2022ರಲ್ಲಿ 32 ಕೋಟಿ ನಿವ್ವಳ ಲಾಭ ಗಳಿಸಿದ ಚೆನ್ನೈ ಸೂಪರ್​​​ ಕಿಂಗ್ಸ್​

author img

By

Published : Aug 27, 2022, 6:52 AM IST

Chennai Super Kings posts Rs 32.12 crore profit for FY22

ಕಂಪನಿಯ ವಾರ್ಷಿಕ ವರದಿಯ ಪ್ರಕಾರ CSK ತಂಡ ಐಪಿಎಲ್ ಪ್ರಶಸ್ತಿಯನ್ನು ಗೆದ್ದಿದ್ದರಿಂದ ಕಂಪನಿಯ ಒಟ್ಟು ಆದಾಯ ಹೆಚ್ಚಾಗಿದೆ ಹಾಗೂ ಈ ವೇಳೆ ಹೆಚ್ಚಿನ ವೆಚ್ಚಗಳನ್ನು ಮಾಡಿದ್ದರಿಂದ ಲಾಭಾಂಶ ಕುಸಿತ ಕಂಡಿದೆ ಎಂದು ಕಂಪನಿ ತನ್ನ ವಾರ್ಷಿಕ ವರದಿಯಲ್ಲಿ ಹೇಳಿದೆ.

ಚೆನ್ನೈ( ತಮಿಳುನಾಡು): ಚೆನ್ನೈ ಸೂಪರ್ ಕಿಂಗ್ಸ್ ಕ್ರಿಕೆಟ್ ಲಿಮಿಟೆಡ್​ ಕಳೆದ ಹಣಕಾಸು ವರ್ಷದಲ್ಲಿ ಅಂದರೆ 2021-22 ನೇ ಸಾಲಿನಲ್ಲಿ 349.14 ಕೋಟಿ ಆದಾಯಗಳಿಸಿದ್ದು, ಒಟ್ಟು 32.12 ಕೋಟಿ ರೂ. ಲಾಭಗಳಿಸಿದೆ. 2021 ರ ಹಣಕಾಸು ವರ್ಷದಲ್ಲಿ ಕಂಪನಿಯು 253.69 ಕೋಟಿ ರೂಪಾಯಿಗಳ ಒಟ್ಟು ಆದಾಯಗಳಿಸಿದ್ದರೆ ಒಟ್ಟಾರೆ 40.26 ಕೋಟಿ ರೂಪಾಯಿಗಳ ನಿವ್ವಳ ಲಾಭವನ್ನು ಗಳಿಸಿದೆ.

ಕಂಪನಿಯ ವಾರ್ಷಿಕ ವರದಿಯ ಪ್ರಕಾರ CSK ತಂಡ ಐಪಿಎಲ್ ಪ್ರಶಸ್ತಿಯನ್ನು ಗೆದ್ದಿದ್ದರಿಂದ ಕಂಪನಿಯ ಒಟ್ಟು ಆದಾಯ ಹೆಚ್ಚಾಗಿದೆ ಹಾಗೂ ಈ ವೇಳೆ ಹೆಚ್ಚಿನ ವೆಚ್ಚಗಳನ್ನು ಮಾಡಿದ್ದರಿಂದ ಲಾಭಾಂಶ ಕುಸಿತ ಕಂಡಿದೆ ಎಂದು ಕಂಪನಿ ತನ್ನ ವಾರ್ಷಿಕ ವರದಿಯಲ್ಲಿ ಹೇಳಿದೆ.

ಜಗತ್ತನ್ನೇ ಕಾಡಿದ ಮಹಾಮಾರಿ ಕೋವಿಡ್​ನಿಂದಾಗಿ 2021 ರಲ್ಲಿ ಐಪಿಎಲ್​ ಅರ್ಧದಲ್ಲೇ ರದ್ದುಗೊಂಡಿತ್ತು. ಆ ಬಳಿಕ ಪಂದ್ಯಾವಳಿಯನ್ನು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಗೆ ಸ್ಥಳಾಂತರಿಸಲಾಯಿತು. ಈ ಪರಿಣಾಮವಾಗಿ ಹೆಚ್ಚಿನ ವೆಚ್ಚವನ್ನು ಪಡೆಯಲಾಯಿತು ಎಂದು ಕಂಪನಿ ತಿಳಿಸಿದೆ.

ಇದನ್ನು ಓದಿ:ಏಷ್ಯಾ ಕಪ್: 1992ರಿಂದ ಇಲ್ಲಿವರೆಗೂ ಪಾಕ್‌ ವಿರುದ್ಧ ಭಾರತ ಸೋತಿದ್ದು ಒಮ್ಮೆ ಮಾತ್ರ ಎಂದ ಗಂಗೂಲಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.