ETV Bharat / business

ಅಮೆರಿಕ ಪತ್ರಿಕೆ 'ದಿ ವಾಷಿಂಗ್ಟನ್ ಪೋಸ್ಟ್' CEO ಹುದ್ದೆಯಿಂದ ಫ್ರೆಡ್ ರಯಾನ್ ನಿರ್ಗಮನ

'ದಿ ವಾಷಿಂಗ್ಟನ್ ಪೋಸ್ಟ್'ನ ಪ್ರಕಾಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಫ್ರೆಡ್ ರಯಾನ್ ತಮ್ಮ ಹುದ್ದೆಯಿಂದ ನಿರ್ಗಮಿಸಿದ್ದಾರೆ.

ಫ್ರೆಡ್ ರಯಾನ್
ಫ್ರೆಡ್ ರಯಾನ್
author img

By

Published : Jun 13, 2023, 10:25 AM IST

ವಾಷಿಂಗ್ಟನ್ (ಅಮೆರಿಕ): 9 ವರ್ಷದ ಅಧಿಕಾರದ ನಂತರ ಅಮೆರಿಕದ ಹಳೆಯ ದಿನ ಪತ್ರಿಕೆ 'ದಿ ವಾಷಿಂಗ್ಟನ್ ಪೋಸ್ಟ್'ನ ಪ್ರಕಾಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಫ್ರೆಡ್ ರಯಾನ್ ತಮ್ಮ ಹುದ್ದೆಯಿಂದ ನಿರ್ಗಮಿಸಿದ್ದಾರೆ. ಪತ್ರಿಕೆಯ ಮಾಲೀಕ ಜೆಫ್ ಬೆಜೋಸ್ ಫ್ರೆಡ್ ರಯಾನ್ ನಿರ್ಗಮನವನ್ನು ಸಿಬ್ಬಂದಿಗೆ ಜ್ಞಾಪಕ ಪತ್ರದ ಮೂಲಕ ತಿಳಿಸಿದ್ದಾರೆ. ಜೊತೆಗೆ ರಯಾನ್ ಇನ್ನು 2 ತಿಂಗಳ ಮಟ್ಟಿಗೆ 'ದಿ ವಾಷಿಂಗ್ಟನ್ ಪೋಸ್ಟ್'ನ ಪ್ರಕಾಶಕರು ಮತ್ತು CEO ಆಗಿ ಮುಂದುವರಿಯುತ್ತಾರೆ ಎಂದು ತಿಳಿಸಿದ್ದಾರೆ.

ಅಮೆಜಾನ್​ ಸಂಸ್ಥಾಪಕನಾದ ಜೆಫ್ ಬೆಜೋಸ್ ದಿ ವಾಷಿಂಗ್ಟನ್ ಪೋಸ್ಟ್ ಪತ್ರಿಕೆಯ ಸಂಸ್ಥೆಯನ್ನು ಖರೀದಿಸಿದ ನಂತರ ಫ್ರೆಡ್ ರಯಾನ್ ತಮ್ಮ ಹುದ್ದೆಗೆ ರಾಜೀನಾಮೆ ನೀಡುತ್ತಿದ್ದಾರೆ. ಫ್ರೆಡ್ ರಯಾನ್ ಮುಂದೆ ರೊನಾಲ್ಡ್ ರೇಗನ್ ಅಧ್ಯಕ್ಷೀಯ ಪ್ರತಿಷ್ಠಾನದಲ್ಲಿ ಸಾರ್ವಜನಿಕ ನಾಗರಿಕತೆಯ ಮೇಲೆ ಹೊಸದಾಗಿ ಸ್ಥಾಪಿಸಲಾದ ಪಕ್ಷಾತೀತ ಕೇಂದ್ರದ ಉಸ್ತುವಾರಿ ವಹಿಸಿಕೊಳ್ಳಲಿದ್ದಾರೆ.

ಇನ್ನು ಗೇಟ್ಸ್ ಫೌಂಡೇಶನ್‌ನ ಸಂಸ್ಥಾಪಕ ಮುಖ್ಯ ಕಾರ್ಯನಿರ್ವಾಹಕ ಮತ್ತು ಅಮೆಜಾನ್ ಮಂಡಳಿಯ ಮಾಜಿ ನಿರ್ದೇಶಕಿಯಾಗಿರುವ ಪ್ಯಾಟಿ ಸ್ಟೋನ್ಸಿಫರ್ ಅವರು ವಾಷಿಂಗ್ಟನ್ ಪೋಸ್ಟ್‌ನ ಮಧ್ಯಂತರ CEO ಆಗಿ ನೇಮಕಗೊಂಡಿದ್ದಾರೆ. ಇವರಿಗೆ ರಿಯಾನ್ ಅವರ ಉತ್ತರಾಧಿಕಾರಿಯನ್ನು ಹುಡುಕುವ ಜವಾಬ್ದಾರಿ ಜೊತೆಗೆ ಅಲ್ಲಿ ತನಕ ವಾಷಿಂಗ್ಟನ್ ಪೋಸ್ಟ್‌ ಅನ್ನು ಮುಂದುವರೆಸಿಕೊಂಡು ಹೋಗುವ ಅಧಿಕಾರ ನೀಡಲಾಗಿದೆ.

