ETV Bharat / city

ಕಾಂಗ್ರೆಸ್ ಬಗ್ಗೆ ನನಗೆ ಕನಿಕರ ಹುಟ್ಟುತ್ತಿದೆ: ಸಚಿವ ಜಗದೀಶ್ ಶೆಟ್ಟರ್ ವ್ಯಂಗ್ಯ

author img

By

Published : Apr 6, 2021, 2:39 PM IST

ಕಾಂಗ್ರೆಸ್ ಆರೋಪ ಮಾಡುವ ಬದಲು ಈಗಿರುವ ಮೂರು ಉಪಚುನಾವಣೆಯಲ್ಲಿ ಗೆದ್ದು ತೋರಿಸಲಿ. ದೇಶದಲ್ಲಿ ಕಾಂಗ್ರೆಸ್ ಹಣೆಬರಹ ಏನು ಎಂಬುದು ಎಲ್ಲರಿಗೂ ಗೊತ್ತಾಗಿದೆ. ಅಧಿಕಾರಕ್ಕಾಗಿ ಏನಾದರೂ ಮಾಡಲು ಸಿದ್ಧವಿದೆ. ಸಾಲ‌ ಮಾಡಿರುವುದಕ್ಕೆ ಕಾಂಗ್ರೆಸ್ ಕಾಳಜಿ ಮಾಡೋದು ಬೇಡ. ಕೊರೊನಾದಿಂದಾಗಿ ಜಗತ್ತಿನ ಎಲ್ಲಾ ಸರ್ಕಾರಗಳಿಗೂ ತೊಂದರೆಯಾಗಿದೆ ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದರು.

Industry Minister Jagdish Shettar
ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್

ಬೆಳಗಾವಿ: ಕಾಂಗ್ರೆಸ್​ನವರು ಜೆಡಿಎಸ್‌ನ ಹೆಚ್.ಡಿ.ಕುಮಾರಸ್ವಾಮಿ ಕೈ-ಕಾಲಿಗೆ ಬಿದ್ದು ಸಿಎಂ ಮಾಡಿದರು. ಹೀಗಾಗಿ ಕಾಂಗ್ರೆಸ್ ಬಗ್ಗೆ ನನಗೆ ಕನಿಕರ ಹುಟ್ಟುತ್ತಿದೆ ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ವ್ಯಂಗ್ಯವಾಡಿದರು.

ಕಾಂಗ್ರೆಸ್ ಬಗ್ಗೆ ನನಗೆ ಕನಿಕರ ಹುಟ್ಟುತ್ತಿದೆ: ಸಚಿವ ಜಗದೀಶ್ ಶೆಟ್ಟರ್ ವ್ಯಂಗ್ಯ

ನಗರದಲ್ಲಿ ಮಾಧ್ಯಮದವರೊಂದಿಗೆ ‌ಮಾತನಾಡಿದ ಅವರು, ಬಿಜೆಪಿ ಶಿಸ್ತುಬದ್ಧವಾಗಿ ಅಭ್ಯರ್ಥಿ ಮಂಗಲ ಅಂಗಡಿ ಪರ ಪ್ರಚಾರ ಮಾಡುತ್ತಿದೆ. ನಾಳೆಯಿಂದ ಮುಖ್ಯಮಂತ್ರಿ ಯಡಿಯೂರಪ್ಪನವರು ಮೂರು‌ ಕ್ಷೇತ್ರಗಳಲ್ಲಿ ಪ್ರಚಾರ ನಡೆಸಲಿದ್ದಾರೆ. ಈಗಾಗಲೇ ಗೋಕಾಕ್​, ಅರಭಾವಿ ಮತಕ್ಷೇತ್ರಗಳಲ್ಲಿ ಬಿಜೆಪಿ ಸಭೆ ಯಶಸ್ವಿಯಾಗಿದ್ದು, ಬಿಜೆಪಿ ಪರ ದೊಡ್ಡ ಅಲೆ ಸೃಷ್ಟಿಯಾಗಿದೆ ಎಂದರು.

