ETV Bharat / business

Air India: ಏರ್ ಇಂಡಿಯಾದ ವಿಮಾನಗಳಿಗೆ ನೂತನ ಸ್ಪರ್ಶ..

author img

By ETV Bharat Karnataka Team

Published : Oct 7, 2023, 2:18 PM IST

Air India- A350 aircraft: ಏರ್ ಇಂಡಿಯಾ ವಿಮಾನಗಳು ಹೊಸ ಲುಕ್​ನಲ್ಲಿ ಕಾಣಿಸಿಕೊಳ್ಳಲು ಸಿದ್ಧವಾಗಿವೆ. ಕಂಪನಿಯು ಹೊಸ ಲೋಗೋ ಮತ್ತು ವಿನ್ಯಾಸದೊಂದಿಗೆ A350 ವಿಮಾನದ ನ್ಯೂ​ ಲುಕ್​ನ ಫೋಟೋಗಳನ್ನು ಏರ್ ಇಂಡಿಯಾ ಸಾಮಾಜಿಕ ಜಾಲಾತಾಣದಲ್ಲಿ ಹಂಚಿಕೊಂಡಿದೆ.

Air India
ಏರ್ ಇಂಡಿಯಾದ ವಿಮಾನಗಳಿಗೆ ನೂತನ ಸ್ಪರ್ಶ...

ನವದೆಹಲಿ: ಏರ್​ ಇಂಡಿಯಾವನ್ನು ಖರೀದಿಸಿದಾಗಿನಿಂದಲೂ ತನ್ನ ಅಭಿವೃದ್ಧಿಯ ಭಾಗವಾಗಿ ವಿವಿಧ ಬದಲಾವಣೆಗಳನ್ನು ಮಾಡುತ್ತಾ ಬಂದಿರುವ ಟಾಟಾ ಗ್ರೂಪ್ ಇತ್ತೀಚೆಗಷ್ಟೇ ಕಂಪನಿಯ ಲೋಗೋ ಮತ್ತು ಏರ್ ಕ್ರಾಫ್ಟ್ ಲೈವರಿಯಲ್ಲಿ ಬದಲಾವಣೆ ತಂದಿದೆ. ಹೊಸ ರೂಪದ ವಿಮಾನದ ಮೊದಲ ಲುಕ್​ನ ಫೋಟೋಗಳನ್ನು ಇಂದು ಸಾಮಾಜಿಕ ಮಾಧ್ಯಮದಲ್ಲಿ ಕಂಪನಿ ಹಂಚಿಕೊಂಡಿದೆ.

ಏರ್ ಇಂಡಿಯಾ ತನ್ನ ಎಕ್ಸ್ ಖಾತೆಯಲ್ಲಿ ಫ್ರಾನ್ಸ್‌ನ ಟೌಲೌಸ್ ಕಾರ್ಯಾಗಾರದಲ್ಲಿ ಹೊಸ ಲೋಗೋ ಮತ್ತು ವಿನ್ಯಾಸದೊಂದಿಗೆ A350 ವಿಮಾನದ ಫೋಟೋಗಳನ್ನು ಹಂಚಿಕೊಂಡಿದೆ. ಈ ಚಳಿಗಾಲದಲ್ಲಿ ಎ 350 ವಿಮಾನಗಳನ್ನು ಕಂಪನಿಗೆ ಸೇರ್ಪಡೆ ಮಾಡಿಕೊಳ್ಳಲಾಗುವುದು ಎಂದು ಕಂಪನಿ ಮೂಲಗಳು ತಿಳಿಸಿವೆ. ಸದ್ಯ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.

