ETV Bharat / city

ಪಿಎಂ ಸ್ವನಿಧಿ ಯೋಜನೆಯಡಿ ಕಿರು ಸಾಲ ಶಿಬಿರ: ಬೀದಿ ಬದಿ ವ್ಯಾಪಾರಿಗಳಿಗೆ 10 ಸಾವಿರ ರೂ. ವಿತರಣೆ

author img

By

Published : Feb 28, 2021, 7:21 AM IST

ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಬೀದಿ ಬದಿ ವ್ಯಾಪಾರಿಗಳಿಗೆ ಸ್ವಾವಲಂಬಿ ಬದುಕು ಕಟ್ಟಲು ನೆರವಾಗುವ ಉದ್ದೇಶದಿಂದ 10 ಸಾವಿರ ರೂ. ಕಿರು ಸಾಲ ನೀಡಲಾಗುತ್ತಿದೆ. ಈ ದಿಶೆಯಲ್ಲಿ ಪಾಲಿಕೆ ಕೇಂದ್ರ ಕಚೇರಿ ಹಾಗೂ ಪಾಲಿಕೆಯ 8 ವಲಯಗಳಿಂದ ಅರ್ಜಿ ಸಲ್ಲಿಸಿದ ಬೀದಿ ಬದಿ ವ್ಯಾಪಾರಿಗಳಿಗೆ ತ್ವರಿತವಾಗಿ ಕಿರು ಸಾಲ ಸಿಗುವಂತೆ ಮಾಡಲು ಪಾಲಿಕೆ ವತಿಯಿಂದ ಶಿಬಿರಗಳನ್ನು ಏರ್ಪಡಿಸಲಾಗಿತ್ತು.

Short Loan Camp under PM Swanidhi Scheme
ಪಿಎಂ ಸ್ವನಿಧಿ ಯೋಜನೆಯಡಿ ಕಿರು ಸಾಲ ಶಿಬಿರ

ಬೆಂಗಳೂರು: ಪಿಎಂ ‌ಸ್ವನಿಧಿ ಯೋಜನೆಯಡಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯ ಬೀದಿ ಬದಿ ವ್ಯಾಪಾರಿಗಳಿಗೆ ಸ್ವಾವಲಂಬಿ ಬದುಕು ಕಟ್ಟಲು ನೆರವಾಗುವ ಉದ್ದೇಶದಿಂದ 10 ಸಾವಿರ ರೂ. ಕಿರು ಸಾಲ ವಿತರಣಾ ಶಿಬಿರವನ್ನು ಶನಿವಾರ ಆಯೋಜಿಸಲಾಗಿತ್ತು.

ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಬೀದಿ ಬದಿ ವ್ಯಾಪಾರಿಗಳಿಗೆ ಸ್ವಾವಲಂಬಿ ಬದುಕು ಕಟ್ಟಲು ನೆರವಾಗುವ ಉದ್ದೇಶದಿಂದ 10 ಸಾವಿರ ರೂ. ಕಿರು ಸಾಲ ನೀಡಲಾಗುತ್ತಿದೆ. ಈ ದಿಶೆಯಲ್ಲಿ ಪಾಲಿಕೆ ಕೇಂದ್ರ ಕಚೇರಿ ಹಾಗೂ ಪಾಲಿಕೆಯ 8 ವಲಯಗಳಿಂದ ಅರ್ಜಿ ಸಲ್ಲಿಸಿದ ಬೀದಿ ಬದಿ ವ್ಯಾಪಾರಿಗಳಿಗೆ ತ್ವರಿತವಾಗಿ ಕಿರು ಸಾಲ ಸಿಗುವಂತೆ ಮಾಡಲು ಪಾಲಿಕೆ ವತಿಯಿಂದ ಶಿಬಿರಗಳನ್ನು ಏರ್ಪಡಿಸಲಾಗಿತ್ತು.

