ETV Bharat / business

ಟ್ವಿಟರ್​ ನಂತರ ಎಲಾನ್ ಮಸ್ಕ್ ಮುಂದಿನ ಟಾರ್ಗೆಟ್​ ಕೊಕಾ ಕೋಲಾ, ಮೆಕ್​ ಡೊನಾಲ್ಡ್!

author img

By

Published : Apr 28, 2022, 10:07 AM IST

Updated : Apr 28, 2022, 10:28 AM IST

ಟ್ವಿಟರ್ ಅನ್ನು 44 ಬಿಲಿಯನ್ ಡಾಲರ್​ಗೆ ಖರೀದಿಸಿದ ಬಳಿಕ ತಮ್ಮ ಮುಂದಿನ ಗುರಿಯ ಬಗ್ಗೆ ಎಲಾನ್ ಮಸ್ಕ್ ಟ್ವೀಟ್ ಮಾಡಿದ್ದು, ತಮ್ಮ ಮುಂದಿನ ಗುರಿ, ಕೊಕಾ ಕೋಲಾ ಮತ್ತು ಮೆಕ್​ ಡೊನಾಲ್ಡ್ ಎಂದು ಹಾಸ್ಯದ ದಾಟಿಯಲ್ಲಿ ಹೇಳಿದ್ದಾರೆ.

After Twitter takeover, Elon Musk says 'buying Coca Cola next'
ಟ್ವಿಟರ್​ ನಂತರ ಎಲಾನ್ ಮಸ್ಕ್ ಮುಂದಿನ ಟಾರ್ಗೆಟ್​ ಕೊಕಾ ಕೋಲಾ, ಮೆಕ್​ ಡೊನಾಲ್ಡ್!

ವಾಷಿಂಗ್ಟನ್(ಅಮೆರಿಕ): ಯಾವಾಗಲೂ ಸಾಮಾಜಿಕ ಜಾಲತಾಣಗಳ ಮೂಲಕ ನೆಟ್ಟಿಗರ ಜೊತೆಗೆ ಸದಾ ಸಂಪರ್ಕದಲ್ಲಿರುವ ಬಿಲಿಯನೇರ್ ಎಲಾನ್ ಮಸ್ಕ್ ಆಗಾಗ ಫನ್ನಿ ಮತ್ತು ಕಾಲೆಳೆಯುವ ಟ್ವೀಟ್​ಗಳನ್ನೂ ಮಾಡುತ್ತ ಸುದ್ದಿಯಲ್ಲಿರುತ್ತಾರೆ. ಟ್ವಿಟರ್ ಅನ್ನು 44 ಬಿಲಿಯನ್ ಡಾಲರ್​ಗೆ ಖರೀದಿಸಿದ ಬಳಿಕ ತಮ್ಮ ಮುಂದಿನ ಗುರಿಯ ಬಗ್ಗೆ ಟ್ವೀಟ್ ಮಾಡಿದ್ದು, ತಮ್ಮ ಮುಂದಿನ ಗುರಿ, ಕೊಕಾ ಕೋಲಾ ಮತ್ತು ಮೆಕ್​ ಡೊನಾಲ್ಡ್ ಎಂದು ಹಾಸ್ಯದ ದಾಟಿಯಲ್ಲಿ ಹೇಳಿದ್ದಾರೆ.

ಮೊದಲ ಟ್ವೀಟ್​ನಲ್ಲಿ 'ಕೊಕೇನ್​ ಅನ್ನು ಮರಳಿ ಅದರೊಳಗೆ ಇಡಲು ನಾನು ಮುಂದಿನ ದಿನಗಳಲ್ಲಿ ಕೊಕಾ ಕೋಲಾವನ್ನು ಕೊಂಡುಕೊಳ್ಳುತ್ತೇನೆ' ಎಂದು ಟ್ವೀಟ್ ಮಾಡಿದ್ದಾರೆ. ಎರಡನೇ ಟ್ವೀಟ್​ನಲ್ಲಿ ಐಸ್ ಕ್ರೀಮ್ ಯಂತ್ರಗಳನ್ನು ಸರಿಪಡಿಸಲು ಮೆಕ್​ ಡೊನಾಲ್ಡ್ ಕೊಂಡುಕೊಳ್ಳುತ್ತೇನೆ ಎಂದು ಟ್ವೀಟ್ ಮಾಡಿದ್ದು, ನಂತರ ಅದೇ ಟ್ವೀಟ್​ನ ಸ್ಕ್ರೀನ್ ಶಾಟ್​ ಅನ್ನು ಪೋಸ್ಟ್ ಮಾಡಿ ' ಕೇಳಿ, ನಾನು ಅದ್ಭುತಗಳನ್ನು ಮಾಡಲು ಸಾಧ್ಯವಿಲ್ಲ, ಗೊತ್ತಾಯ್ತಾ?' ಎಂದು ಬರೆದುಕೊಂಡಿದ್ದಾರೆ.

  • Next I’m buying Coca-Cola to put the cocaine back in

    — Elon Musk (@elonmusk) April 28, 2022 " class="align-text-top noRightClick twitterSection" data=" ">

ಇದರ ಜೊತೆಗೆ ಮತ್ತೊಂದು ಟ್ವೀಟ್ ಮಾಡಿದ್ದು, ಟ್ವಿಟರ್​ ಅನ್ನು ಮತ್ತಷ್ಟು ಫನ್ ಮಾಡೋಣ ಎಂದು ಹೇಳಿಕೊಂಡಿದ್ದಾರೆ. ಇದಕ್ಕೂ ಮುನ್ನ ಟ್ವೀಟ್ ಮಾಡಿದ್ದ ಅವರು ಟ್ವಿಟರ್​ ಸಾರ್ವಜನಿಕರ ನಂಬಿಕೆಗೆ ಅರ್ಹವಾಗಬೇಕಾದರೆ ಅದು ರಾಜಕೀಯವಾಗಿ ತಟಸ್ಥವಾಗಿರಬೇಕು ಎಂದು ಅಭಿಪ್ರಾಯಪಟ್ಟಿದ್ದರು.

ಇದನ್ನೂ ಓದಿ: ರಾಜಕೀಯವಾಗಿ ತಟಸ್ಥವಾದಾಗ ಮಾತ್ರ ಟ್ವಿಟರ್ ಸಾರ್ವಜನಿಕ ನಂಬಿಕೆ ಗಳಿಸಲು ಸಾಧ್ಯ: ಎಲಾನ್​ ಮಸ್ಕ್​

Last Updated :Apr 28, 2022, 10:28 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.