ETV Bharat / business

ಮೂನ್ ​ಲೈಟಿಂಗ್​ಗಾಗಿ ಉದ್ಯೋಗಿಗಳ ಮೇಲೆ ಗೂಢಾಚಾರಿಕೆ ಮಾಡಬೇಡಿ: ಸತ್ಯ ನಾದೆಲ್ಲಾ

author img

By

Published : Sep 28, 2022, 10:20 PM IST

ವರ್ಕ್​ ಫ್ರಂ ಹೋಮ್​ ವಿಧಾನವನ್ನು ಮೈಕ್ರೋಸಾಫ್ಟ್​ ಸಿಇಒ ಸತ್ಯ ನಾದೆಲ್ಲಾ ಬೆಂಬಲಿಸಿದ್ದಾರೆ. ಇದು ಉದ್ಯೋಗಿಗಳ ಉತ್ಪಾದನೆ ಹೆಚ್ಚಿಸುತ್ತದೆ ಎಂದು ಹೇಳಿದ್ದಾರೆ. ಮೂನ್​ಲೈಟಿಂಗ್​ ಮಾಡುವ ಮೂಲಕ ಉದ್ಯೋಗಿಗಳ ಮೇಲೆ ಒತ್ತಡ ಹಾಕುವುದು ಸರಿಯಲ್ಲ ಎಂದೂ ನಾದೆಲ್ಲಾ ಹೇಳಿದ್ದಾರೆ.

satya-nadella
ಸತ್ಯ ನದೆಲ್ಲಾ

ಸ್ಯಾನ್ ಫ್ರಾನ್ಸಿಸ್ಕೋ: ಕೋವಿಡ್​ ವಕ್ಕರಿಸಿದ ಬಳಿಕ ಔದ್ಯೋಗಿಕ ವಲಯ ಮಹತ್ತರ ಬದಲಾವಣೆ ಕಂಡಿದೆ. ವರ್ಕ್​ ಫ್ರಂ ಹೋಮ್​ ವಿಧಾನ ಹೆಚ್ಚು ಮುನ್ನೆಲೆಗೆ ಬಂತು. ಇದು ಉದ್ಯೋಗಿಗಳ ಸಮಯ ಮತ್ತು ಕೆಲಸದ ಒತ್ತಡವನ್ನು ಕಡಿಮೆ ಮಾಡಿದೆ. ಆದರೆ, ಈ ಬಗ್ಗೆ ಉದ್ಯೋಗಿಗಳ ಮೇಲಧಿಕಾರಿಗಳು ಸಂಶಯ ವ್ಯಕ್ತಪಡಿಸಿದ್ದಾರೆ. ಅವರ ಉತ್ಪಾದಕತೆ ಸಾಕಾಗದು ಎಂದು ಅನುಮಾನಿಸಿದ್ದಾರೆ.

ಇದು ಮೂನ್​ಲೈಟಿಂಗ್​ಗೂ ದಾರಿ ಮಾಡಿಕೊಟ್ಟಿದ್ದು, ಗೂಢಾಚಾರಿಕೆ ನಡೆಸಲಾಗುತ್ತಿದೆ. ಇದನ್ನು ಮೈಕ್ರೋಸಾಫ್ಟ್​ ಸಿಇಒ, ಭಾರತ ಮೂಲದ ಸತ್ಯ ನದೆಲ್ಲಾ ಟೀಕಿಸಿದ್ದಾರೆ. ಉದ್ಯೋಗಿಗಳನ್ನು ಶಂಕಿಸುವುದು ಉಚಿತವಲ್ಲ. ಮನೆಕೆಲಸ ನಿಜಕ್ಕೂ ಉತ್ಪಾದಕ ಹೆಚ್ಚುತ್ತದೆ. ಅವರ ಮೇಲೆ ತೀವ್ರ ನಿಗಾ ವಹಿಸುವುದು ಉತ್ಪಾದಕತೆ ಹೆಚ್ಚಿಸುವ ಸೂಕ್ತ ಕ್ರಮವಲ್ಲ ಎಂದು ಹೇಳಿಕೆ ನೀಡಿದ್ದಾರೆ.

ಮೂನ್​ಲೈಟಿಂಗ್​ ಕಾರಣಕ್ಕಾಗಿ ಉದ್ಯೋಗಿಗಳ ಮೇಲೆ ಗೂಢಾಚಾರಿಕೆ ನಡೆಸುವುದು ಉತ್ಪಾದಕತಾ ಭ್ರಮೆಯಾಗಿದೆ. ಇದು ಉದ್ಯೋಗಿಗಳ ಕಾರ್ಯತತ್ಪರತೆಯನ್ನು ಹೆಚ್ಚಿಸದು. ಇದರಿಂದ ಅವರು ಆ ಕಂಪನಿ ಮೇಲೆ ಅನುಮಾನ ವ್ಯಕ್ತಪಡಿಸಬೇಕಾಗುತ್ತದೆ.

