ETV Bharat / business

ನೀವು ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದೀರಾ? ಹಾಗಾದರೆ ಸರಳ ಬದುಕಿಗೆ ಹೀಗೆ ಮಾಡಿ!

author img

By

Published : Feb 1, 2023, 8:08 AM IST

ಒಂದೊಮ್ಮೆ ಅಂತಹ ಸನ್ನಿವೇಶ ಬಂದರೆ, ಇದ್ದಕ್ಕಿದ್ದಂತೆ ಉದ್ಯೋಗ ತೊರೆಯುವಂತೆ ಒತ್ತಾಯಿಸಿದಾಗ ಏನು ಮಾಡಬೇಕು?. ಇದಕ್ಕಾಗಿ ಯಾವ ಯೋಜನೆ ರೂಪಿಸಬೇಕು ಎಂಬುದಕ್ಕೆ ಕೆಲ ಟಿಪ್ಸ್​ಗಳು ಇಲ್ಲಿವೆ.

Do not let job loss hurt you bad
ನೀವು ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದೀರಾ? ಹಾಗಾದರೆ ಸರಳ ಬದುಕಿಗೆ ಹೀಗೆ ಮಾಡಿ!

ಹೈದರಾಬಾದ್: ಕೆಲಸಗಾರರ ವಜಾ, ಉದ್ಯೋಗ ನಷ್ಟ ಎಂಬ ಮಾತುಗಳು ಇತ್ತೀಚಿನ ದಿನಗಳಲ್ಲಿ ಪದೇ ಪದೇ ಕೇಳುತ್ತಿದ್ದೇವೆ. ಆರ್ಥಿಕ ಹಿಂಜರಿತದ ಈ ದಿನಗಳಲ್ಲಿ ಜಗತ್ತನ್ನು ಕಾಡುವ ಸಾಧ್ಯತೆಗಳು ಹೆಚ್ಚಿವೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ನಾವು ಇದುವರೆಗೂ ನಡೆಸಿಕೊಂಡು ಬಂದಿದ್ದ ಜೀವನ ಅವ್ಯವಸ್ಥೆ ಮತ್ತು ಅನಿಶ್ಚಿತತೆಗೆ ತಳ್ಳಲೂ ಬಹುದು. ಇಂತಹ ಪರಿಸ್ಥಿತಿಯಿಂದ ಹೊರ ಬರಲು ನಾವು ಈಗಲೇ ತಯಾರಿ ಮಾಡಿಕೊಳ್ಳಬೇಕು. ಭವಿಷ್ಯದ ಯೋಜನೆ ರೂಪಿಸಿಕೊಳ್ಳದೇ ಇದ್ದರೆ ಜೀವನ ದುರ್ಬರ ಆಗಬಹುದು. ಆಗ ನಾವು ಎದೆಗುಂದ ಬೇಕಿಲ್ಲ. ಅದಕ್ಕಾಗಿ ನಾವು ಸಿದ್ಧರಾಗಬೇಕು. ಸಂಕಷ್ಟದಿಂದ ಪಾರಾಗಲು ಯೋಜನೆ ರೂಪಿಸಿಕೊಳ್ಳುವುದು ಉತ್ತಮ ಮಾರ್ಗವಾಗಿದೆ.

ತುರ್ತು ನಿಧಿ: ಕೆಲಸ ಸ್ಥಗಿತಗೊಳಿಸಿದರೂ ಎರಡು ಮೂರು ತಿಂಗಳ ಸಂಬಳ ನೀಡುವ ಕೆಲವು ಕಂಪನಿಗಳಿವೆ. ಇದು ನಾವು ಆರ್ಥಿಕ ಸಂಕಷ್ಟದಿಂದ ತಕ್ಷಣ ಪಾರಾಗಲು ಸಹಕಾರಿಯಾಗುತ್ತದೆ. ಇದರ ಜೊತೆಗೆ ನಮ್ಮಲ್ಲಿ ಕನಿಷ್ಠ ಆರು ತಿಂಗಳ ತುರ್ತು ನಿಧಿಯನ್ನು ಇಟ್ಟುಕೊಂಡಿರಬೇಕು. ಅನಿರೀಕ್ಷಿತ ವೆಚ್ಚಗಳನ್ನು ಪೂರೈಸಲು ನಿರ್ದಿಷ್ಟ ಮೊತ್ತವನ್ನು ಹಿಂಪಡೆಯಬಹುದು. ಆದರೆ ಸಂಪೂರ್ಣ ಮೊತ್ತವನ್ನು ಒಂದೇ ಬಾರಿಗೆ ಹಿಂಪಡೆಯ ಬಾರದು. ಈ ತುರ್ತು ನಿಧಿಯನ್ನು ಒಟ್ಟುಗೂಡಿಸಲು ಸಂಬಳದ ಕನಿಷ್ಠ ಶೇ 25ರಷ್ಟನ್ನು ಪ್ರತಿಶತದಷ್ಟು ಉಳಿತಾಯ ಮಾಡುವುದು ಒಳಿತು.

