ETV Bharat / business

ರಿಲಯನ್ಸ್​ ಏಟಿಗೆ ಏರ್​ಟೆಲ್​,​ ಐಡಿಯಾ, ಪಿವಿಆರ್​, ಐನಾಕ್ಸ್​ ಕಂಗಾಲು... ಟಾಟಾ ಹಿಂದಿಕ್ಕಲು ಹೆಜ್ಜೆಯಷ್ಟೆ ಬಾಕಿ..!

author img

By

Published : Aug 13, 2019, 2:17 PM IST

ಮುಖೇಶ್ ಅಂಬಾನಿ ಅವರು ಮುಂದಿನ ತಿಂಗಳಿಂದ ಭಾರತದಾದ್ಯಂತ ಇಂಟರ್​ನೆಟ್​ ಸೇವೆಗಳ ಮೇಲಿನ ಶುಲ್ಕ ಕಡಿತಗೊಳಿಸುವ, ಟಿವಿ, ಚಲನಚಿತ್ರ ಸ್ಟ್ರೀಮಿಂಗ್, ಟಿವಿ ಸೆಟ್‌ ಟಾಪ್‌ ಬಾಕ್ಸ್​ ನಂತಹ ಸೇವೆಗಳ ಘೋಷಣೆಯು ಎದುರಾಳಿ ಕಂಪನಿಗಳ ಮುಖ್ಯವಾಗಿ ಟೆಲಿಕಾಂ ಸಂಸ್ಥೆಗಳ ಷೇರಿನಲ್ಲಿ ಇಳಿಮುಖವಾಗಿದೆ.

ಸಾಂದರ್ಭಿಕ ಚಿತ್ರ

ಮುಂಬೈ: ರಿಲಯನ್ಸ್​ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ನಿನ್ನೆ (ಸೋಮವಾರ) ನಡೆದ ತಮ್ಮ ಕಂಪನಿಯ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಸೆಪ್ಟೆಂಬರ್ 5ರಂದು ಆರಂಭವಾಗಲಿರುವ ಜಿಯೋ ಫೈಬರ್​ 100 ಎಂಬಿಪಿಎಸ್​ ಸ್ಪೀಡ್​ನ ಬೇಸ್​ ಪ್ಲಾನ್ ಸೇರಿದಂತೆ ಫಸ್ಟ್​ ಡೇ ಫಸ್ಟ್​ ಶೋ ಪ್ಲಾನ್​ಗಳು ಘೋಷಿಸಿದ ಮರು ದಿನದ ಷೇರು ಪೇಟೆಯಲ್ಲಿ ಷೇರು ಮೌಲ್ಯ ದಾಖಲೆ ಏರಿಕೆ ದಾಖಲಿಸಿದೆ.

ಮುಖೇಶ್ ಅಂಬಾನಿ ಅವರು ಮುಂದಿನ ತಿಂಗಳಿಂದ ಭಾರತದಾದ್ಯಂತ ಇಂಟರ್​ನೆಟ್​ ಸೇವೆಗಳ ಮೇಲಿನ ಶುಲ್ಕ ಕಡಿತಗೊಳಿಸುವ, ಟಿವಿ, ಚಲನಚಿತ್ರ ಸ್ಟ್ರೀಮಿಂಗ್, ಟಿವಿ ಸೆಟ್‌ ಟಾಪ್‌ ಬಾಕ್ಸ್​ ನಂತಹ ಸೇವೆಗಳ ಘೋಷಣೆಯು ಎದುರಾಳಿ ಕಂಪನಿಗಳ ಮುಖ್ಯವಾಗಿ ಟೆಲಿಕಾಂ ಸಂಸ್ಥೆಗಳ ಷೇರಿನಲ್ಲಿ ಇಳಿಮುಖವಾಗಿದೆ.

ಮುಖೇಶ್​ ಅಂಬಾನಿ ಅವರ ಪ್ಲಾನ್​ಗಳ ಪಟ್ಟಿ ಹೊರಡಿಸಿದ ಮರುದಿನವೇ ರಿಲಯನ್ಸ್​ ಷೇರುಗಳ ಮೌಲ್ಯದಲ್ಲಿ ಶೇ 12ರಷ್ಟು ಏರಿಕೆಯಾಗಿದೆ. 2009ರ ಜನವರಿ 14ರ ಬಳಿಕದ ಅತ್ಯಧಿಕ ಹೆಚ್ಚಳವಾಗಿದೆ. ಇಂದಿನ ವಹಿವಾಟಿನಲ್ಲಿ ರಿಲಯನ್ಸ್​ ಭಾರತದ ಅತ್ಯಂತ ಮೌಲ್ಯಯುತ ಕಂಪನಿ ಎಂಬದನ್ನು ಪುನರ್​ ಸಾಬೀತುಪಡಿಸಿದೆ. ರಿಲಯನ್ಸ್​ ಗ್ರೂಪ್​ನ ಷೇರುಗಳ ಮೌಲ್ಯವು ಅತಿ ಹೆಚ್ಚು ಷೇರು ಮೌಲ್ಯ ಹೊಂದಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸ್​ಗಿಂತ (ಟಿಸಿಎಸ್​) 1 ಬಿಲಿಯನ್​ ಡಾಲರ್​ ಅಂತರದಲ್ಲಿ ಹಿಂದಿದೆ.

ಟೆಲಿಕಾಂ ಮಾರುಕಟ್ಟೆಯಲ್ಲಿ ರಿಲಯನ್ಸ್​ ನೀಡಿದ ಏಟಿಗೆ ಎದುರಾಳಿ ಕಂಪನಿಗಳಾದ ಭಾರ್ತಿ ಏರ್​ಟೆಲ್​ ಶೇ 4 ಮತ್ತು ವೋಡಾಪೋನ್​- ಐಡಿಯಾ ಷೇರುಗಳ ಮೌಲ್ಯದಲ್ಲಿ ಶೇ 5ರಷ್ಟು ಇಳಿಕೆಯಾಗಿದೆ. ಮಲ್ಟಿಫ್ಲೆಕ್ಸ್​ ಚೈನ್​ ಆಪರೇಟರ್​ ಪಿವಿಆರ್​ ಮತ್ತು ಐಷರಾಮಿ ಐನಾಕ್ಸ್​. ಎನ್​ಎಸ್​ ಷೇರುಗಳಲ್ಲಿ ಕ್ರಮವಾಗಿ ಶೇ 8 ಮತ್ತು ಶೇ 10ರಷ್ಟು ಇಳಿಕೆಯಾಗಿದೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.