ಒಟ್ಟು 100 ಐಸಿಯು ಬೆಡ್​ಗಳಿದ್ದು, 250 ಜನರಲ್ ವಾರ್ಡ್ ಬೆಡ್, 2 ಒಟಿ, 1 ಹೈಬ್ರಿಡ್ ಒಟಿ( OT), 2 ಕಾರ್ಡಿಕಲ್ ಕ್ಯಾಥ್ ಲ್ಯಾಬ್‌ಗಳು ಕಾರ್ಯ ನಿರ್ವಹಿಸಲಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.