ಇದನ್ನು ಓದಿ: ಸ್ಥಿರ ಠೇವಣಿಗಳಿಂದ ನಿರ್ದಿಷ್ಟ ಪ್ರಮಾಣದ ಆದಾಯ ಪಡೆಯಿರಿ

ಅನಗತ್ಯ ಖರ್ಚು ಮಾಡುವುದನ್ನು ನಿಲ್ಲಿಸಿ: ನೀವು ಕೆಲಸ ಮಾಡುತ್ತಿರುವ ಕಂಪನಿ/ವಲಯದಲ್ಲಿ ಉದ್ಯೋಗ ಕಡಿತ ಪ್ರಾರಂಭವಾಗಿದ್ದರೆ, ನಿಮ್ಮ ಖರ್ಚುಗಳನ್ನು ಪರಿಶೀಲಿಸಿ. ಕ್ರೆಡಿಟ್ ಕಾರ್ಡ್‌ಗಳನ್ನು ಬಳಸುವುದನ್ನು ನಿಲ್ಲಿಸಿ. ಅನಗತ್ಯ ಖರ್ಚುಗಳನ್ನು ತಪ್ಪಿಸಿ. ಸಾಧ್ಯವಾದಷ್ಟು ಉಳಿಸಲು ಪ್ರಯತ್ನಿಸಿ. ನೀವು ಆದಾಯವನ್ನು ಕಳೆದುಕೊಂಡರೆ, ನೀವು ಸಮಯಕ್ಕೆ ಕ್ರೆಡಿಟ್ ಕಾರ್ಡ್ ಬಿಲ್‌ಗಳನ್ನು ಪಾವತಿಸಲು ಸಾಧ್ಯವಾಗದಿರಬಹುದು. ಇದು ನಿಮ್ಮ ಕ್ರೆಡಿಟ್ ಇತಿಹಾಸದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ವಿಶೇಷವಾಗಿ ಪರ್ಸನಲ್ ಲೋನ್, ವೆಹಿಕಲ್ ಲೋನ್ ಟಾಪ್ ಅಪ್ ಇತ್ಯಾದಿಗಳನ್ನು ತೆಗೆದುಕೊಳ್ಳಬೇಡಿ. ಏಕೆಂದರೆ ಕೆಲಸ ಇಲ್ಲದಿದ್ದಾಗ ಇಎಂಐ ಪಾವತಿಸುವುದು ಕಷ್ಟವಾಗಬಹುದು.

ಇದನ್ನು ಓದಿ:ನಿಮ್ಮ ಕುಟುಂಬದ ಆರ್ಥಿಕ ಭದ್ರತೆಗೆ ಅವಶ್ಯವಾಗಿ ಬೇಕು 'ಮನೆ ಬಜೆಟ್': ಏನಿದು?

ಐಷಾರಾಮಿ ಜೀವನ ತ್ಯಜಿಸಿ: ಐಷಾರಾಮಿ ವಸ್ತುಗಳ ಖರೀದಿ ನಿಲ್ಲಿಸಿ, ಅನಗತ್ಯ ಎನಿಸಿದ್ದನ್ನು ಬಿಟ್ಟು ಬಿಡಿ. ಮೂಲ ಅವಶ್ಯಕತೆಗಳ ಮೇಲೆ ಮಾತ್ರ ಗಮನಹರಿಸಿ. ಹಣವನ್ನು ಉಳಿಸಲು, ವ್ಯರ್ಥ ವೆಚ್ಚಗಳನ್ನು ಕಡಿಮೆ ಮಾಡಬೇಕು. ಕೆಲವರಿಗೆ ಖಂಡಿತವಾಗಿಯೂ ಪರ್ಯಾಯಗಳಿವೆ. ಇವುಗಳನ್ನು ಬಳಸಬೇಕು. ಬೆಲೆಬಾಳುವ ವಸ್ತುಗಳು ಮತ್ತು ಊಟವನ್ನು ತ್ಯಜಿಸುವುದು ಉತ್ತಮ. ಕೆಲವು ಆಸೆಗಳನ್ನು ಬಿಡಿ. ಇದು ಹೆಚ್ಚುವರಿ ಮೊತ್ತವನ್ನು ಇನ್ನಷ್ಟು ಹೆಚ್ಚಿಸುತ್ತದೆ ಎಂಬುದನ್ನು ನೆನಪಿನಲ್ಲಿಡಿ.