ಮೈಕ್ರೋಸಾಫ್ಟ್​ ಸಮೀಕ್ಷೆಯ ಪ್ರಕಾರ ಶೇ.80 ರಷ್ಟು ಮ್ಯಾನೇಜರ್​ಗಳು ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆಯೇ ಇಲ್ಲವೇ ಎಂಬುದರ ಮೇಲೆ ಗೂಢಾಚಾರಿಕೆ ನಡೆಸುತ್ತಾರೆ. ಹೀಗೆ ಮಾಡಿ ಉದ್ಯೋಗಿಗಳ ಉತ್ಪಾದಕತೆ ಸಾಕಾಗುತ್ತಿಲ್ಲ ಎಂದು ಹೇಳುತ್ತಾರೆ ಎಂದು ನಾದೆಲ್ಲಾ ಅಭಿಪ್ರಾಯಪಟ್ಟಿದ್ದಾರೆ.

ಕೊರೊನಾಗೂ ಮೊದಲು ಶೇ.2 ರಷ್ಟು ಉದ್ಯೋಗಿಗಳು ಮಾತ್ರ ಮನೆಯಿಂದ ಕೆಲಸ ಮಾಡುತ್ತಿದ್ದರು. ಇದೀಗ ಶೇ.20 ಕ್ಕೆ ಹೆಚ್ಚಿದೆ. ಮೈಕ್ರೋಸಾಫ್ಟ್‌ನ ಪ್ರಸ್ತುತ ವರ್ಕ್ ಫ್ರಮ್ ಹೋಮ್ ನೀತಿಯು ಶೇಕಡಾ 50 ರಷ್ಟು ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ಅನುಮತಿಸುತ್ತದೆ.

ಏನಿದು ಮೂನ್​ಲೈಟಿಂಗ್​: ಐಟಿ ವಲಯದಲ್ಲಿ ಹೆಚ್ಚಾಗಿ ಮನೆ ಕೆಲಸ ಬಂದ ಮೇಲೆ ಉದ್ಯೋಗಿಗಳು ಒಂದು ಕಂಪನಿಯಲ್ಲಿ ಕೆಲಸ ಮಾಡಿದ ಬಳಿಕ ಅವರು ಮತ್ತೊಂದು ಕಂಪನಿಗೆ ಕೆಲಸ ಮಾಡುವುದು. ಎರಡನೇ ಅವಧಿಗೆ ಬೇರೆ ಕಂಪನಿಗೆ ಕೆಲಸ ಮಾಡಿಕೊಡುವುದು ಮೂನ್​ಲೈಟಿಂಗ್​ ಎನ್ನುತ್ತಾರೆ. ಉದ್ಯೋಗಿಗಳು ಹೆಚ್ಚಿನ ಆದಾಯ ಗಳಿಸಲು ಈ ರೀತಿ ಎರಡು ಅವಧಿ ಮಾಡಿಕೊಂಡು ಕೆಲಸ ಮಾಡುತ್ತಾರೆ.

ವಿಪ್ರೋದ 300 ಉದ್ಯೋಗಿಗಳು ವಜಾ: ಭಾರತದ ಪ್ರಮುಖ ಐಟಿ ಕಂಪನಿಯಾದ ವಿಪ್ರೋ ಮೂನ್​ಲೈಟಿಂಗ್​ನಲ್ಲಿ ತೊಡಗಿದ್ದ ತನ್ನ 300 ಉದ್ಯೋಗಿಗಳನ್ನು ಗುರುತಿಸಿ ಕೆಲಸದಿಂದ ವಜಾ ಮಾಡಿತ್ತು. ತನ್ನ ಕಂಪನಿಯಲ್ಲಿ ಕೆಲಸ ಮಾಡುತ್ತಾ ಪ್ರತಿಸ್ಪರ್ಧಿ ಕಂಪನಿಗೂ ಕೆಲಸ ಮಾಡುವುದು ನಿಯಮ ಉಲ್ಲಂಘನೆ ಎಂದು ಆರೋಪಿಸಿ ಮೂನ್​ ಲೈಟಿಂಗ್​ನಲ್ಲಿ ತೊಡಗಿದ್ದ ತನ್ನ ಉದ್ಯೋಗಿಗಳನ್ನು ಗುರುತಿಸಿ ವಿಪ್ರೋ ಮುಖ್ಯಸ್ಥ ರಿಷದ್​ ಪ್ರೇಮ್​ ಜಿ ಖಡಕ್​ ವಾರ್ನಿಂಗ್​ ನೀಡಿ ತಪ್ಪಿತಸ್ಥ ಉದ್ಯೋಗಿಗಳ ವಜಾಕ್ಕೆ ಸೂಚಿಸಿದ್ದರು.

ಓದಿ: ಕಷ್ಟಕಾಲದಲ್ಲಿ ಕೈಹಿಡಿಯುವ ಸಪ್ಲಿಮೆಂಟರಿ ರೈಡರ್ ವಿಮೆ: ಇಲ್ಲಿದೆ ಮಾಹಿತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.