ETV Bharat / business

ಮಾರ್ಚ್‌ನಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದ ಜಿಎಸ್​ಟಿ ಸಂಗ್ರಹ !

author img

By

Published : Apr 1, 2022, 6:10 PM IST

ಮಾರ್ಚ್ 2022ರಲ್ಲಿ ಸಂಗ್ರಹವಾದ ಒಟ್ಟು ಜಿಎಸ್​ಟಿಯೂ ಸಾರ್ವಕಾಲಿಕವಾಗಿ ಗರಿಷ್ಠವಾಗಿದೆ. ಜನವರಿಯಲ್ಲಿ ಸಂಗ್ರಹಿಸಲಾದ 1,40,986 ಕೋಟಿ ರೂ.ಗಳ ಹಿಂದಿನ ದಾಖಲೆ ಉಲ್ಲಂಘಿಸಿದೆ.

ಜಿಎಸ್​ಟಿ
ಜಿಎಸ್​ಟಿ

ನವದೆಹಲಿ: ಸರಕು ಮತ್ತು ಸೇವಾ ತೆರಿಗೆಯಿಂದ (GST) ಸಂಗ್ರಹವಾಗುವ ಒಟ್ಟು ಆದಾಯವು ಮಾರ್ಚ್​ ತಿಂಗಳಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದೆ. ಈ ಬಾರಿ 1,42,095 ಕೋಟಿ ರೂ. ಆದಾಯ ಸಂಗ್ರಹವಾಗಿದೆ. ಇದು ಹಿಂದಿನ ದಾಖಲೆ ಮುರಿದಿದ್ದು, ಜನವರಿ 2022ರಲ್ಲಿ 1,40,986 ಕೋಟಿ ರೂ. ಸಂಗ್ರಹವಾಗಿತ್ತು ಎಂದು ಕೇಂದ್ರ ಹಣಕಾಸು ಸಚಿವಾಲಯ ಶುಕ್ರವಾರ ತಿಳಿಸಿದೆ.

ಮಾರ್ಚ್ 2022 ರಲ್ಲಿ ಒಟ್ಟು GST ಆದಾಯವು 1,42,095 ಕೋಟಿ ರೂ. ಆಗಿದೆ. ಇದರಲ್ಲಿ ಕೇಂದ್ರದ ಜಿಎಸ್​ಟಿ 25,830 ಕೋಟಿ ರೂ., ರಾಜ್ಯದ ಜಿಎಸ್​ಟಿ 32,378 ಕೋಟಿ ರೂ., ಇಂಟಿಗ್ರೇಟೆಡ್ ಜಿಎಸ್​ಟಿ 74,470 ಕೋಟಿ ರೂ. ಮತ್ತು ಸೆಸ್ 9,417 ಕೋಟಿ ರೂ. ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

ಇದನ್ನೂ ಓದಿ: ರಷ್ಯಾ- ಉಕ್ರೇನ್​ ಯುದ್ಧದಿಂದ ಸೆಮಿಕಂಡಕ್ಟರ್​ ಉದ್ಯಮಕ್ಕೆ ಹೊಡೆತ: ಕೇಂದ್ರ ಸರ್ಕಾರ

ಸರ್ಕಾರವು ಸಿಜಿಎಸ್​​​​ಟಿಗೆ 29,816 ಕೋಟಿ ರೂ. ಮತ್ತು ಎಸ್​​​​​​ಸಿ- ಎಸ್​​ಟಿಗೆ 25,032 ಕೋಟಿ ರೂ.ನನ್ನು ಐಜಿಎಸ್​​​ಟಿಯಿಂದ ನೀಡಿದೆ. ಜೊತೆಗೆ ಮಾರ್ಚ್​ನಲ್ಲಿ ಕೇಂದ್ರಾಡಳಿತ ಪ್ರದೇಶಗಳಿಗೆ ಮತ್ತು ರಾಜ್ಯಗಳಿಗೆ 50:50 ಅನುಪಾತದಲ್ಲಿ ಕೇಂದ್ರವು ರೂ. 20,000 ಕೋಟಿ ಐಜಿಎಸ್​​​​ಟಿಯನ್ನು ಇತ್ಯರ್ಥಪಡಿಸಿದೆ. ಮಾರ್ಚ್ 2022 ರಲ್ಲಿ ಕೇಂದ್ರ ಮತ್ತು ರಾಜ್ಯಗಳ ಒಟ್ಟು ಆದಾಯದಲ್ಲಿ CGST ಗಾಗಿ 65,646 ಕೋಟಿ ರೂ. ಮತ್ತು SGST ಗಾಗಿ 67,410 ಕೋಟಿ ರೂ.ನನ್ನು ನೀಡಿದೆ. ಅಷ್ಟೇ ಅಲ್ಲದೆ ಕೇಂದ್ರವು ಇದೇ ತಿಂಗಳಲ್ಲಿ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ 18,252 ಕೋಟಿ ರೂಪಾಯಿಗಳ ಜಿಎಸ್‌ಟಿ ಪರಿಹಾರವನ್ನು ಬಿಡುಗಡೆ ಮಾಡಿದೆ.

ಮಾರ್ಚ್ 2022 ರ ಆದಾಯವು ಕಳೆದ ವರ್ಷದ ಇದೇ ತಿಂಗಳ ಜಿಎಸ್‌ಟಿ ಆದಾಯಕ್ಕಿಂತ 15 ಪ್ರತಿಶತ ಹೆಚ್ಚಾಗಿದೆ. ಮಾರ್ಚ್ 2020 ರಲ್ಲಿನ ಜಿಎಸ್‌ಟಿ ಆದಾಯಕ್ಕಿಂತ 46 ಪ್ರತಿಶತ ಹೆಚ್ಚಾಗಿದೆ. ಈ ತಿಂಗಳ ಅವಧಿಯಲ್ಲಿ, ಸರಕುಗಳ ಆಮದು ಆದಾಯವು ಶೇ.25 ರಷ್ಟು ಹೆಚ್ಚಾಗಿದೆ ಮತ್ತು ದೇಶೀಯ ವಹಿವಾಟುಗಳಿಂದ ಕಳೆದ ವರ್ಷದ ಇದೇ ತಿಂಗಳಿನಲ್ಲಿ ಈ ಮೂಲಗಳಿಂದ ಬಂದ ಆದಾಯಕ್ಕಿಂತ ಶೇ.11 ಪ್ರತಿಶತದಷ್ಟು ಅಧಿಕವಾಗಿದೆ.

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.