ಆರು ಅಂಗಸಂಸ್ಥೆಗಳ ವಿಲೀನಕ್ಕೆ ಟಾಟಾ ಸ್ಟೀಲ್ ಮಂಡಳಿ ಒಪ್ಪಿಗೆ

author img

By

Published : Sep 23, 2022, 12:53 PM IST

ಆರು ಅಂಗಸಂಸ್ಥೆಗಳ ವಿಲೀನಕ್ಕೆ ಟಾಟಾ ಸ್ಟೀಲ್ ಮಂಡಳಿ ಒಪ್ಪಿಗೆ

ಟಾಟಾ ಸ್ಟೀಲ್‌ನ ನಿರ್ದೇಶಕರ ಮಂಡಳಿಯು ಆರು ಅಂಗಸಂಸ್ಥೆಗಳನ್ನು ಟಾಟಾ ಸ್ಟೀಲ್​ನೊಂದಿಗೆ ವಿಲೀನಗೊಳಿಸುವ ಉದ್ದೇಶಿತ ಯೋಜನೆಗಳನ್ನು ಪರಿಗಣಿಸಿ ಅನುಮೋದಿಸಿದೆ ಎಂದು ಟಾಟಾ ಕಂಪನಿಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ನವದೆಹಲಿ: ತನ್ನ ಆರು ಅಂಗಸಂಸ್ಥೆಗಳು ಮುಖ್ಯ ಕಂಪನಿಯೊಂದಿಗೆ ವಿಲೀನಗೊಳ್ಳಲಿವೆ ಎಂದು ಟಾಟಾ ಸ್ಟೀಲ್ ಶುಕ್ರವಾರ ತಿಳಿಸಿದೆ. ಈ ಸಂಬಂಧದ ಪ್ರಸ್ತಾವನೆಯನ್ನು ಕಂಪನಿಯ ಮಂಡಳಿಯು ಗುರುವಾರ ಅನುಮೋದಿಸಿದೆ. ಟಾಟಾ ಸ್ಟೀಲ್‌ನ ನಿರ್ದೇಶಕರ ಮಂಡಳಿಯು ಆರು ಅಂಗಸಂಸ್ಥೆಗಳನ್ನು ಟಾಟಾ ಸ್ಟೀಲ್​​ನೊಂದಿಗೆ ವಿಲೀನಗೊಳಿಸುವ ಉದ್ದೇಶಿತ ಯೋಜನೆಗಳನ್ನು ಪರಿಗಣಿಸಿ ಅನುಮೋದಿಸಿದೆ ಎಂದು ಟಾಟಾ ಕಂಪನಿಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ವಿಲೀನಗೊಳ್ಳಲಿರುವ ಅಂಗಸಂಸ್ಥೆಗಳು ಹೀಗಿವೆ : ಟಾಟಾ ಸ್ಟೀಲ್ ಲಾಂಗ್ ಪ್ರಾಡಕ್ಟ್ಸ್ ಲಿಮಿಟೆಡ್, ಇದರಲ್ಲಿ ಟಾಟಾ ಸ್ಟೀಲ್ ಶೇ 74.91 ಈಕ್ವಿಟಿಯನ್ನು ಹೊಂದಿದೆ. ದಿ ಟಿನ್‌ಪ್ಲೇಟ್ ಕಂಪನಿ ಆಫ್ ಇಂಡಿಯಾ ಲಿಮಿಟೆಡ್ (ಶೇ 74.96). ಟಾಟಾ ಮೆಟಾಲಿಕ್ಸ್ ಲಿಮಿಟೆಡ್ (ಶೇ 60.03). ದಿ ಇಂಡಿಯನ್ ಸ್ಟೀಲ್ ಮತ್ತು ವೈರ್ ಪ್ರಾಡಕ್ಟ್ಸ್ ಲಿಮಿಟೆಡ್ (ಶೇ 95.01. ಈಕ್ವಿಟಿ ಹೋಲ್ಡಿಂಗ್). ಟಾಟಾ ಸ್ಟೀಲ್ ಮೈನಿಂಗ್ ಲಿಮಿಟೆಡ್ ಮತ್ತು ಎಸ್ & ಟಿ ಮೈನಿಂಗ್ ಕಂಪನಿ ಲಿಮಿಟೆಡ್ (ಎರಡೂ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಗಳು).