ಶಿಬಿರದಲ್ಲಿ ಕೆನರಾ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಯೂನಿಯನ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡ, ಕರ್ನಾಟಕ ಬ್ಯಾಂಕ್ ಸೇರಿದಂತೆ ವಿವಿಧ ಬ್ಯಾಂಕ್​ಗಳ ಸಿಬ್ಬಂದಿ ಬೀದಿ ‌ಬದಿ ವ್ಯಾಪಾರಿಗಳು ಕಿರು ಸಾಲಕ್ಕೆ ಸಲ್ಲಿಸಿರುವ ದಾಖಲಾತಿಗಳನ್ನು ಪರಿಶೀಲಿಸಿದರು. ಕಿರುಸಾಲ ಮಂಜೂರಾತಿ ದೃಢೀಕರಣ ಪತ್ರವನ್ನು ನೀಡಿದ ನಂತರ ನೇರವಾಗಿ ತಮ್ಮ ಬ್ಯಾಂಕ್ ಖಾತೆಗೆ ಹಣವನ್ನು ಹಾಕಲಾಗುತ್ತದೆ ಎಂದು ಆಯೋಜಕರು ತಿಳಿಸಿದರು.

ಪಿಎಂ ಸ್ವನಿಧಿ‌ ಯೊಜನೆಯನ್ನು ನಗರದಲ್ಲಿ ಪರಿಣಾಮಕಾರಿಯಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಮಾರ್ಚ್ 6 ಮತ್ತು ಮಾರ್ಚ್ 13ರಂದು ಕೂಡಾ ಶಿಬಿರ ಆಯೋಜಿಸಿದ್ದು, ಬೀದಿ ಬದಿ ವ್ಯಾಪಾರಿಗಳು ಸದುಪಯೋಗ ಪಡೆದುಕೊಳ್ಳಬಹುದು ಎಂದು ಪಾಲಿಕೆ ತಿಳಿಸಿದೆ.

ಯೋಜನೆಯಡಿ ನೀಡುತ್ತಿರುವ 10,000 ರೂ. ಕಿರು ಸಾಲದ ಅವಧಿ ಒಂದು ವರ್ಷವಾಗಿದ್ದು, ಸಾಲ ಪಡೆದ ಬೀದಿ ವ್ಯಾಪಾರಿ ವರ್ಷದೊಳಗೆ ಮಾಸಿಕ‌ ಕಂತಿನಲ್ಲಿ ಮರುಪಾವತಿ ಮಾಡಿದರೆ ಬಡ್ಡಿಯಲ್ಲಿ ಶೇ. 7ರಷ್ಟು ಸಬ್ಸಿಡಿ ನೀಡಲಾಗುತ್ತದೆ. ಅಲ್ಲದೆ, ಡಿಜಿಟಲ್ ವಹಿವಾಟಿನ ಮೇಲೆ ಮಾಸಿಕ ಪ್ರೋತ್ಸಾಹ ಕ್ಯಾಶ್ ಬ್ಯಾಕ್ ನೀಡಲಾಗುತ್ತದೆ. ಜೊತೆಗೆ ಅವಧಿಯೊಳಗೆ ಸಾಲ ಮರುಪಾವತಿ ಮಾಡಿದವರ ಸಾಲದ ಅರ್ಹತೆ ಏರಿಕೆಯಾಗಿ ತದನಂತರ 20,000 ಸಾಲ ಪಡೆಯಬಹುದಾಗಿರುತ್ತದೆ.
ಅಂಕಿ-ಅಂಶಗಳು ಕೆಳಗಿನಂತಿವೆ:

  • ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಹಾಜರಿದ್ದ ಬೀದಿ ವ್ಯಾಪಾರಿಗಳ ಸಂಖ್ಯೆ 250, ಸಾಲ ಮಂಜೂರಾತಿ ಪಡೆದ ಫಲಾನುಭವಿಗಳ ಸಂಖ್ಯೆ 162.
  • ಪೂರ್ವ ವಲಯಯದಲ್ಲಿ ಶಿಬಿರದಲ್ಲಿ ಹಾಜರಿದ್ದ ಬೀದಿ ವ್ಯಾಪಾರಿಗಳ ಸಂಖ್ಯೆ 815, ಸಾಲ ಮಂಜೂರಾತಿ ಪಡೆದ ಫಲಾನುಭವಿಗಳ ಸಂಖ್ಯೆ 321.
  • ಪಶ್ಚಿಮ ವಲಯದಲ್ಲಿ ಶಿಬಿರದಲ್ಲಿ ಹಾಜರಿದ್ದ ಬೀದಿ ವ್ಯಾಪಾರಿಗಳ ಸಂಖ್ಯೆ 450, ಸಾಲ ಮಂಜೂರಾತಿ ಮಾಡಿರುವ ಫಲಾನುಭವಿಗಳ ಸಂಖ್ಯೆ 183.
  • ದಕ್ಷಿಣ ವಲಯಯದಲ್ಲಿ ಶಿಬಿರದಲ್ಲಿ ಹಾಜರಿದ್ದ ಬೀದಿ ವ್ಯಾಪಾರಿಗಳ ಸಂಖ್ಯೆ 618, ಸಾಲ ಮಂಜೂರಾತಿ ಪಡೆದ ಫಲಾನುಭವಿಗಳ ಸಂಖ್ಯೆ 276.
  • ರಾಜರಾಜೇಶ್ವರಿನಗರ ವಲಯದಲ್ಲಿ ಶಿಬಿರದಲ್ಲಿ ಹಾಜರಿದ್ದ ಬೀದಿ ವ್ಯಾಪಾರಿಗಳ ಸಂಖ್ಯೆ 387, ಸಾಲ ಮಂಜೂರಾತಿ ಪಡೆದ ಫಲಾನುಭವಿಗಳ ಸಂಖ್ಯೆ 145.
  • ದಾಸರಹಳ್ಳಿ ವಲಯದಲ್ಲಿ ಶಿಬಿದಲ್ಲಿ ಹಾಜರಿದ್ದ ಬೀದಿ ವ್ಯಾಪಾರಿಗಳ ಸಂಖ್ಯೆ130, ಸಾಲ ಮಂಜೂರಾತಿ ಪಡೆದ ಫಲಾನುಭವಿಗಳ ಸಂಖ್ಯೆ 66.
  • ಬೊಮ್ಮನಹಳ್ಳಿ ವಲಯದಲ್ಲಿ ಶಿಬಿರದಲ್ಲಿ ಹಾಜರಿದ್ದ ಬೀದಿ ವ್ಯಾಪಾರಿಗಳ ಸಂಖ್ಯೆ 485, ಸಾಲ ಮಂಜೂರಾತಿ ಮಾಡಿರುವ ಫಲಾನುಭವಿಗಳ ಸಂಖ್ಯೆ 191.
  • ಮಹದೇವಪುರ ವಲಯದಲ್ಲಿ ಶಿಬಿರದಲ್ಲಿ ಹಾಜರಿದ್ದ ಬೀದಿ ವ್ಯಾಪಾರಿಗಳ ಸಂಖ್ಯೆ 725, ಸಾಲ ಮಂಜೂರಾತಿ ಪಡೆದ ಫಲಾನುಭವಿಗಳ ಸಂಖ್ಯೆ 22.

ಒಟ್ಟಾರೆ ಪಾಲಿಕೆ ವ್ಯಾಪ್ತಿಯ ಶಿಬಿರದಲ್ಲಿ ಹಾಜರಿದ್ದ ಬೀದಿ ವ್ಯಾಪಾರಿಗಳ ಸಂಖ್ಯೆ 4,049. ಇದರಲ್ಲಿ ಸಾಲ ಮಂಜೂರಾತಿ ಪಡೆದ ಫಲಾನುಭವಿಗಳ ಸಂಖ್ಯೆ 1,520. ಹೆಚ್ಚಿನ ಮಾಹಿತಿ ಪಡೆಯಲು https://pmsvanidhi.mohua.gov.in/Home/Schemes ಸಂಪರ್ಕಿಸಲು ಪಾಲಿಕೆ ಕೋರಿದೆ.

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.