ETV Bharat / city

ಸೊಂಟಕ್ಕೆ ರಿವಾಲ್ವರ್ ಸಿಕ್ಕಿಸಿಕೊಂಡು ರಾಜಾರೋಷವಾಗಿ ಓಡಾಟ..ಬೆಚ್ಚಿದ ಕುಂದಾನಗರಿ ಜನ

author img

By

Published : Aug 27, 2021, 9:07 PM IST

ಬೆಳಗಾವಿ ನಗರದ ಖಡೇಬಜಾರ್ ಪೊಲೀಸ್ ಠಾಣೆ ‌ವ್ಯಾಪ್ತಿಯ ಆರ್ಯನ್ ಹೋಟೆಲ್ ಎದುರು ವ್ಯಕ್ತಿ ರಿವಾಲ್ವರ್ ಸಮೇತ ಓಡಾಡಿದ್ದಾನೆ. ವಿಡಿಯೋ ಆಧರಿಸಿ ವ್ಯಕ್ತಿಯನ್ನು ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಳಿಕ ಆತನ ಬಳಿಯಿದ್ದ ಪಿಸ್ತೂಲ್ ಜಪ್ತಿ ಮಾಡಿಕೊಂಡು ಗನ್ ಲೈಸೆನ್ಸ್ ‌ರದ್ದು ಪಡಿಸಿದ್ದಾರೆ.

A man had a revolver tied to his waist in Belgavi
ಸೊಂಟಕ್ಕೆ ರಿವಾಲ್ವರ್ ಸಿಕ್ಕಿಸಿಕೊಂಡು ರಾಜಾರೋಷವಾಗಿ ಓಡಾಟ

ಬೆಳಗಾವಿ: ಸೊಂಟಕ್ಕೆ ರಿವಾಲ್ವರ್ ಸಿಕ್ಕಿಸಿಕೊಂಡು ರಾಜಾರೋಷವಾಗಿ ಸಾರ್ವಜನಿಕ ಸ್ಥಳದಲ್ಲಿ ಓಡಾಡಿ ವ್ಯಕ್ತಿಯೊಬ್ಬ ಜನರಲ್ಲಿ ಭಯ ಹುಟ್ಟಿಸಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ‌.

ಖಡೇಬಜಾರ್ ಪೊಲೀಸ್ ಠಾಣೆ ‌ವ್ಯಾಪ್ತಿಯ ಆರ್ಯನ್ ಹೋಟೆಲ್ ಎದುರು ವ್ಯಕ್ತಿ ರಿವಾಲ್ವರ್ ಸಮೇತ ಓಡಾಡಿದ್ದಾನೆ. ವ್ಯಕ್ತಿಯನ್ನು ‌ಕಂಡು ಜನರು ಭಯ ಭೀತರಾಗಿದ್ದಾರೆ. ಇದನ್ನು ಗಮನಿಸಿರುವ ಸ್ಥಳೀಯರು ತಮ್ಮ ಮೊಬೈಲಿನಲ್ಲಿ ಗನ್ ಸಮೇತ ವ್ಯಕ್ತಿಯ ವಿಡಿಯೋ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.

ವಿಡಿಯೋ ಆಧರಿಸಿ ವ್ಯಕ್ತಿಯನ್ನು ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಳಿಕ ಆತನ ಬಳಿಯಿದ್ದ ಪಿಸ್ತೂಲ್ ಜಪ್ತಿ ಮಾಡಿಕೊಂಡು ಗನ್ ಲೈಸೆನ್ಸ್ ‌ರದ್ದು ಪಡಿಸಿದ್ದಾರೆ.

ನಗರದಲ್ಲಿ ಮಹಾನಗರ ‌ಪಾಲಿಕೆ ಚುನಾವಣೆ ‌ನಡೆಯುತ್ತಿದ್ದು, ನೀತಿ ಸಂಹಿತೆ ‌ಜಾರಿಯಲ್ಲಿದೆ. ಹೀಗಿದ್ದರೂ ಈ ವ್ಯಕ್ತಿ ‌ಸಾರ್ವಜನಿಕ ಸ್ಥಳದಲ್ಲಿ ರಿವಾಲ್ವರ್ ಸಮೇತ ಓಡಾಡುವ ಮೂಲಕ ಚುನಾವಣಾ ನೀತಿ ಸಂಹಿತೆ ಮತ್ತು ಶಸ್ತ್ರಾಸ್ತ್ರ ಕಾಯ್ದೆ ನಿಯಮಗಳನ್ನು ಉಲ್ಲಂಘಿಸಿದ್ದಾನೆ. ಖಡೇಬಜಾರ್ ಠಾಣೆ ‌ಪೊಲೀಸರು ಆರೋಪಿಯ ವಿರುದ್ಧ ಸ್ವಯಂ ದೂರು ದಾಖಲಿಸಿಕೊಂಡಿದ್ದಾರೆ.

ಓದಿ: ತವರಿಗೆ ಬಂದ ಮಾಜಿ ಸಿಎಂಗೆ ಅದ್ಧೂರಿ ಸ್ವಾಗತ: ಪಕ್ಷ ಕಟ್ಟುವುದೇ ಮುಂದಿನ ಗುರಿ ಎಂದ ಬಿಎಸ್​ವೈ

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.