ಟಾಟಾ ಸ್ಟೀಲ್‌ನ ಸಹವರ್ತಿ ಕಂಪನಿಯಾದ ಟಿಆರ್‌ಎಫ್ ಲಿಮಿಟೆಡ್ (34.11 ಶೇಕಡಾ ಈಕ್ವಿಟಿ) ಅನ್ನು ಕೂಡ ಟಾಟಾ ಸ್ಟೀಲ್ ಲಿಮಿಟೆಡ್​ನೊಂದಿಗೆ ವಿಲೀನಗೊಳಿಸಲು ಮಂಡಳಿಯು ಅನುಮೋದನೆ ನೀಡಿದೆ.

ಗ್ರೂಪ್ ಹೋಲ್ಡಿಂಗ್​ಗಳನ್ನು ಮತ್ತು ಆಡಳಿತ ಸಂರಚನೆಯನ್ನು ಸರಳೀಕರಣಗೊಳಿಸುವ ಮೂಲಕ ಸಾಮರ್ಥ್ಯಗಳನ್ನು ಕ್ರೋಢೀಕರಿಸುವ ಉದ್ದೇಶದಿಂದ ಕಂಪನಿಗಳನ್ನು ವಿಲೀನಗೊಳಿಸಲಾಗುತ್ತಿದೆ ಎಂದು ಕಂಪನಿ ಹೇಳಿದೆ.

ಮಂಡಳಿಯು ಸ್ವತಂತ್ರ ನ್ಯಾಯಸಮ್ಮತತೆ ಮತ್ತು ಮೌಲ್ಯಮಾಪನ ಅಭಿಪ್ರಾಯಗಳ ಆಧಾರದ ಮೇಲೆ ವಿಲೀನದ ಪ್ರಸ್ತಾವನೆ ಪರಿಗಣಿಸಿದೆ. ಇದಕ್ಕಾಗಿ ಕಂಪನಿಗಳ ಕಾಯಿದೆ, 2013 ಮತ್ತು ಸೆಕ್ಯುರಿಟೀಸ್ ಮತ್ತು ಎಕ್ಸ್​ಚೇಂಜ್​ ಬೋರ್ಡ್ ಆಫ್ ಇಂಡಿಯಾ ರೆಗ್ಯುಲೇಷನ್ಸ್ ಅಡಿ ನಿಗದಿಪಡಿಸಿದ ಪ್ರಕ್ರಿಯೆಯನ್ನು ಅನುಸರಿಸಲಾಗಿದೆ.

2019 ರಿಂದ ಟಾಟಾ ಸ್ಟೀಲ್ 116 ಸಂಬಂಧಿತ ಘಟಕಗಳನ್ನು ಕಡಿಮೆ ಮಾಡಿದೆ ಎಂದು ಕಂಪನಿಯ ಹೇಳಿಕೆಯಲ್ಲಿ ತಿಳಿಸಲಾಗಿದೆ. ಇದರಲ್ಲಿ 72 ಅಂಗಸಂಸ್ಥೆಗಳು ಅಸ್ತಿತ್ವದಲ್ಲಿಲ್ಲ. 20 ಅಸೋಸಿಯೇಟ್‌ಗಳು ಮತ್ತು ಪಾಲುದಾರಿಕೆಗಳನ್ನು ರದ್ದು ಮಾಡಲಾಗಿದೆ ಮತ್ತು 24 ಕಂಪನಿಗಳು ಪ್ರಸ್ತುತ ದಿವಾಳಿ ಪ್ರಕ್ರಿಯೆಯಲ್ಲಿವೆ.

ಇದನ್ನೂ ಓದಿ: 725.7 ಕೋಟಿಗೆ ಸಾನಂದ್ ಉತ್ಪಾದನಾ ಘಟಕ ಸ್ವಾಧೀನಕ್ಕೆ ಪಡೆದ ಟಾಟಾ ಮೋಟಾರ್ಸ್‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.