ETV Bharat / business

ಮೈಕ್ರೋಚಿಪ್ ಕೊರತೆ ಎಫೆಕ್ಟ್‌; ವರ್ಷದಿಂದ ವರ್ಷಕ್ಕೆ ಮಾರುತಿ ಸುಜುಕಿ, ಹ್ಯುಂಡೈ ವಾಹನಗಳ ಮಾರಾಟ ಕುಸಿತ

author img

By

Published : Mar 2, 2022, 10:13 AM IST

ಆಟೋಮೊಬೈಲ್‌ ಕ್ಷೇತ್ರದಲ್ಲಿ ಮೈಕ್ರೋಚಿಪ್ ಕೊರತೆ ಭಾರಿ ಪರಿಣಾಮ ಬೀರಿದ್ದು, ಮಾರುತಿ ಸುಜುಕಿ, ಹ್ಯುಂಡೈ ಮೋಟಾರ್ ವಾಹನಗಳ ಮಾರಾಟವು ವರ್ಷದಿಂದ ವರ್ಷಕ್ಕೆ ಕುಸಿಯುತ್ತಲೇ ಇದೆ. ಟಾಟಾ ಮೋಟಾರ್ಸ್‌ ಹಾಗೂ ಮಹೀಂದ್ರಾ ಕಂಪನಿಗಳು ಮಾರಾಟವನ್ನು ಹೆಚ್ಚಿಸಿಕೊಂಡಿವೆ.

Microchip shortage, high cost subdues auto sector's Feb sales
ಮೈಕ್ರೋಚಿಪ್ ಕೊರತೆ ಎಫೆಕ್ಟ್‌; ವರ್ಷದಿಂದ ವರ್ಷಕ್ಕೆ ಮಾರುತಿ ಸುಜುಕಿ, ಹ್ಯುಂಡೈ ವಾಹನಗಳ ಮಾರಾಟ ಕುಸಿತ

ನವದೆಹಲಿ: ಮೈಕ್ರೋಚಿಪ್ ಕೊರತೆಯು ಆಟೋಮೊಬೈಲ್‌ ಕ್ಷೇತ್ರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಮೈಕ್ರೋಚಿಪ್‌ನ ಹೆಚ್ಚಿನ ವೆಚ್ಚವು ಕಳೆದ ತಿಂಗಳು ಪ್ರಮುಖ ವಾಹನಗಳ ಮಾರಾಟವನ್ನು ತಗ್ಗಿಸಿದೆ ಎಂದು ವರದಿಯಾಗಿದೆ.

ದೇಶದ ಪ್ರಮುಖ ಆಟೋಮೊಬೈಲ್‌ನ ಮಾರುತಿ ಸುಜುಕಿ ಇಂಡಿಯಾ ಕಂಪನಿಯಲ್ಲಿ ಫೆಬ್ರವರಿಯಲ್ಲಿ ವರ್ಷದಿಂದ ವರ್ಷಕ್ಕೆ ಮಾರಾಟ ಕುಸಿತ ವಾಗುತ್ತಲೇ ಇದೆ ಎಂದು ಹೇಳಿದೆ. 2021ರ ಫೆಬ್ರವರಿಯಲ್ಲಿ ಮಾರುತಿ ಸುಜುಕಿ 1,64,469 ವಾಹನಗಳನ್ನು ಮಾರಾಟ ಮಾಡಿತ್ತು. ಆದರೆ, 2022ರಲ್ಲಿ 1,64,056 ವಾಹನಗಳನ್ನು ಮಾರಾಟ ಮಾಡಲಾಗಿದೆ ಎಂದು ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದೆ.

ಇದೇ ಅವಧಿಯಲ್ಲಿ ದೇಶೀಯ ಮಾರಾಟವು 1,37,607 ವಾಹನಗಳಾಗಿದ್ದು, ಇತರ ಮೂಲ ಉಪಕರಣ ತಯಾರಿಕರಿಗೆ ಮಾರಾಟವು 2,428 ಯುನಿಟ್‌ಗಳಷ್ಟಿದೆ. ಕಳೆದ ತಿಂಗಳು 24,021 ವಾಹನಗಳನ್ನು ವಿದೇಶಕ್ಕೆ ರಪ್ತು ಮಾಡಲಾಗಿದ್ದು, ಇದು ಮಾಸಿಕ ಅತ್ಯಧಿಕವಾಗಿದೆ ಎಂದು ವರದಿಯಲ್ಲಿ ವಿವರಿಸಿದೆ.

ಎಲೆಕ್ಟ್ರಾನಿಕ್‌ ಘಟಕಗಳ ಕೊರತೆಯು ಪ್ರಾಥಮಿಕವಾಗಿ ದೇಶೀಯ ಮಾರುಕಟ್ಟೆಯಲ್ಲಿ ಮಾರಾಟವಾಗುವ ವಾಹನಗಳ ಉತ್ಪಾದನೆಯ ಮೇಲೆ ಸಣ್ಣ ಪರಿಣಾಮ ಬೀರಿದೆ. ಇದನ್ನು ಕಡಿಮೆ ಮಾಡಲು ಕಂಪನಿಯು ಸಾಧ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಂಡಿರುವುದಾಗಿ ಮಾರುತಿ ಸುಜುಕಿ ಹೇಳಿದೆ. ಮೈಕ್ರೋಚಿಪ್ ಕೊರತೆಯು ವಾಹನಗಳ ಉತ್ಪಾದನೆಯ ಮೇಲೆ ಪರಿಣಾಮ ಬೀರಿದೆ. ಇದರ ಪರಿಣಾಮವಾಗಿ, ವಾಹನಗಳಿಗಾಗಿ ಕಾಯುವ ಅವಧಿಯನ್ನು ವಿಸ್ತರಿಸಲಾಗಿದೆ. ಜೊತೆಗೆ ವೆಚ್ಚವು ಹೆಚ್ಚಾಗಿದೆ.

