ETV Bharat / city

ಗಾಂಜಾ ನಶೆಯಲ್ಲಿ ವಾಹನಗಳ ಗಾಜು ಪುಡಿ ಮಾಡಿದ ಪುಂಡರು: ಸಿಸಿ ಕ್ಯಾಮರಾದಲ್ಲಿ ದುಷ್ಕೃತ್ಯ ಸೆರೆ

author img

By

Published : Jul 22, 2021, 12:01 PM IST

ರಾಜಧಾನಿಯಲ್ಲಿ ಇತ್ತಿಚೇಗೆ ಪುಂಡರ ಕಾಟ ಹೆಚ್ಚಾಗಿದ್ದು, ಗಾಂಜಾದ ನಶೆಯಲ್ಲಿ ಇದ್ದ ಮೂವರು ಕಿಡಿಗೇಡಿಗಳು ಮನೆಮುಂದೆ ನಿಲ್ಲಿಸಿರುವ ವಾಹನಗಳ ಮೇಲೆ ಅಟ್ಟಹಾಸ ಮೆರೆದು ಸ್ಥಳದಿಂದ ಎಸ್ಕೇಪ್​ ಆಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

3 accused broken 5 vehicle glass
ವಾಹನಗಳ ಗಾಜು ಪುಡಿ ಮಾಡಿದ ಪುಂಡರು

ಬೆಂಗಳೂರು: ನಗರದಲ್ಲಿ ಪುಂಡರು ರಾತ್ರೋರಾತ್ರಿ ಅಟ್ಟಹಾಸ ಮೆರೆದಿದ್ದಾರೆ. ಗಾಂಜಾ ನಶೆಯಲ್ಲಿದ್ದ ಮೂವರು ಪುಂಡರು ವಾಹನಗಳ ಗಾಜುಗಳನ್ನು ಪುಡಿ ಮಾಡಿ ಪರಾರಿಯಾಗಿರುವ ಘಟನೆ ವಿಜಯನಗರದ ಆರ್.ಪಿ.ಸಿ ಲೇಔಟ್​ನಲ್ಲಿ ತಡರಾತ್ರಿ ನಡೆದಿದೆ.

ವಿಜಯನಗರದ RPC ಲೇಔಟ್​ನವರೇ ಆದ ಈ ಮೂವರು, ರಸ್ತೆ ಬದಿ ಸಾಲಾಗಿ ನಿಲ್ಲಿಸಿದ್ದ ಐದಕ್ಕೂ ಹೆಚ್ಚು ವಾಹನಗಳ ಗ್ಲಾಸ್ ಪುಡಿ ಪುಡಿ ಮಾಡಿದ್ದಾರೆ. ಏರಿಯಾದಲ್ಲಿದ್ದ ಸಿಸಿಟಿವಿಯಲ್ಲಿ ಪುಂಡರ ದುಷ್ಕೃತ್ಯ ಸೆರೆಯಾಗಿದೆ.

ವಾಹನಗಳ ಗಾಜು ಪುಡಿ ಮಾಡಿದ ಪುಂಡರು

ಈ ಕುರಿತು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ವಿಜಯನಗರ ಪೊಲೀಸರು, ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದು ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ. ವಿಜಯನಗರ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.