ರಯಾನ್ ಅವರು ಕೇಂದ್ರದ ಧ್ಯೇಯೋದ್ದೇಶಕ್ಕೆ ತಮ್ಮ ದೀರ್ಘಕಾಲದ ಬದ್ಧತೆಯನ್ನು ಒತ್ತಿ ಹೇಳಿದ್ದು, ನಾಗರಿಕತೆಯ ಕುಸಿತವು ನಮ್ಮ ಪ್ರಜಾಪ್ರಭುತ್ವದ ಅಡಿಪಾಯಕ್ಕೆ ಬೆದರಿಕೆಂತಾಗಿದೆ ಎಂದಿದ್ದಾರೆ. ಜೊತೆಗೆ ಈ ಹಿಂದೆ ರೇಗನ್ ಆಡಳಿತದಲ್ಲಿ ಸೇವೆ ಸಲ್ಲಿಸಿರುವುದನ್ನು ಅವರು ನನ್ನ ವೃತ್ತಿಜೀವನದ ಆರಂಭದಲ್ಲಿ ನಾನು ಮಾಡಿದ ಯಾವುದೋ ಒಂದು ಪುಸ್ತಕ ಎಂದು ಪರಿಗಣಿಸಿದ್ದಾರೆ. ತಮ್ಮ ಹೊಸ ಉದ್ಯಮದಲ್ಲಿ ಜೆಫ್ ಬೆಜೋಸ್ ಅವರ ಸಂಪೂರ್ಣ ಬೆಂಬಲವಿದೆ ಎಂದು ರಿಯಾನ್ ವ್ಯಕ್ತಪಡಿಸಿದ್ದಾರೆ.

ಆದರೆ, ಅವರೊಂದಿಗಿನ ಸಂಬಂಧ ಹತ್ತಿರವಾಗಿರಲು ಸಾಧ್ಯವಿಲ್ಲ. ಬೆಜೋಸ್ ಅವರು ಸಾರ್ವಜನಿಕ ಜೀವನದಲ್ಲಿ ನಾಗರಿಕತೆಯ ಸವೆತವನ್ನು ಪರಿಹರಿಸುವುದರ ಕುರಿತು ಆಸಕ್ತಿ ಹೊಂದಿದ್ದಾರೆ. ಜೊತೆಗೆ ಪಕ್ಷಾತೀತ ಕೇಂದ್ರಕ್ಕಾಗಿ ಆರಂಭಿಕ ಹಣವನ್ನು ಒದಗಿಸಿದ್ದಾರೆ. ಆದರೆ ಆ ಮೊತ್ತವನ್ನು ಬಹಿರಂಗಪಡಿಸಿಲ್ಲ.

ಇನ್ನು ನಿರ್ಗಮನದ ಕುರಿತು ಸಿಬ್ಬಂದಿಗಳಿಗೆ ನೀಡಿರುವ ಜ್ಞಾಪಕ ಪತ್ರದಲ್ಲಿ, ಬೆಜೋಸ್​ ರಯಾನ್ ಅವರ ನಾಯಕತ್ವಕ್ಕಾಗಿ ತಮ್ಮ ಆಳವಾದ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ. ಮತ್ತು ಪತ್ರಿಕೋದ್ಯಮ ಮತ್ತು ತಂತ್ರಜ್ಞಾನದ ಮೇಲೆ ರಯಾನ್​ ನಿರ್ವಹಿಸಿರುವ ಕರ್ತವ್ಯದ ಕುರಿತು ಅವರನ್ನು ಶ್ಲಾಘಿಸಿದರು. ರಯಾನ್ ಅವರ ಅಧಿಕಾರಾವಧಿಯಲ್ಲಿ ದಿ ವಾಷಿಂಗ್ಟನ್ ಪೋಸ್ಟ್ ನ ರೂಪಾಂತರ, ಪ್ರಾಥಮಿಕವಾಗಿ ಸ್ಥಳೀಯ ಮುದ್ರಣ ಪತ್ರಿಕೆಯಿಂದ ಜಾಗತಿಕ ಡಿಜಿಟಲ್ ಪ್ರಕಟಣೆಗೆ ಪರಿವರ್ತನೆಗೊಂಡಿತು.

ಇನ್ನು ಪತ್ರಿಕೆಯ ಭವಿಷ್ಯದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ ಬೆಜೋಸ್ ನಾನು ಧೃಡವಾಗಿ ನಂಬುತ್ತೇನೆ ಯಶಸ್ವಿ ಪತ್ರಿಕೋದ್ಯಮಕ್ಕೆ ವಾಷಿಂಗ್ಟನ್ ಪೋಸ್ಟ್ ಉತ್ತಮ ಮಾದರಿಯಾಗಲಿದೆ. ವಾಷಿಂಗ್ಟನ್ ಪೋಸ್ಟ್ ಗುಣಮಟ್ಟದಲ್ಲಿ ಉತ್ತಮ ಗುಣಮಟ್ಟದ ಪತ್ರಿಕೋದ್ಯಮವಾಗುವಲ್ಲಿ ನನಗೆ ಸಂದೇಹವಿಲ್ಲ. ಇದು ಯಾವಾಗಲು ಯಶಸ್ವಿಯಾಗಲಿದೆ ಎಂದಿದ್ದಾರೆ.

ಇದನ್ನೂ ಓದಿ: Rozgar Mela: 70,000 ನೇಮಕಾತಿ ಪತ್ರ ವಿತರಿಸಲಿರುವ ಪ್ರಧಾನಿ ಮೋದಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.