ಹ್ಯುಂಡೈ ಕಾರು ಮಾರಾಟದಲ್ಲಿ ಕುಸಿತ: ಮತ್ತೊಂದೆಡೆ ಹ್ಯುಂಡೈ ಮೋಟಾರ್ ಇಂಡಿಯಾ ಕೂಡ ವರ್ಷದಿಂದ ವರ್ಷಕ್ಕೆ ಮಾರಾಟ ಕಡಿಮೆಯಾಗಿರುವ ಬಗ್ಗೆ ವರದಿ ಮಾಡಿದೆ. 2021ರ ಫೆಬ್ರವರಿಯಲ್ಲಿ 61,800 ವಾಹನಗಳನ್ನು ಮಾರಾಟ ಮಾಡಿದ್ದರೆ, 2022ರ ಫೆಬ್ರವರಿಯಲ್ಲಿ 53,159 ವಾಹನಗಳನ್ನು ಮಾರಾಟ ಮಾಡಿದ್ದು, ಭಾರಿ ಇಳಿಕೆ ಕಂಡಿದೆ. ಕಳೆದ ವರ್ಷ ದೇಶೀಯ ಮಾರಾಟವು 51,600 ಯುನಿಟ್‌ಗಳಿಂದ 44,050 ಯುನಿಟ್‌ಗಳಿಗೆ ಇಳಿಕೆಯಾಗಿದೆ.

ದೇಶೀಯ ಮಾರಾಟದಲ್ಲಿ ಟಾಟಾ ಮೋಟಾರ್ಸ್‌ ಸಾಧನೆ: ಇನ್ನು, ಟಾಟಾ ಮೋಟಾರ್ಸ್ ಕಳೆದ ವರ್ಷದ ಇದೇ ಅವಧಿಯಲ್ಲಿ 58,366 ಯುನಿಟ್‌ಗಳನ್ನು ಮಾರಾಟ ಮಾಡಿತ್ತು. ಆದರೆ ಈ 2022ರ ಫೆಬ್ರವರಿಯಲ್ಲಿ ತನ್ನ ಒಟ್ಟಾರೆ ದೇಶೀಯ ಮಾರಾಟದಲ್ಲಿ 73,875 ವಾಹನಗಳನ್ನು ಮಾರಾಟ ಮಾಡಿದ್ದು, ಶೇ.27ರಷ್ಟು ಏರಿಕೆಯನ್ನು ಕಂಡಿದೆ.

ಟಾಟಾ ಮೋಟಾರ್ಸ್‌ನ ಪ್ರಯಾಣಿಕ ವಾಹನದ ದೇಶೀಯ ಮಾರಾಟವು 2021ರ ಫೆಬ್ರವರಿಯಲ್ಲಿ 27,225 ಯುನಿಟ್‌ಗಳಿಂದ 39,981 ಯುನಿಟ್‌ಗಳಿಗೆ (ಶೇ.47ರಷ್ಟು) ಏರಿಕೆಯಾಗಿದೆ. ವಾಣಿಜ್ಯ ವಾಹನಗಳ ವಿಷಯದಲ್ಲಿ, ದೇಶೀಯ ಮಾರಾಟವು ಶೇ.11ರಷ್ಟು ಹೆಚ್ಚಾಗಿದೆ. ಕಳೆದ ವರ್ಷದ ಫೆಬ್ವರಿಯಲ್ಲಿ 33,859 ವಾಣಿಜ್ಯ ವಾಹನಗಳು ಸೇಲ್‌ ಮಾಡಿದ್ದರೆ ಈ ವರ್ಷ 37,552 ವಾಹನಗಳು ಮಾರಾಟ ಆಗಿವೆ.

ಮತ್ತೊಂದು ಆಟೋಮೊಬೈಲ್‌ ದೈತ್ಯ ಸಂಸ್ಥೆ ಮಹೀಂದ್ರಾ ಕಳೆದ ತಿಂಗಳು ತನ್ನ ಒಟ್ಟಾರೆ ಮಾರಾಟದಲ್ಲಿ ಏರಿಕೆಯನ್ನು ಕಂಡಿದೆ. ಕಂಪನಿಯು ವರ್ಷದಿಂದ ವರ್ಷಕ್ಕೆ ತನ್ನ ವಾಹನ ಮಾರಾಟದಲ್ಲಿ ಶೇ.89ರಷ್ಟು ಬೆಳವಣಿಗೆಯನ್ನು ಸಾಧಿಸಿರುವುದಾಗಿ ವರದಿ ಮಾಡಿದೆ.

ಇದನ್ನೂ ಓದಿ: Tata Motorsನ ಅಲ್ಟ್ರಾ ಟಿ-ಸೀರಿಸ್‌ ಟ್ರೇಡ್‌ ಮಾರ್ಕ್‌ ವಿರುದ್ಧ ಕೋರ್ಟ್‌ ಮೊರೆ ಹೋದ ಟಿ-ಸೀರಿಸ್‌ ಸಂಸ್ಥೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.