ETV Bharat / business

Market highlights: ಸೆನ್ಸೆಕ್ಸ್​ 92 ಪಾಯಿಂಟ್​ & ನಿಫ್ಟಿ 28 ಪಾಯಿಂಟ್ ಏರಿಕೆ

author img

By ETV Bharat Karnataka Team

Published : Nov 22, 2023, 7:36 PM IST

ಬುಧವಾರದ ವಹಿವಾಟಿನಲ್ಲಿ ಭಾರತೀಯ ಷೇರು ಮಾರುಕಟ್ಟೆಗಳು ಏರಿಕೆಯೊಂದಿಗೆ ಕೊನೆಗೊಂಡಿವೆ.

Market highlights Sensex up 92 pts at close Nifty above 19800
Market highlights Sensex up 92 pts at close Nifty above 19800

ಮುಂಬೈ : ಭಾರತೀಯ ಷೇರು ಮಾರುಕಟ್ಟೆಗಳು ಬುಧವಾರದ ವಹಿವಾಟಿನಲ್ಲಿ ಏರಿಕೆಯೊಂದಿಗೆ ಕೊನೆಗೊಂಡಿವೆ. ಸೆನ್ಸೆಕ್ಸ್ 92.47 ಪಾಯಿಂಟ್ ಅಥವಾ ಶೇಕಡಾ 0.14 ರಷ್ಟು ಏರಿಕೆ ಕಂಡು 66,023.24 ಕ್ಕೆ ತಲುಪಿದೆ ಮತ್ತು ನಿಫ್ಟಿ 28.40 ಪಾಯಿಂಟ್ ಅಥವಾ ಶೇಕಡಾ 0.14 ರಷ್ಟು ಏರಿಕೆ ಕಂಡು 19,811.80 ಕ್ಕೆ ತಲುಪಿವೆ.

ನಿಫ್ಟಿಯಲ್ಲಿ ಬಿಪಿಸಿಎಲ್, ಸಿಪ್ಲಾ, ಎನ್​ಟಿಪಿಸಿ, ಇನ್ಫೋಸಿಸ್ ಮತ್ತು ಪವರ್ ಗ್ರಿಡ್ ಕಾರ್ಪೊರೇಷನ್ ಹೆಚ್ಚು ಲಾಭ ಗಳಿಸಿದರೆ, ಇಂಡಸ್ಇಂಡ್ ಬ್ಯಾಂಕ್, ಹಿಂಡಾಲ್ಕೊ ಇಂಡಸ್ಟ್ರೀಸ್, ಕೋಟಕ್ ಮಹೀಂದ್ರಾ ಬ್ಯಾಂಕ್, ಅದಾನಿ ಎಂಟರ್​ ಪ್ರೈಸಸ್ ಮತ್ತು ಅದಾನಿ ಪೋರ್ಟ್ಸ್ ನಷ್ಟ ಅನುಭವಿಸಿದವು.

ಸೆನ್ಸೆಕ್ಸ್-30 ಯಲ್ಲಿ ಪವರ್ ಗ್ರಿಡ್, ಟೈಟನ್, ಎನ್​ಟಿಪಿಸಿ ಮತ್ತು ಬಜಾಜ್ ಫಿನ್​ಸರ್ವ್ ಗಮನಾರ್ಹ ಏರಿಕೆ ಕಂಡರೆ, ಇಂಡಸ್ಇಂಡ್ ಬ್ಯಾಂಕ್ ಶೇಕಡಾ 2.3 ರಷ್ಟು ಕುಸಿದಿದೆ. ಕೊಟಕ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಮತ್ತು ಟಾಟಾ ಮೋಟಾರ್ಸ್ ನಷ್ಟ ಅನುಭವಿಸಿದ ಇತರ ಪ್ರಮುಖ ಷೇರುಗಳಾಗಿವೆ. ಬಿಎಸ್ಇ ಮಿಡ್​ಕ್ಯಾಪ್ ಸೂಚ್ಯಂಕ ಫ್ಲಾಟ್ ಆಗಿದ್ದರೆ, ಸ್ಮಾಲ್ ಕ್ಯಾಪ್ ಸೂಚ್ಯಂಕ ಸುಮಾರು ಶೇಕಡಾ 1ರಷ್ಟು ಕುಸಿದಿದೆ.

ಪೆಟ್ರೋಲಿಯಂ ರಫ್ತು ಮಾಡುವ ದೇಶಗಳ ಸಂಘಟನೆ ಓಪೆಕ್ ವಾರಾಂತ್ಯದಲ್ಲಿ ನಿಗದಿಯಾಗಿದ್ದ ಪ್ರಮುಖ ಸಭೆಯನ್ನು ಮುಂದೂಡಿದ ನಂತರ ನಂತರ ಯುಎಸ್ ಕಚ್ಚಾ ತೈಲ ಬೆಲೆಗಳು ಶೇಕಡಾ 4 ಕ್ಕಿಂತ ಹೆಚ್ಚು ಕುಸಿದವು. ಜನವರಿಯಲ್ಲಿ ವೆಸ್ಟ್ ಟೆಕ್ಸಾಸ್ ಇಂಟರ್​ ಮೀಡಿಯೇಟ್ ಒಪ್ಪಂದವು ಬ್ಯಾರೆಲ್​ಗೆ 3.27 ಡಾಲರ್ ಅಥವಾ ಶೇಕಡಾ 4.2 ರಷ್ಟು ಇಳಿದು 74.50 ಡಾಲರ್​ಗೆ ತಲುಪಿದ್ದರೆ, ಜನವರಿಯಲ್ಲಿ ಬ್ರೆಂಟ್ ಒಪ್ಪಂದವು ಬ್ಯಾರೆಲ್​ಗೆ 3.32 ಡಾಲರ್ ಅಥವಾ ಶೇಕಡಾ 4.03 ಕುಸಿದು 79.13 ಡಾಲರ್​ಗೆ ತಲುಪಿದೆ.

ನವೆಂಬರ್ 22 ರಂದು ಯುಎಸ್ ಡಾಲರ್ ವಿರುದ್ಧ ರೂಪಾಯಿ 3 ಪೈಸೆ ಕುಸಿದು 83.31 ಕ್ಕೆ (ತಾತ್ಕಾಲಿಕ) ಸ್ಥಿರವಾಯಿತು. ಇಂಟರ್​ ಬ್ಯಾಂಕ್ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ರೂಪಾಯಿ 83.31 ರಲ್ಲಿ ಪ್ರಾರಂಭವಾಯಿತು ಮತ್ತು ಡಾಲರ್ ವಿರುದ್ಧ 83.34 ರ ಕನಿಷ್ಠ ಮಟ್ಟ ಮುಟ್ಟಿತು. ಇದು ಅಂತಿಮವಾಗಿ ಡಾಲರ್ ವಿರುದ್ಧ 83.31 (ತಾತ್ಕಾಲಿಕ) ಕ್ಕೆ ಸ್ಥಿರವಾಯಿತು. ಒಟ್ಟಾರೆ ರೂಪಾಯಿ ಹಿಂದಿನ ಮುಕ್ತಾಯಕ್ಕಿಂತ 3 ಪೈಸೆ ಕುಸಿತ ದಾಖಲಿಸಿದೆ.

ಇದನ್ನೂ ಓದಿ : ಬಿನಾನ್ಸ್​ ಕ್ರಿಪ್ಟೊಗೆ $4 ಬಿಲಿಯನ್ ಡಾಲರ್ ದಂಡ; ಸಿಇಒ ಹುದ್ದೆ ತೊರೆಯಲಿದ್ದಾರೆ ಝಾವೋ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.