ETV Bharat / city

ವಿಜಯನಗರ: ಕಲುಷಿತ ನೀರು ಕುಡಿದು ವೃದ್ಧ ಸಾವು - ಮತ್ತೊಬ್ಬರ ಸ್ಥಿತಿ ಗಂಭೀರ

author img

By

Published : Sep 28, 2021, 12:35 PM IST

ಹೂವಿನ ಹಡಗಲಿ ತಾಲೂಕಿನ ಮಕರಬ್ಬಿ ಗ್ರಾಮದಲ್ಲಿ ಕಲುಷಿತ ನೀರು ಕುಡಿದು ಬೆಳವಿಗಿ ನೀಲಪ್ಪ ಎಂಬುವವರು ಮೃತಪಟ್ಟಿದ್ದಾರೆ.

belavigi neelappa death
ಕಲುಷಿತ ನೀರು ಕುಡಿದು ಬೆಳವಿಗಿ ನೀಲಪ್ಪ ನಿಧನ

ಹೊಸಪೇಟೆ(ವಿಜಯನಗರ): ಕಲುಷಿತ ನೀರು ಕುಡಿದು ವೃದ್ಧನೊಬ್ಬ ಮೃತಪಟ್ಟಿರುವ ಘಟನೆ ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಮಕರಬ್ಬಿ ಗ್ರಾಮದಲ್ಲಿ ಇಂದು ನಡೆದಿದೆ.

ಬೆಳವಿಗಿ ನೀಲಪ್ಪ (60) ತೀವ್ರ ಅಸ್ವಸ್ಥತೆಯಿಂದ ಮೃತಪಟ್ಟವರು. ಇನ್ನೊಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಮೃತ ವ್ಯಕ್ತಿಯನ್ನು ಕಾಂತೆಬೆನ್ನೂರು ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಿ ಹೂವಿನ ಹಡಗಲಿ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.

ಇದನ್ನೂ ಓದಿ: ಅಧಿಕಾರ ದುರುಪಯೋಗ ಮಾಡಿಕೊಳ್ಳುವ ಪೊಲೀಸರ ವಿರುದ್ಧ ಕ್ರಮ: ಆರಗ ಜ್ಞಾನೇಂದ್ರ

ಕಳೆದ ವಾರದ ಹಿಂದಷ್ಟೇ ಕಲುಷಿತ ನೀರು ಕುಡಿದು 50ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡಿದ್ದರು. ಗ್ರಾಮ ಪಂಚಾಯಿತಿಯವರ ನಿರ್ಲಕ್ಷ್ಯದಿಂದ ಕುಡಿಯುವ ನೀರಿನಲ್ಲಿ ಕಲುಷಿತ ನೀರು ಸೇರ್ಪಡೆಯಾಗಿದೆ ಎಂದು ಆರೋಪಿಸಲಾಗಿತ್ತು.

ಗ್ರಾಮದಲ್ಲಿರುವ ಮೂರು ಬೋರ್​ವೆಲ್ ಗಳ ಪೈಕಿ ಎರಡು ಬೋರವೆಲ್ ನೀರು ಕುಡಿಯಲು ಯೋಗ್ಯವಲ್ಲ ಎಂಬ ವರದಿ ಇದೆ. ಆದ್ರೂ ಗ್ರಾಮ ಪಂಚಾಯಿತಿಯವರು ನಿರ್ಲಕ್ಷ್ಯ ವಹಿಸಿ ಮತ್ತೆ ಅದೇ ನೀರನ್ನು ಸರಬರಾಜು ಮಾಡುತ್ತಿರುವುದರಿಂದ ಘಟನೆ ಸಂಭವಿಸಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.