ETV Bharat / business

ರಿಲಯನ್ಸ್​ ಷೇರುಗಳಲ್ಲಿ ಹೆಚ್ಚಳ, 10 ಲಕ್ಷ ಕೋಟಿಗೆ ತಲುಪಿದ ಮಾರುಕಟ್ಟೆ ಬಂಡವಾಳ

author img

By

Published : May 11, 2020, 8:52 PM IST

ಅಮೆರಿಕ ಮೂಲದ ವಿಸ್ಟಾ ಕಂಪನಿ ರಿಲಯನ್ಸ್​ ಪ್ಲಾಟ್​ಫಾರ್ಮ್​ನಲ್ಲಿ 11 ಸಾವಿರ ಕೋಟಿ ರೂಪಾಯಿ ಹೂಡಿಕೆಯ ಘೋಷಣೆ ಮಾಡಿದ ನಂತರ ರಿಲಯನ್ಸ್​ ಇಂಡಸ್ಟ್ರೀಸ್​ ಲಿಮಿಟೆಡ್​​ ಷೇರುಗಳಲ್ಲಿ ಏರಿಕೆ ಕಂಡಿದೆ.

reliance shares
ರಿಲಯನ್ಸ್​ ಇಂಡಸ್ಟ್ರೀಸ್

ಮುಂಬೈ: ರಿಲಯನ್ಸ್​ ಇಂಡಸ್ಟ್ರೀಸ್​ ಲಿಮಿಟೆಡ್​​ನ ಷೇರುಗಳಲ್ಲಿ ಏರಿಕೆ ಕಂಡಿದ್ದು, ಮಾರುಕಟ್ಟೆ ಬಂಡವಾಳದಲ್ಲಿ 10 ಲಕ್ಷ ಕೋಟಿ ರೂಪಾಯಿಗೆ ತಲುಪಿದೆ.

ಬಾಂಬೆ ಸ್ಟಾಕ್​ ಎಕ್ಸ್​​ಚೇಂಜ್​ನಲ್ಲಿ ರಿಲಯನ್ಸ್​​ ಇಂಡಸ್ಟ್ರೀಸ್​ ಲಿಮಿಟೆಡ್​​ನ ಒಂದು ಷೇರು 31.30 ರೂಪಾಯಿಗಳಷ್ಟು ಅಂದರೆ ಶೇಕಡಾ 2ರಷ್ಟು ಏರಿಕೆ ಕಂಡಿದೆ. ಇದರಿಂದಾಗಿ ಪ್ರತೀ ಷೇರಿನ ಬೆಲೆ 1,593.10 ರೂಪಾಯಿಗೆ ತಲುಪಿದೆ. ದಿನದ ಮಧ್ಯಕ್ಕೆ ಇದು ಒಂದು ಷೇರಿಗೆ 1,614 ರೂಪಾಯಿ ತಲುಪಿತ್ತು.

ಈಗ ರಿಲಯನ್ಸ್​​ ಇಂಡಸ್ಟ್ರೀಸ್​ ಲಿಮಿಟೆಡ್ ಬಂಡವಾಳ ಮಾರುಕಟ್ಟೆ 10,09,930.36 ರೂಪಾಯಿಗೆ ತಲುಪಿದೆ. ''ಕಂಪನಿಯಿಂದ ಹಕ್ಕುಗಳ ಸಮಸ್ಯೆ ಸಮಿತಿಯನ್ನು ಶನಿವಾರ ರಚಿಸಲಾಗಿದ್ದು ಮೇ 14ಕ್ಕೆ ಈಕ್ವಿಟಿ ಷೇರುದಾರರ ಸಮಸ್ಯೆಗಳನ್ನು ಪರಿಶೀಲಿಸಲು ಮೇ 14 ನಿಗದಿಪಡಿಸಲಾಗಿದೆ ಎಂದು ಕಂಪನಿ ತಿಳಿಸಿವೆ.

ಅಮೆರಿಕ ಮೂಲದ ವಿಸ್ಟಾ ಈಕ್ವಿಟಿ ಪಾರ್ಟ್​ನರ್​ ಜಿಯೋ ಪ್ಲಾಟ್​ಫಾರ್ಮ್​ನಲ್ಲಿ 11,367 ಕೋಟಿ ರೂಪಾಯಿ ಬಂಡವಾಳ ಹೂಡುವ ಘೋಷಣೆ ಮಾಡಿರುವುದು ಕಂಪನಿಗೆ ಮತ್ತಷ್ಟು ಬೆಳವಣಿಗೆಗೆ ಪ್ರಮುಖ ಕಾರಣವಾಗಿದೆ. ವಿಸ್ಟಾಗೂ ಮೊದಲು ಜಿಯೋ ಪ್ಲಾಟ್​ಫಾರ್ಮ್​ನಲ್ಲಿ ಫೇಸ್​ಬುಕ್​ 43 ಸಾವಿರ ಕೋಟಿ, ಸಿಲ್ವರ್​ ಲೇಕ್​ ಸಂಸ್ಥೆಗಳು 5,655 ಕೋಟಿ ರೂಪಾಯಿಗಳನ್ನು ಬಂಡವಾಳವಾಗಿ ಹೂಡಿದ್ದವು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.