ETV Bharat / business

ಭಾರತದಲ್ಲಿ ಇ-ಗ್ರೋಸರಿ ಮಾರುಕಟ್ಟೆ ಕ್ಷಿಪ್ರ ಬೆಳವಣಿಗೆ

author img

By

Published : Mar 27, 2023, 12:34 PM IST

ಆನ್ಲೈನ್ ಮೂಲಕ ದಿನಸಿ ಖರೀದಿಸುವ ಇ-ಗ್ರೋಸರಿ ಮಾರುಕಟ್ಟೆ ಉತ್ತಮ ಬೆಳವಣಿಗೆ ಕಾಣುತ್ತಿದೆ ಎಂದು ಅಧ್ಯಯನ ವರದಿ ಹೇಳಿದೆ. ದೇಶದ ಎರಡನೇ ಹಂತದ ನಗರಗಳಲ್ಲಿ ಇದು ವ್ಯಾಪಕವಾಗಿ ಬೆಳೆಯಲಿದೆ.

Indian e-grocery market to witness growth in tier 2, beyond in 2023
ಭಾರತದಲ್ಲಿ ಇ-ಗ್ರೋಸರಿ ಮಾರುಕಟ್ಟೆ ಕ್ಷಿಪ್ರ ಬೆಳವಣಿಗೆ: ಅಧ್ಯಯನ ವರದಿಯಲ್ಲಿ ಬಹಿರಂಗ

ನವದೆಹಲಿ : ಭಾರತದ ಇ-ಗ್ರೋಸರಿ (ಆನ್ಲೈನ್ ಮೂಲಕ ದಿನಸಿ ಆರ್ಡರ್ ಮಾಡುವುದು) ಮಾರುಕಟ್ಟೆಯು ದೇಶದ ಎರಡನೇ ಹಂತದ ನಗರಗಳು (tier 2) ಹಾಗೂ ಅವುಗಳಾಚೆ ಬೆಳವಣಿಗೆ ಹೊಂದುವ ನಿರೀಕ್ಷೆಗಳಿವೆ. ದೇಶದ ಇ ಗ್ರೋಸರಿ ಮಾರುಕಟ್ಟೆಯು ಪ್ರಧಾನವಾಗಿ ಸ್ಲಾಟೆಡ್ ಡೆಲಿವರಿ ಮಾದರಿಯನ್ನು ಅವಲಂಬಿಸಿದೆ. ಸರಕುಗಳ ಲಭ್ಯತೆಯನ್ನು ಆಧರಿಸಿ, ಗ್ರಾಹಕರು ಬಯಸಿದ ದಿನಾಂಕ ಹಾಗೂ ಸಮಯದಲ್ಲಿ ಸರಕು ತಲುಪಿಸುವುದನ್ನು ಸ್ಲಾಟೆಡ್ ಡೆಲಿವರಿ ಎಂದು ಕರೆಯಲಾಗುತ್ತದೆ. ಇದರ ಜೊತೆಗೆ ಕ್ವಿಕ್ ಕಾಮರ್ಸ್ (ತ್ವರಿತವಾಗಿ ವಸ್ತು ಪೂರೈಕೆ) ಸ್ಥಿರವಾಗಿ ಬೆಳವಣಿಗೆ ಕಾಣಲಿದೆ. 2019 ಮತ್ತು 2022 ರ ನಡುವೆ, ನಗರಗಳಲ್ಲಿ ಕ್ವಿಕ್ ಕಾಮರ್ಸ್ ಅಳವಡಿಕೆಯಿಂದ ಇ-ಗ್ರೋಸರಿ ಮಾರುಕಟ್ಟೆಯು ಗಮನಾರ್ಹ ಬೆಳವಣಿಗೆ ಕಾಣಲು ಕಾರಣವಾಗಿದೆ.

ಮಾರುಕಟ್ಟೆಯಲ್ಲಿರುವ ಪ್ರಬಲ ಕಂಪನಿಗಳ ಬಲದಿಂದ ಇ-ಗ್ರೋಸರಿ ಮಾರುಕಟ್ಟೆಯು tier 2+ ಹಂತದ ನಗರಗಳಿಗೆ ವಿಸ್ತರಣೆಯಾಗಲಿದೆ ಎಂದು ರೆಡ್​ಸೀರ್ ಸ್ಟ್ರಾಟೆಜಿ ಕನ್ಸಲ್ಟಂಟ್​ ಕಂಪನಿಯ ವರದಿ ಹೇಳಿದೆ. 2019ರವರೆಗೂ ಒಟ್ಟಾರೆ ದಿನಸಿ ಮಾರುಕಟ್ಟೆಯಲ್ಲಿ ಇ-ಗ್ರೋಸರಿ ಪಾಲು ತುಂಬಾ ನಗಣ್ಯವಾಗಿತ್ತು. ಆದರೆ ಕೋವಿಡ್ ಸಾಂಕ್ರಾಮಿಕದ ಸಮಯದಲ್ಲಿ ಈ ವಲಯ ಗಮನಾರ್ಹ ಬೆಳವಣಿಗೆ ಸಾಧಿಸಿತು. 10-15 ನಿಮಿಷಗಳ ಕಾಲಾವಧಿಯಲ್ಲಿ ತ್ವರಿತವಾಗಿ ದಿನಸಿ ವಿತರಣೆ ಮಾಡುವುದು ಜಾಗತಿಕವಾಗಿ ಹೊಸ ಬೆಳವಣಿಗೆಯಾಗಿದೆ. ಭಾರತದ ಕ್ವಿಕ್ ಕಾಮರ್ಸ್ ಮಾರುಕಟ್ಟೆಯು 2025 ರ ವೇಳೆಗೆ 15 ಪಟ್ಟು ಬೆಳವಣಿಗೆಗೆ ಸಾಕ್ಷಿಯಾಗಲಿದೆ. 2025 ಕ್ಕೆ ಇದು 5.5 ಶತಕೋಟಿ ಡಾಲರ್ ಮಾರುಕಟ್ಟೆ ಗಾತ್ರವನ್ನು ತಲುಪಲಿದೆ.

