ಯಶಸ್ವಿಯಾಗಿ 50 ಮಿಲಿಯನ್​ಗೂ ಹೆಚ್ಚು ಕಾರ್ಡ್‌ಗಳನ್ನು ಟೋಕನೈಸ್ ಮಾಡಿದ PayU

author img

By

Published : Sep 23, 2022, 2:00 PM IST

PayU

ಪೇಯು ಯಶಸ್ವಿಯಾಗಿ 50 ಮಿಲಿಯನ್​ಗೂ ಹೆಚ್ಚು ಕಾರ್ಡ್‌ಗಳನ್ನು ಟೋಕನೈಸ್ ಮಾಡಿದೆ. ಇದು ಭಾರತದ ಅತಿದೊಡ್ಡ ಪಾವತಿ ನೆಟ್‌ವರ್ಕ್‌ಗಳಾದ ವೀಸಾ, ಮಾಸ್ಟರ್‌ಕಾರ್ಡ್ ಮತ್ತು ರುಪೇಗಳನ್ನು ಒಳಗೊಂಡಿದೆ. PayU ಭಾರತೀಯ ರಿಸರ್ವ್ ಬ್ಯಾಂಕ್ ಅಡಿ ನಿಯಂತ್ರಿಸಲ್ಪಡುತ್ತದೆ. ಭಾರತೀಯ ವ್ಯಾಪಾರಿಗಳ ಡಿಜಿಟಲ್ ಪಾವತಿ ಅಗತ್ಯಗಳನ್ನು ಪೂರೈಸಲು ಇದು ಸಹಕಾರಿಯಾಗಿದೆ.

ನವದೆಹಲಿ: ಸುಮಾರು 50 ಮಿಲಿಯನ್​​ (5 ಕೋಟಿ)ಗೂ ಹೆಚ್ಚು​ ಕಾರ್ಡ್​ಗಳನ್ನು ಯಶಸ್ವಿಯಾಗಿ ಟೋಕನೈಸ್​ ಮಾಡಲಾಗಿದೆ ಎಂದು ಪೇಯು (PayU)​ ಘೋಷಿಸಿದೆ. ಪೇಯು ಎಲ್ಲ ದೇಶೀಯ ವಹಿವಾಟುಗಳಲ್ಲಿ ಶೇ.90ರಷ್ಟು ಟೋಕನೈಸ್ ಮಾಡುವ ಸಾಮರ್ಥ್ಯ ಹೊಂದಿದೆ. ಏಕೆಂದರೆ ಇದು ಭಾರತದ ಅತಿದೊಡ್ಡ ಪಾವತಿ ನೆಟ್‌ವರ್ಕ್‌ಗಳಾದ ವೀಸಾ, ಮಾಸ್ಟರ್‌ಕಾರ್ಡ್ ಮತ್ತು ರುಪೇಗಳನ್ನು ಒಳಗೊಂಡಿದೆ. ಅಲ್ಲದೇ ಟೋಕನ್ ವಿನಂತಿದಾರ ಮತ್ತು ಪೂರೈಕೆದಾರರಿಂದ ಸಂಪೂರ್ಣವಾಗಿ ಪ್ರಮಾಣೀಕರಿಸಲ್ಪಟ್ಟಿದೆ.

ಪೇಯುನಲ್ಲಿ ಹೆಚ್ಚು ವ್ಯವಹಾರ: PayU ಟೋಕನ್ ಹಬ್ ಒಂದೇ ಹಬ್ ಅಡಿ ನೆಟ್‌ವರ್ಕ್ ಟೋಕನ್‌ಗಳು ಮತ್ತು ವಿತರಕ ಟೋಕನ್‌ಗಳನ್ನು ನೀಡುವ ಅನನ್ಯ ಪರಿಹಾರವಾಗಿದೆ. ಇದು ಕಾರ್ಡ್ ಮತ್ತು ಬ್ಯಾಂಕ್ ನೆಟ್‌ವರ್ಕ್‌ಗಳ ವ್ಯಾಪಕ ವ್ಯಾಪ್ತಿ ಹೊಂದಿದೆ. ಅಮೆರಿಕನ್ ಎಕ್ಸ್‌ಪ್ರೆಸ್ ಮತ್ತು ಡೈನರ್ಸ್ ಕ್ಲಬ್‌ನಲ್ಲಿ ಸಹ ಲೈವ್ ಆಗಿದೆ. ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳ ಮೂಲಕ ನಡೆಯುವ ವಹಿವಾಟಿಗೆ ಹೋಲಿಸಿದರೆ, PayU ಮೂಲಕ ಪ್ರಕ್ರಿಯೆಗೊಳಿಸಲಾದ ಟೋಕನೈಸ್ ಮಾಡಿದ ವ್ಯವಹಾರ ಸರಾಸರಿ 6 ರಿಂದ ಶೇ 7ಕ್ಕೆ ಹೆಚ್ಚಿದೆ.