5 ಲಕ್ಷ ರೂ ಆರೋಗ್ಯ ರಕ್ಷಣೆ ಪಡೆಯಿರಿ: ಹೆಚ್ಚು ಜಾಗರೂಕರಾಗಿರಬೇಕಾದ ಸಮಯ ಇದು. ಉದ್ಯೋಗದಾತ - ಒದಗಿಸಿದ ಗುಂಪು ಆರೋಗ್ಯ ವಿಮೆಯನ್ನು ಒಳಗೊಂಡಿರುವವರು ವಿಳಂಬವಿಲ್ಲದೇ ತಮ್ಮದೇ ಆದ ಪಾಲಿಸಿಯನ್ನು ತೆಗೆದುಕೊಳ್ಳಬೇಕು. ನೀವು ಕೆಲಸವನ್ನು ತೊರೆದಾಗ ಗುಂಪು ವಿಮಾ ರಕ್ಷಣೆಯು ಹೋಗುತ್ತದೆ ಎಂಬುದನ್ನು ಮರೆಯಬೇಡಿ. ನಿರುದ್ಯೋಗದ ಸಮಯದಲ್ಲಿ ನೀವು ಅನಿರೀಕ್ಷಿತವಾಗಿ ಅನಾರೋಗ್ಯಕ್ಕೆ ಒಳಗಾಗಿದ್ದರೆ, ನೀವು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಕೆಲವೊಮ್ಮೆ, ಕವರ್ ಮಾಡದಿದ್ದರೆ ಸಂಪೂರ್ಣ ಉಳಿತಾಯವು ಚಿಕಿತ್ಸೆಗಾಗಿ ಖಾಲಿಯಾಗುತ್ತದೆ. ಇಡೀ ಕುಟುಂಬಕ್ಕೆ ರಕ್ಷಣೆ ನೀಡಲು ಕನಿಷ್ಠ 5 ಲಕ್ಷ ರೂಪಾಯಿಗಳ ಆರೋಗ್ಯ ವಿಮೆ ಕಡ್ಡಾಯವಾಗಿದ್ದರೆ ಉತ್ತಮ.

ಮಿತವಾಗಿ ಬಂಡವಾಳ ಹಿಂತೆಗೆದುಕೊಳ್ಳಿ: ಆದಾಯ ನಷ್ಟವಾದಾಗ ಅನೇಕರು ಒಂದೇ ಬಾರಿಗೆ ಸಂಪೂರ್ಣ ಹೂಡಿಕೆಯನ್ನು ಹಿಂತೆಗೆದುಕೊಳ್ಳುತ್ತಾರೆ. ಇದು ಒಳ್ಳೆಯದಲ್ಲ. ತುರ್ತು ನಿಧಿಯನ್ನು ಮೊದಲು ಬಳಸಿಕೊಳ್ಳಬೇಕು. ಆದಾಯವಿಲ್ಲ ಎಂಬ ಸತ್ಯವನ್ನು ಮರೆಯದೇ ಖರ್ಚು ಮಾಡಿ. ಭವಿಷ್ಯದ ನಿಧಿಗಳು ಮತ್ತು ಈಕ್ವಿಟಿಗಳಿಂದ ಹೂಡಿಕೆಗಳನ್ನು ಹಿಂತೆಗೆದುಕೊಳ್ಳಿ, ಅದು ಅಗತ್ಯವೆಂದು ನೀವು ಭಾವಿಸಿದಾಗ ಮಾತ್ರ ಇಂತಹ ಕೆಲಸಕ್ಕೆ ಕೈ ಹಾಕಿ. ಜೀವನ ಸುರಕ್ಷಿತವಾಗಿದೆ ಎಂದರೆ ಅನಗತ್ಯವಾಗಿ ಹಣ ಹಿಂಪಡೆಯಬೇಡಿ.

ಇದನ್ನು ಓದಿ:ಭಾರಿ ನಷ್ಟದೊಂದಿಗೆ ಹೋರಾಡುತ್ತಿರುವ ಫಿಲಿಪ್ಸ್.. ಈ ಬಾರಿ 6000 ಉದ್ಯೋಗಗಳು ವಜಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.