ETV Bharat / city

ತಾಲಿಬಾನ್ ‌ಮನಸ್ಥಿತಿ ಹೊಂದಿದವರಿಗೆ ಭಾರತದಲ್ಲಿ ಜಾಗವಿಲ್ಲ: ಸಿಟಿ ರವಿ ಆಕ್ರೋಶ

author img

By

Published : Mar 22, 2022, 11:41 AM IST

ಈಗ ಕೇವಲ‌ ಶೇ.15ರಷ್ಟು ಜನಸಂಖ್ಯೆ ಹೊಂದಿದವರು ಬೆದರಿಕೆ ಹಾಕುತ್ತಿದ್ದಾರೆ. ಇದರ ಪ್ರಮಾಣ ಹೆಚ್ಚಾದರೆ ಸ್ವಂತಂತ್ರ ಭಾರತದಲ್ಲಿ ನಾವೂ ದಿ ಕಾಶ್ಮೀರಿ ಫೈಲ್​ನಲ್ಲಿ ಪಂಡಿತರಿಗೆ ಆದ ಪರಿಸ್ಥಿತಿಯನ್ನು ನೋಡಬೇಕಾಗುತ್ತದೆ ಎಂದು ಶಾಸಕ ಸಿ.ಟಿ.ರವಿ ಕಳವಳ ವ್ಯಕ್ತಪಡಿಸಿದ್ದಾರೆ.

MLA C.T.Ravi talked to press
ಬಿಜೆಪಿ ರಾಷ್ಟ್ರೀಯ ‌ಪ್ರಧಾನ ಕಾರ್ಯದರ್ಶಿ ‌ಸಿ.ಟಿ. ರವಿ

ಬೆಳಗಾವಿ: ತಮಿಳುನಾಡು ಇಸ್ಲಾಂಮಿಕ್ ಸಂಘಟನೆಗಳಿಂದ ಕರ್ನಾಟಕ ಹೈಕೋರ್ಟ್ ಜಡ್ಜ್​ಗಳಿಗೆ ಜೀವ ಬೆದರಿಕೆ ಹಾಕಿರುವ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಷ್ಟ್ರೀಯ ‌ಪ್ರಧಾನ ಕಾರ್ಯದರ್ಶಿ ‌ಸಿ.ಟಿ. ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ರಾಷ್ಟ್ರೀಯ ‌ಪ್ರಧಾನ ಕಾರ್ಯದರ್ಶಿ ‌ಸಿ.ಟಿ. ರವಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಗೋವಾದ ಪಣಜಿಯಲ್ಲಿ ಮಾತನಾಡಿದ ‌ಅವರು, ತಾಲಿಬಾನ್ ‌ಮನಸ್ಥಿತಿ ಹೊಂದಿದವರಿಗೆ ಭಾರತದಲ್ಲಿ ಅವಕಾಶ ‌ಇಲ್ಲ. ಬೆದರಿಕೆ‌ ಪ್ರಕರಣ ‌ಸಂಬಂಧ ಈಗಾಗಲೇ ತಮಿಳುನಾಡು ಸರ್ಕಾರ ಇಬ್ಬರನ್ನು ಬಂಧಿಸಿದೆ. ತಮಿಳುನಾಡು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಅಣ್ಣಾಮಲೈ ದೂರಿನ ಮೇರೆಗೆ ಇಬ್ಬರ ಬಂಧನವಾಗಿದೆ. ದೂರು ನೀಡುವ ಮೊದಲೇ‌ ಸ್ವಯಂಪ್ರೇರಿತವಾಗಿ ಕೇಸ್ ದಾಖಲಿಸಬೇಕಿತ್ತು. ನಾನು ಈಗಾಗಲೇ ಕರ್ನಾಟಕ ಸರ್ಕಾರದ ಗೃಹ ಸಚಿವರ ಜೊತೆ ದೂರವಾಣಿಯಲ್ಲಿ ಮಾತನಾಡಿದ್ದೇನೆ ಎಂದು ಹೇಳಿದರು.

ಕರ್ನಾಟಕದಲ್ಲಿ ಕೂಡ ಅವರ ಮೇಲೆ ಸ್ವಯಂಪ್ರೇರಿತ ಕೇಸ್ ದಾಖಲಿಸಬೇಕು. ಪ್ರಜಾಪ್ರಭುತ್ವದಲ್ಲಿ ಬೆದರಿಕೆಯೊಡ್ಡಲು ಅವಕಾಶ ಮಾಡಿಕೊಡಬಾರದು. ತಾಲಿಬಾನ್ ಮಾನಸಿಕತೆಯನ್ನು ಈಗಲೇ ನಾವು ಹೊಸಕಿ ಹಾಕಬೇಕು. ಈಗ ಕೇವಲ‌ ಶೇ.15ರಷ್ಟು ಜನಸಂಖ್ಯೆ ಹೊಂದಿದವರು ಬೆದರಿಕೆ ಹಾಕುತ್ತಿದ್ದಾರೆ. ಇದರ ಪ್ರಮಾಣ ಹೆಚ್ಚಾದರೆ ಸ್ವತಂತ್ರ ಭಾರತದಲ್ಲಿ ನಾವೂ ದಿ ಕಾಶ್ಮೀರಿ ಫೈಲ್​ನಲ್ಲಿ ಪಂಡಿತರಿಗೆ ಆದ ಪರಿಸ್ಥಿತಿ ನೋಡಬೇಕಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.

ಇದನ್ನೂ ಓದಿ: ನೀಟ್ ಪಾಸ್ ಮಾಡಿದವರಿಗೆ ಸೀಟು ಕನ್ಫರ್ಮ್: ಸಚಿವ ಸುಧಾಕರ್

ಪ್ರತಿ ಊರಿನಲ್ಲೂ ಆ ರೀತಿ ನೋಡುವ ಕೆಟ್ಟ ಪರಿಸ್ಥಿತಿ ಬರುತ್ತದೆ. ಹಾಗೇ ಬರಬಾರದು ಅಂದರೆ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ಅವರ ಮೇಲೆ ಭಯೋತ್ಪಾದಕ ಕೇಸ್ ಹಾಕಿ ಅರೆಸ್ಟ್ ಮಾಡಬೇಕು. ಆಗ ಮಾತ್ರ ಅವರಿಗೆ ಬುದ್ಧಿ ಬರುತ್ತೆ. ಆಗ ಮಾತ್ರ ಅವರಿಗೆ ಸಂವಿಧಾನ ಅಂದರೆ ಏನು ಎಂದು ಅರ್ಥವಾಗುತ್ತದೆ. ಭಾರತದಲ್ಲಿ ಎಲ್ಲ ಸೌಲಭ್ಯಗಳು ಬಿಟ್ಟಿ ಸಿಗುತ್ತವೆ ಅದಕ್ಕೆ ಕೊಬ್ಬಿದ್ದಾರೆ. ತಾಲಿಬಾನ್​ ಮನಸ್ಥಿತಿ ಹೊಂದಿದವರು ಅವರ ಇಚ್ಛೆ ಪ್ರಕಾರ ನಡೆದುಕೊಳ್ಳಲು ಪಾಕಿಸ್ತಾನ ಇಲ್ಲವೇ ಅಪಘಾನಿಸ್ತಾನಕ್ಕೆ ಹೋಗಲಿ. ತಾಲಿಬಾನ್​ ಮನಸ್ಥಿತಿಯನ್ನು ಭಾರತದಲ್ಲಿ ಬೆಳೆಸಲು ಬೀಡಬಾರದು ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.