ETV Bharat / business

2 ಹೊಸ ಎಸ್‌ಯುವಿ ಕಾರು ಬಿಡುಗಡೆಗೆ ಮುಂದಾದ ಮಾರುತಿ ಸುಜುಕಿ.. ಏನೆಲ್ಲಾ ವಿಶೇಷತೆ?

author img

By

Published : Dec 23, 2022, 9:53 AM IST

ಮಾರುತಿ ಸುಜುಕಿ ಕಂಪನಿಯು 40 ವರ್ಷಗಳ ಹಿಂದೆ ಭಾರತದಲ್ಲಿ ಕಾರ್ಯಾಚರಣೆ ಪ್ರಾರಂಭಿಸಿದಾಗಿನಿಂದ 2.5 ಕೋಟಿ ವಾಹನಗಳನ್ನು ಹೊರತಂದಿದೆ. ಮುಂದಿನ ವರ್ಷದ ಆರಂಭದಲ್ಲಿ ಸ್ಪೋರ್ಟ್ ಯುಟಿಲಿಟಿ ವೆಹಿಕಲ್ ವಿಭಾಗದಿಂದ 2 ಹೊಸ ಮಾದರಿಯ ಕಾರುಗಳನ್ನು ಬಿಡುಗಡೆ ಮಾಡಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

maruti suzuki
ಮಾರುತಿ ಸುಜುಕಿ

ಚೆನ್ನೈ: ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ಕಂಪನಿಯು ತನ್ನ ಮಾರುಕಟ್ಟೆ ಪಾಲನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದ್ದು, ಮುಂದಿನ ವರ್ಷದ ಆರಂಭದಲ್ಲಿ ಸ್ಪೋರ್ಟ್ ಯುಟಿಲಿಟಿ ವೆಹಿಕಲ್ (ಎಸ್‌ಯುವಿ) ವಿಭಾಗದಿಂದ ಆಟೋಎಕ್ಸ್‌ಪೋದಲ್ಲಿ ಎರಡು ಹೊಸ ಮಾದರಿ ಕಾರುಗಳನ್ನು ಬಿಡುಗಡೆ ಮಾಡಲಿದೆ ಎಂದು ಕಂಪನಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಎರಡು ಹೊಸ ಎಸ್‌ಯುವಿಗಳ ಹೊರತಾಗಿಯೂ ಮಾರುತಿ ಸುಜುಕಿ ತನ್ನ ಪರಿಕಲ್ಪನೆಯ ಎಲೆಕ್ಟ್ರಿಕ್ ಎಸ್‌ಯುವಿ ಮತ್ತು ಫ್ಲೆಕ್ಸ್ ಇಂಧನವನ್ನು ಆಟೋಎಕ್ಸ್‌ಪೋದಲ್ಲಿ ಪ್ರದರ್ಶಿಸಲಿದೆ ಎಂದು ಮಾರ್ಕೆಟಿಂಗ್ ಮತ್ತು ಮಾರಾಟದ ಹಿರಿಯ ಕಾರ್ಯನಿರ್ವಾಹಕ ನಿರ್ದೇಶಕ ಶಶಾಂಕ್ ಶ್ರೀವಾಸ್ತವ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಹೇಳಿದ್ದಾರೆ.

ಸಿಎನ್‌ಜಿ ಚಾಲಿತ ಎಸ್‌ಯುವಿಯನ್ನು ಬಿಡುಗಡೆ ಮಾಡುವ ಕಂಪನಿಯ ಯೋಜನೆಗಳ ಕುರಿತಾದ ಪ್ರಶ್ನೆಗೆ ಉತ್ತರಿಸಿದ ಅವರು, ಮಾರುತಿ ಸುಜುಕಿಯ ಪೋರ್ಟ್‌ಫೋಲಿಯೊದಲ್ಲಿ ಸಿಎನ್‌ಜಿ ಮಾದರಿಗಳ ಸಂಖ್ಯೆ ಹೆಚ್ಚುತ್ತಿದೆ. ಕಂಪನಿಯು ಹೆಚ್ಚಿನ ಸಿಎನ್‌ಜಿ ಚಾಲಿತ ಮಾದರಿಗಳನ್ನು ಪರಿಚಯಿಸಲು ಬಯಸುತ್ತಿದೆ. ಎರಡು ಹೊಸ ಎಸ್‌ಯುವಿಗಳು ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿಯ ಪಾಲನ್ನು ಹೆಚ್ಚಿಸಲು ಅನುವು ಮಾಡಿಕೊಡುತ್ತದೆ. ಕಂಪನಿಯು 40 ವರ್ಷಗಳ ಹಿಂದೆ ಭಾರತದಲ್ಲಿ ತನ್ನ ಸೇವೆ ಪ್ರಾರಂಭಿಸಿದಾಗಿನಿಂದ 2.5 ಕೋಟಿ ವಾಹನಗಳನ್ನು ಹೊರತಂದಿದೆ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಗಗನಕ್ಕೆ ಜಿಗಿಯುತ್ತಿರುವ ಮಾರುತಿ ಕಾರುಗಳ ದರ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.