ಪೇ ಯು ಪಾವತಿಗಳ ಮುಖ್ಯ ಉತ್ಪನ್ನ ಅಧಿಕಾರಿ ಮಾನಸ್ ಮಿಶ್ರಾ ಅಭಿವೃದ್ಧಿಯ ಕುರಿತು ಮಾತನಾಡಿ, ಗ್ರಾಹಕರ ಅನುಕೂಲಕ್ಕಾಗಿ ರಾಜಿ ಮಾಡಿಕೊಳ್ಳದೇ ವ್ಯಾಪಾರಿಗಳಿಗೆ ಸರ್ಕಾರಿ ನಿಯಮಾವಳಿಗಳನ್ನು ಅನುಸರಿಸಲು ಸಹಾಯ ಮಾಡುವ PayUನ ಬದ್ಧತೆ ಈ ಸಾಧನೆ ಹೇಳುತ್ತದೆ. ನಾವು ಈಗಾಗಲೇ ದೇಶದ ಕೆಲವು ದೊಡ್ಡ ವ್ಯಾಪಾರಿಗಳನ್ನು ಸಂಯೋಜಿಸಿದ್ದೇವೆ. ಟೋಕನ್ ಹಬ್‌ನೊಂದಿಗೆ ನಾವು ಸರ್ಕಾರದ ಡಿಜಿಟಲ್ ಇಂಡಿಯಾ ಗುರಿಯನ್ನು ತಲುಪಲು ಕೆಲಸ ಮಾಡುತ್ತಿದ್ದೇವೆ ಅವರು ಹೇಳಿದ್ದಾರೆ.

ಇದನ್ನೂ ಓದಿ: ಡಾಲರ್​ ಎದುರು ರೂಪಾಯಿ ಮತ್ತಷ್ಟು ಕುಸಿತ: ಷೇರು ಮಾರುಕಟ್ಟೆಯಲ್ಲೂ ತಲ್ಲಣ

ಗ್ರಾಹಕರ ಕಾರ್ಡ್ ಡೇಟಾ ಸಂಗ್ರಹಕ್ಕೆ ಅನುಮತಿ: ಆನ್‌ಲೈನ್ ಕಾರ್ಡ್ ಡೇಟಾ ಸಂಗ್ರಹಣೆಯಲ್ಲಿ ಆರ್‌ಬಿಐನ ಇತ್ತೀಚಿನ ಮಾರ್ಗಸೂಚಿಗಳನ್ನು ಅನುಸರಿಸಲು ವ್ಯಾಪಾರಗಳಿಗೆ ಸಹಾಯ ಮಾಡಲು PayU ಟೋಕನ್ ಹಬ್ ಅನ್ನು ಅಕ್ಟೋಬರ್ 2021 ರಲ್ಲಿ ಪ್ರಾರಂಭಿಸಲಾಯಿತು. ಇದನ್ನು ವಿತರಿಸುವ ಬ್ಯಾಂಕ್‌ಗಳು ತಮ್ಮದೇ ಆದ ಟೋಕನ್‌ಗಳನ್ನು ಹೊಂದಲು ಅನುವು ಮಾಡಿಕೊಡುತ್ತವೆ.

RBIನ ವಿಸ್ತೃತ ಗಡುವಿನ ಪ್ರಕಾರ, ಸೆಪ್ಟೆಂಬರ್ 30, 2022 ರಿಂದ ಗ್ರಾಹಕರ ಕಾರ್ಡ್ ಡೇಟಾ ಸಂಗ್ರಹಿಸಲು ಬ್ಯಾಂಕ್​​ಗಳು ಮತ್ತು ನೆಟ್‌ವರ್ಕ್‌ಗಳಿಗೆ ಮಾತ್ರ ಅನುಮತಿಸಲಾಗುತ್ತದೆ.

ಆರ್​ಬಿಐ ಅಡಿ ಪೇಯು: ಇದು ಭಾರತೀಯ ರಿಸರ್ವ್ ಬ್ಯಾಂಕ್ ಅಡಿ ನಿಯಂತ್ರಿಸಲ್ಪಡುತ್ತದೆ. ಭಾರತೀಯ ವ್ಯಾಪಾರಿಗಳ ಡಿಜಿಟಲ್ ಪಾವತಿ ಅಗತ್ಯಗಳನ್ನು ಪೂರೈಸಲು ಇದು ಸಹಕಾರಿಯಾಗಿದೆ. ಇದು ಸ್ಥಳೀಯ ಪಾವತಿ ವಿಧಾನಗಳ ಮೂಲಕ ವ್ಯವಹಾರಗಳಿಗೆ ಆನ್‌ಲೈನ್ ಪಾವತಿ ಪರಿಹಾರಗಳನ್ನು ಒದಗಿಸುತ್ತದೆ. PayU 2017 ರಲ್ಲಿ LazyPay ಅನ್ನು ಅಭಿವೃದ್ಧಿಪಡಿಸಿತು. ಕ್ರೆಡಿಟ್ ಕಾರ್ಡ್​ ರೀತಿ ಪರ್ಯಾಯ ಸಾಲ ನೀಡುವ ವೇದಿಕೆಯಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.