ಕಾಂಗ್ರೆಸ್ ಮುಖಂಡ ಲಖನ್ ಜಾರಕಿಹೊಳಿ‌ ಬೆಂಬಲ ವಿಚಾರವಾಗಿ ಪ್ರತಿಕ್ರಿಯಿಸಿ, ನಿನ್ನೆ ಲಖನ್ ಜಾರಕಿಹೊಳಿ‌ ಮನೆಗೆ ಹೋಗಿ ಬೆಂಬಲ ಕೋರಿದ್ದೇವೆ. ಸತೀಶ್ ಜಾರಕಿಹೊಳಿ‌ಗೆ ಕಾಂಗ್ರೆಸ್ ಟಿಕೆಟ್ ನೀಡಿರುವುದು ಲಖನ್​ಗೆ ಬೆಸರ ತಂದಿದೆ. ಹೀಗಾಗಿ ಅವರು ‌ಕೂಡ ಗೋಕಾಕ್​ನಲ್ಲಿ ಬಿಜೆಪಿ ಪರ ಕೆಲಸ ಮಾಡ್ತಾರೆ. ನಮಗೆ ಬೆಂಬಲ ನೀಡುವುದಾಗಿ ಮಾಧ್ಯಮಗಳಿಗೆ ಹೇಳಿಕೆ ಕೂಡ ನೀಡಿದ್ದಾರೆ ಎಂದು ಹೇಳಿದರು.

ಮಾಜಿ ಸಚಿವ ಎಂ.ಬಿ.ಪಾಟೀಲ ಹೇಳಿಕೆಗೆ ಪ್ರತಿಕ್ರಿಯಿಸಿ, ಎಂ.ಬಿ.ಪಾಟೀಲ್ ಹೇಳಿದ್ದೆಲ್ಲ ವೇದ ವಾಕ್ಯವಲ್ಲ. ಅವರು ಹೇಳೋದಕ್ಕೆಲ್ಲಾ ಉತ್ತರ ಕೊಡುವ ಅವಶ್ಯಕತೆಯೂ ಇಲ್ಲ. ಬಿಜೆಪಿ ಹಿಂದಿನಂತೆ ದೊಡ್ಡ ಪ್ರಮಾಣದಲ್ಲಿ ಭರ್ಜರಿ ಗೆಲುವು ಸಾಧಿಸಲಿದೆ. ಕಾಂಗ್ರೆಸ್ ಆರೋಪ ಮಾಡುವ ಬದಲು, ಈಗಿರುವ ಮೂರು ಉಪಚುನಾವಣೆಯಲ್ಲಿ ಗೆದ್ದು ತೋರಿಸಲಿ. ದೇಶದಲ್ಲಿ ಕಾಂಗ್ರೆಸ್ ಹಣೆಬರಹ ಏನು ಎಂಬುದು ಎಲ್ಲರಿಗೂ ಗೊತ್ತಾಗಿದೆ. ಅಧಿಕಾರಕ್ಕಾಗಿ ಏನಾದರೂ ಮಾಡಲು ಸಿದ್ಧವಿದೆ. ಸಾಲ‌ ಮಾಡಿರುವುದಕ್ಕೆ ಕಾಂಗ್ರೆಸ್ ಕಾಳಜಿ ಮಾಡೋದು ಬೇಡ. ಕೊರೊನಾದಿಂದಾಗಿ ಜಗತ್ತಿನ ಎಲ್ಲಾ ಸರ್ಕಾರಗಳಿಗೂ ತೊಂದರೆಯಾಗಿದೆ ಎಂದರು.

ಇನ್ನು ಯತ್ನಾಳ್​ ಹೇಳಿಕೆ ಬಗ್ಗೆ, ಅರುಣ ಸಿಂಗ್ ಹೇಳಿದಂತೆ ಮಹತ್ವ ಕೊಡಬೇಕಿಲ್ಲ. ಬಿಜೆಪಿ ಸರ್ಕಾರದ ವಿರುದ್ಧ ಏನೇ ಆರೋಪವಿದ್ದರೂ ದಾಖಲೆಗಳನ್ನು ಬಿಡುಗಡೆ ಮಾಡಲಿ. ಅದನ್ನ ಬಿಟ್ಟು ವೇವ್ ಆಗಿ ಆರೋಪ ಮಾಡುವುದಲ್ಲ. ಕಾಂಗ್ರೆಸ್​ನವರು ಎಂದೂ ದೇಶವನ್ನ ಉದ್ಧಾರ ಮಾಡಲಿಲ್ಲ‌ ಎಂದರು.

ಓದಿ: ಎಸ್ಐಟಿಗೆ ನ್ಯಾಯಸಮ್ಮತವಾಗಿ ಕೆಲಸ ಮಾಡಲು ಸೂಚನೆ ನೀಡಿದ್ದೇನೆ: ಬೊಮ್ಮಾಯಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.