ETV Bharat / business

ಪಾಕಿಸ್ತಾನದಲ್ಲಿ ಅತಿವೃಷ್ಟಿ.. ಭಾರತದಲ್ಲಿ ಒಣ ಖರ್ಜೂರದ ಬೆಲೆಯೇರಿಕೆ

author img

By

Published : Aug 17, 2022, 10:45 AM IST

ಈ ಬಾರಿ ಪಾಕಿಸ್ತಾನದಲ್ಲಿ ಖರ್ಜೂರ ಉತ್ಪಾದನೆ ಇಳಿಮುಖವಾಗಿದೆ. ಬೆಳೆದ ಶೇ 30 ರಷ್ಟು ಖರ್ಜೂರವು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಲ್ಪಡುವಂಥ ಉತ್ತಮ ಗುಣಮಟ್ಟ ಹೊಂದಿಲ್ಲ. ಇನ್ನುಳಿದ ಶೇ 20 ರಷ್ಟು ಖರ್ಜೂರ ಮಾತ್ರ ಭಾರತಕ್ಕೆ ಬರುತ್ತಿದೆ.

ಒಣ ಖರ್ಜೂರ
dry dates

ಔರಂಗಾಬಾದ್ (ಮಹಾರಾಷ್ಟ್ರ): ಚಳಿಯ ದಿನಗಳಲ್ಲಿ ಸೇವಿಸಲು ಉತ್ತಮ ಪೌಷ್ಟಿಕ ಆಹಾರವಾಗಿರುವ ಖರ್ಜೂರ ಈಗ ಜನಸಾಮಾನ್ಯರ ಕೈಗೆಟುಕದ ಸ್ಥಿತಿ ಬರುತ್ತಿದೆ. ಮಹಾರಾಷ್ಟ್ರದಲ್ಲಿ ಮಾರಾಟವಾಗುವ ಬಹುತೇಕ ಖರ್ಜೂರ ಪಾಕಿಸ್ತಾನದಿಂದ ಬರುತ್ತದೆ. ಆದರೆ, ಈಗ ಪಾಕಿಸ್ತಾನದಲ್ಲಿ ಅತಿವೃಷ್ಟಿಯಾಗುತ್ತಿರುವ ಕಾರಣದಿಂದ ಅಲ್ಲಿಂದ ಬರುವ ಖರ್ಜೂರದ ಪ್ರಮಾಣದಲ್ಲಿ ಶೇ 50 ರಷ್ಟು ಇಳಿಕೆಯಾಗಿದೆ. ಹೀಗಾಗಿ ಖರ್ಜೂರದ ದರವೂ ಏರಿಕೆಯಾಗುತ್ತಿದೆ.

ಭಾರತವು ದೊಡ್ಡ ಪ್ರಮಾಣದಲ್ಲಿ ಖರ್ಜೂರವನ್ನು ಆಮದು ಮಾಡಿಕೊಳ್ಳುತ್ತದೆ. ಇದರಲ್ಲಿ ಬಹುತೇಕ ಸರಕು ಪಾಕಿಸ್ತಾನದಿಂದ ಬರುತ್ತದೆ. ಖರ್ಜೂರ ಬೆಳೆಯಲು ಪಾಕಿಸ್ತಾನದ ವಾತಾವರಣ ಅತಿ ಉತ್ತಮವಾಗಿರುವ ಕಾರಣದಿಂದ ಅಲ್ಲಿ ಹೆಚ್ಚು ಪ್ರಮಾಣದಲ್ಲಿ ಖರ್ಜೂರ ಬೆಳೆಯಲಾಗುತ್ತದೆ. ಭಾರತವು ಪ್ರತಿವರ್ಷ 75 ಸಾವಿರ ಟನ್ ಅಂದರೆ 17 ಸಾವಿರ ಲಾರಿಗಳಷ್ಟು ಖರ್ಜೂರವನ್ನು ಹೊರಗಿನಿಂದ ತರಿಸುತ್ತದೆ.

ಅದರಲ್ಲಿನ ಶೇ 20 ರಿಂದ 25 ರಷ್ಟು ಸರಕು ಮಹಾರಾಷ್ಟ್ರದ ಖರ್ಜೂರ ಮಾರುಕಟ್ಟೆಗೆ ಆಗಮಿಸುತ್ತದೆ. ರಾಜ್ಯಕ್ಕೆ ಪಾಕಿಸ್ತಾನದಿಂದ ಶೇ 80 ರಿಂದ 90ರಷ್ಟು ಖರ್ಜೂರ ಬರುತ್ತದೆ. ಇನ್ನುಳಿದ ಖರ್ಜೂರ ಮಸ್ಕತ್ ಹಾಗೂ ಓಮನ್ ದೇಶಗಳಿಂದ ಬರುತ್ತದೆ. ಈ ವರ್ಷ ಪಾಕಿಸ್ತಾನದಲ್ಲಿನ ಅತಿವೃಷ್ಟಿಯ ಕಾರಣದಿಂದ ಖರ್ಜೂರ ಬರುವುದು ಕಡಿಮೆಯಾಗಿದೆ.

ಪಾಕಿಸ್ತಾನದಲ್ಲಿ ಈ ಬಾರಿ ಒಟ್ಟು ಶೇ 50ರಷ್ಟು ಖರ್ಜೂರ ಉತ್ಪಾದನೆ ಇಳಿಮುಖವಾಗಿದೆ. ಬೆಳೆದ ಶೇ 30 ರಷ್ಟು ಖರ್ಜೂರವು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಲ್ಪಡುವಂಥ ಉತ್ತಮ ಗುಣಮಟ್ಟ ಹೊಂದಿಲ್ಲ. ಇನ್ನುಳಿದ ಶೇ 20 ರಷ್ಟು ಖರ್ಜೂರ ಮಾತ್ರ ಭಾರತಕ್ಕೆ ಬರುತ್ತಿದೆ.

ಈ ವರ್ಷ ಭಾರತದಲ್ಲಿ ಖರ್ಜೂರ ದರವು ಶೇ 70ರಷ್ಟು ಹೆಚ್ಚಾಗಿದೆ. ಕಳೆದ ವರ್ಷ 150 ರಿಂದ 200 ರೂಪಾಯಿಗೆ ಕೆಜಿ ದೊರಕುತ್ತಿದ್ದ ಖರ್ಜೂರ ಈ ಬಾರಿ 250 ರಿಂದ 300 ರೂಪಾಯಿ ಆಗಿದೆ. ಬೆಲೆ ಹೆಚ್ಚಾಗಿರುವ ಕಾರಣ ಈ ಬಾರಿ ಕೈಗಾಡಿಗಳಲ್ಲಿ ರಸ್ತೆ ಬದಿ ಖರ್ಜೂರ ಮಾರಾಟಕ್ಕೆ ಸಿಗುವುದು ದುರ್ಲಭ ಎನಿಸುತ್ತಿದೆ.

ಇದನ್ನು ಓದಿ:ರಾಜ್ಯದ ಪ್ರಮುಖ ನಗರಗಳಲ್ಲಿಇಂದಿನ ತರಕಾರಿ ಮಾರುಕಟ್ಟೆ ದರ ಇಂತಿದೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.