ETV Bharat / city

ಬೆಳಗಾವಿಯಲ್ಲಿ ರಸ್ತೆ ಬದಿಯೇ ನೇತಾಡಿದ ಶವ: ಬೆಚ್ಚಿಬಿದ್ದ ವಾಯುವಿಹಾರಿಗಳು

author img

By

Published : Jun 30, 2022, 12:08 PM IST

ಬೆಳಗಾವಿ ಬಸ್​ ನಿಲ್ದಾಣ ಸಮೀಪದ ಅಪಾರ್ಟ್​ಮೆಂಟ್​ ಗ್ಯಾಲರಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ದೃಶ್ಯ ಕಂಡ ವಾಯುವಿಹಾರಿಗಳು ಬೆಚ್ಚಿಬಿದ್ದಿದ್ದಾರೆ. ಮೇಲ್ನೋಟಕ್ಕೆ ಆತ್ಮಹತ್ಯೆ ಎಂದು ಕಂಡರೂ, ತನಿಖೆಯಿಂದಷ್ಟೇ ಸತ್ಯಾಸತ್ಯತೆ ತಿಳಿಯಲಿದೆ.

The corpse hanging on the side of the road in Belgaum
ಬೆಳಗಾವಿಯ ರಸ್ತೆ ಬದಿಯೇ ನೇತಾಡಿದ ಶವ

ಬೆಳಗಾವಿ : ನೇತುಹಾಕಿದ ಸ್ಥಿತಿಯಲ್ಲಿ ವೃದ್ಧರೊಬ್ಬರ ಶವ ಪತ್ತೆಯಾಗಿರುವ ಪ್ರಕರಣ ಇಲ್ಲಿನ ಶಾಹುನಗರದ ಕೊನೆಯ ಬಸ್ ನಿಲ್ದಾಣದ ಸಮೀಪ ಗುರುವಾರ ನಡೆದಿದೆ. ರಸ್ತೆ ಪಕ್ಕದಲ್ಲಿನ ಅಪಾರ್ಟ್‌ಮೆಂಟ್​ನ ಗ್ಯಾಲರಿಗೆ ನೇಣುಬಿಗಿದುಕೊಂಡು ವೃದ್ಧ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶವ ಕಂಡು ವಾಯುವಿಹಾರಿಗಳು ಬೆಚ್ಚಿ ಬಿದ್ದಿದ್ದಾರೆ.

ಶಿವಾಜಿ ಟಿ. ಭಿರ್ಜೆ (65) ಮೃತರು. ಮೇಲ್ನೋಟಕ್ಕೆ ಇದು ಆತ್ಮಹತ್ಯೆ ಎಂದು ಕಂಡುಬಂದಿದೆ. ತನಿಖೆ ಬಳಿಕ ಸಾವಿಗೆ ನಿಖರ ಕಾರಣ ಗೊತ್ತಾಗಲಿದೆ. ಶವ ದೊರೆತ ಅಪಾರ್ಟ್‌ಮೆಂಟ್​ನಲ್ಲೇ ವೃದ್ಧ ಶಿವಾಜಿ ಹಲವು ವರ್ಷಗಳಿಂದ ಬಾಡಿಗೆಗೆ ಇದ್ದರು. ಅವರು ಖಾಸಗಿ ಕಾಲೇಜಿನ ಹಾಸ್ಟೆಲ್‌ನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿದ್ದರು ಎಂದು ತಿಳಿದುಬಂದಿದೆ.

ಕಳೆದ ಎರಡು ದಿನಗಳಿಂದ ಶಿವಾಜಿ ಅನಾರೋಗ್ಯದಿಂದ ಬಳಲುತ್ತಿದ್ದರು ಎನ್ನಲಾಗ್ತಿದೆ. ಸ್ಥಳಕ್ಕೆ ಎಪಿಎಂಸಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ : ಸುಳ್ಯ: ಮಗುವಿನೊಂದಿಗೆ ಕೆರೆಗೆ ಹಾರಿ ತಾಯಿ ಆತ್ಮಹತ್ಯೆ, ಬದುಕುಳಿದ ಮಗು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.