ಸುಲಭವಾಗಿ ವಸ್ತುಗಳನ್ನು ಖರೀದಿಸುವ ಆಯ್ಕೆ ಹಾಗೂ ಇನ್ನಿತರ ಗ್ರಾಹಕರ ಖರೀದಿ ಒಲವುಗಳ ಕಾರಣದಿಂದ ಇ-ಗ್ರೋಸರಿ ಮಾರುಕಟ್ಟೆಯಲ್ಲಿ ಅವಕಾಶಗಳು ಹೆಚ್ಚಾಗುತ್ತಿವೆ ಎಂದು ವರದಿ ತಿಳಿಸಿದೆ. ಭಾರತದಲ್ಲಿ 45 ಬಿಲಿಯನ್ ಡಾಲರ್​ಗಳಷ್ಟು ಕ್ವಿಕ್ ಕಾಮರ್ಸ್ ಮಾರುಕಟ್ಟೆಯ​ ಬೆಳವಣಿಗೆಗೆ ಅವಕಾಶಗಳಿವೆ. ನಗರ ಪ್ರದೇಶಗಳ ಮಧ್ಯಮ-ಹೆಚ್ಚಿನ ಆದಾಯದ ಕುಟುಂಬಗಳ ಬೆಂಬಲದಿಂದ ಕ್ವಿಕ್ ಕಾಮರ್ಸ್ ಮಾರುಕಟ್ಟೆಯಲ್ಲಿ ಪ್ರಮುಖವಾಗಿ ಬೆಳವಣಿಗೆಯಾಗುತ್ತಿದೆ ಎಂದು ವರದಿ ಹೇಳಿದೆ.

ಪಾಕಿಸ್ತಾನದಲ್ಲಿ ಹಣದುಬ್ಬರ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ: ಪಾಕಿಸ್ತಾನದ ಸಂವೇದಿ ಬೆಲೆ ಸೂಚ್ಯಂಕ (ಎಸ್‌ಪಿಐ) ಯಿಂದ ಅಳೆಯಲಾದ ಅಲ್ಪಾವಧಿಯ ಹಣದುಬ್ಬರವು ಕಳೆದ ವಾರಕ್ಕೆ ಹೋಲಿಸಿದರೆ ಮಾರ್ಚ್ 22 ರಂದು ಕೊನೆಗೊಂಡ ವಾರಕ್ಕೆ ವರ್ಷದಿಂದ ವರ್ಷಕ್ಕೆ ಸಾರ್ವಕಾಲಿಕ ಗರಿಷ್ಠ ಶೇಕಡಾ 46.65 ಕ್ಕೆ ತಲುಪಿದೆ ಎಂದು ಪಾಕಿಸ್ತಾನ ಬ್ಯೂರೋ ಆಫ್ ಸ್ಟ್ಯಾಟಿಸ್ಟಿಕ್ಸ್ (PBS) ವರದಿಗಳು ತಿಳಿಸಿವೆ. ವಾರದಿಂದ ವಾರದ ಆಧಾರದಲ್ಲಿ ನೋಡಿದರೆ ಟೊಮ್ಯಾಟೊ, ಆಲೂಗಡ್ಡೆ ಮತ್ತು ಗೋಧಿ ಹಿಟ್ಟು ದುಬಾರಿಯಾಗಿರುವುದರಿಂದ ಅಲ್ಪಾವಧಿಯ ಹಣದುಬ್ಬರವು ಶೇಕಡಾ 1.80 ರಷ್ಟು ಹೆಚ್ಚಾಗಿದೆ ಎಂದು ಟಿವಿ ವರದಿ ತಿಳಿಸಿವೆ. ಮಾರ್ಚ್ 22 ರಂದು ಕೊನೆಗೊಂಡ ಪ್ರಸಕ್ತ ವಾರದ ಎಸ್‌ಪಿಐ ಶೇಕಡಾ 1.80 ರಷ್ಟು ಏರಿಕೆ ದಾಖಲಿಸಿದೆ. ಆಹಾರ ಪದಾರ್ಥಗಳ ಬೆಲೆಯಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ. ಟೊಮೆಟೊ ಶೇ 71.77, ಗೋಧಿ ಹಿಟ್ಟು ಶೇ 42.32, ಆಲೂಗಡ್ಡೆ ಶೇ 11.47, ಬಾಳೆಹಣ್ಣು ಶೇ 11.07, ಟೀ ಲಿಪ್ಟನ್ ಶೇ 7.34 ರಷ್ಟು ಹೆಚ್ಚಾಗಿವೆ.

ಇದನ್ನೂ ಓದಿ : ಗ್ರಾಹಕರಿಗೆ ಸಿಲಿಂಡರ್​ ಪೂರೈಸುವಾಗ, ಹೆಚ್ಚುವರಿ ಡೆಲಿವರಿ ಚಾರ್ಜ್‌ ತಗೊಂಡ್ರೆ ಲೈಸೆನ್ಸ್ ರದ್ದು: ಡಿಸಿ ಎಚ್ಚರಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.