ಗಮನಸೆಳೆಯುವ ಏರ್ ಇಂಡಿಯಾ ವಿಮಾನದ ಲೋಗೋ: 'ದಿ ವಿಸ್ಟಾ' ಎಂಬ ಹೊಸ ಲೋಗೋ ಮಹಾರಾಜ ಮ್ಯಾಸ್ಕಾಟ್ ವಿಂಡೋ ಫ್ರೇಮ್ ಅನ್ನು ಒಳಗೊಂಡಿದೆ. ಕಂಪನಿಯ ಪ್ರಕಾರ, ಈ ಹೊಸ ಲೋಗೋ ಭವಿಷ್ಯದಲ್ಲಿ ಏರ್‌ಲೈನ್‌ನ ಅನಿಯಮಿತ ಸಾಧ್ಯತೆಗಳು, ಪ್ರಗತಿಶೀಲತೆ, ವಿಶ್ವಾಸ ಮತ್ತು ಧೈರ್ಯದ ಸಂಕೇತವಾಗಿದೆ. ಲೋಗೋದಲ್ಲಿನ ಏರ್ ಇಂಡಿಯಾ (AIR INDIA) ಫಾಂಟ್ ಅನ್ನು ಸಹ ಬದಲಾಯಿಸಲಾಗಿದೆ. ಇದಕ್ಕಾಗಿ ಅವರು ತಮ್ಮದೇ ಆದ 'ಏರ್ ಇಂಡಿಯಾ ಸಾನ್ಸ್' ಫಾಂಟ್ ಅನ್ನು ವಿನ್ಯಾಸಗೊಳಿಸಿದ್ದಾರೆ. ಅಲ್ಲದೇ ಕೆಂಪು, ನೇರಳೆ ಮತ್ತು ಹಸಿರು ಬಣ್ಣದ ವಿನ್ಯಾಸಗಳೊಂದಿಗೆ ವಿಮಾನಗಳ ಲುಕ್​ ಅನ್ನು ಬದಲಾಯಿಸಲಾಗಿದೆ. ಈ ಮೂಲಕ ಸಂಪೂರ್ಣವಾಗಿ ಹೊಸತನದೊಂದಿಗೆ ಗ್ರಾಹಕರ ಮುಂದೆ ಅನಾವರಣಗೊಂಡಿದೆ.

ಇದನ್ನೂ ಓದಿ: UAEಯಲ್ಲಿ ಜಾರಿಯಾಗಲಿದೆ RuPay ಕಾರ್ಡ್​ ವ್ಯವಸ್ಥೆ; ಎರಡೂ ದೇಶಗಳ ಮಧ್ಯೆ ಒಪ್ಪಂದ.. ಏನೆಲ್ಲ ಲಾಭ ಗೊತ್ತಾ?

400 ಮಿಲಿಯನ್ ಡಾಲರ್ ವೆಚ್ಚ: ಏರ್ ಇಂಡಿಯಾದ ಮೊದಲ A350 ವಿಮಾನವನ್ನು ಈ ಹೊಸ ಲುಕ್​ನಲ್ಲಿ ವಿನ್ಯಾಸಗೊಳಿಸಲಾಗಿದೆ. ಏರ್ ಇಂಡಿಯಾ ತನ್ನ ಫ್ಲೀಟ್‌ನಲ್ಲಿರುವ ಎಲ್ಲಾ ಹಳೆಯ ವಿಮಾನಗಳನ್ನು ಈ ಹೊಸ ವಿನ್ಯಾಸಕ್ಕೆ ಪರಿವರ್ತಿಸಲಾಗುವುದು ಎಂದು ಹೇಳಿದೆ. ಇದಕ್ಕಾಗಿ 400 ಮಿಲಿಯನ್ ಡಾಲರ್ ವೆಚ್ಚವಾಗಲಿದೆಯಂತೆ. ಕಂಪನಿಯನ್ನು ತನ್ನ ಹಿಂದಿನ ವೈಭವಕ್ಕೆ ತರಲು ಜಾರಿಗೆ ತರುತ್ತಿರುವ ಯೋಜನೆಯ ಭಾಗವಾಗಿ ಈ ಬದಲಾವಣೆಗಳನ್ನು ಮಾಡಲಾಗಿದೆ ಎಂದು ಕಂಪನಿಯು ಈ ಹಿಂದೆಯೇ ಬಹಿರಂಗಪಡಿಸಿತ್ತು. ಈ ವರ್ಷದ ಡಿಸೆಂಬರ್‌ನಿಂದ ಕೆಲವು ವಿಮಾನಗಳು ಹೊಸ ಲೋಗೋದೊಂದಿಗೆ ಪ್ರಾರಂಭವಾಗಲಿವೆ. 2025ರ ವೇಳೆಗೆ ಏರ್ ಇಂಡಿಯಾದ ಎಲ್ಲಾ ವಿಮಾನಗಳನ್ನು ಹೊಸ ಲೋಗೋಗೆ ಬದಲಾಯಿಸಲಾಗುವುದು ಎಂದು ಕಂಪನಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: ಪ್ರಾಜೆಕ್ಟ್ ಕೈಪರ್: ಇಂಟರ್ನೆಟ್ ಸೇವೆಗಾಗಿ ಪರೀಕ್ಷಾ ಉಪಗ್ರಹಗಳನ್ನು ಉಡಾವಣೆ ಮಾಡಿದ ಅಮೆಜಾನ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.