ETV Bharat / business

ಭಾರತದ ಆರ್ಥಿಕ ಬೆಳವಣಿಗೆ ದರ ತಗ್ಗಿಸಿದ ಗೋಲ್ಡ್ಮನ್ ಸ್ಯಾಚ್ಸ್!

author img

By

Published : May 4, 2021, 4:35 PM IST

ಭಾರತವು ಪ್ರಸ್ತುತ ವಿಶ್ವದ ಅತ್ಯಂತ ಕೆಟ್ಟ ಕೋವಿಡ್ ಬಿಕ್ಕಟ್ಟು ಎದುರಿಸುತ್ತಿದೆ. ದೇಶದಲ್ಲಿ ಕೋವಿಡ್ ಸಾವುಗಳು ಈಗಾಗಲೇ 2.2 ಲಕ್ಷ ದಾಟಿದೆ. ನಿತ್ಯ ನಾಲ್ಕು ಲಕ್ಷದವರೆಗೆ ಪ್ರಕರಣಗಳು ದಾಖಲಾಗುತ್ತಿವೆ. ಆದರೆ, ಮೋದಿ ಸರ್ಕಾರ ಲಾಕ್​ಡೌನ್​ ಹೇರುವ ಬಗ್ಗೆ ಮಾತನಾಡುತ್ತಿಲ್ಲ. ಇದನ್ನು ಕೊನೆಯ ಉಪಾಯವಾಗಿ ಬಳಸಬೇಕು ಎಂದು ಆಶಿಸುತ್ತೇವೆ. ರಾಜ್ಯ ಸರ್ಕಾರಗಳ ಮೇಲೆ ಕೋವಿಡ್​ ದಮನದ ಜವಾಬ್ದಾರಿ ಬಿಟ್ಟಿದ್ದಾರೆ ಎಂದು ಅಭಿಪ್ರಾಯಪಟ್ಟಿದೆ.

India growth
India growth

ನವದೆಹಲಿ: ಹಣಕಾಸು ಸೇವೆಗಳ ಸಂಸ್ಥೆ ಗೋಲ್ಡ್ಮನ್ ಸ್ಯಾಚ್ಸ್, ಈ ಆರ್ಥಿಕ ವರ್ಷದಲ್ಲಿ ಭಾರತದ ಬೆಳವಣಿಗೆಯ ದರ ಸ್ವಲ್ಪ ಕಡಿಮೆಗೊಳಿಸಿದೆ.

ಪರಿಷ್ಕೃತ ಅಂದಾಜಿನ ಪ್ರಕಾರ, 2022ರ ಮಾರ್ಚ್ 22ರ ವೇಳೆಗೆ ಭಾರತವು ಶೇ 11.1ರಷ್ಟು ಬೆಳವಣಿಗೆ ಕಾಣಲಿದೆ. ಅನೇಕ ರಾಜ್ಯಗಳು ಮತ್ತು ನಗರಗಳು ಇತ್ತೀಚೆಗೆ ಲಾಕ್​ಡೌನ್​ ಹಾಕಿದ ಕಾರಣ ಬೆಳವಣಿಗೆಯ ನಿರೀಕ್ಷೆಗಳು ಬದಲಾಗಿವೆ.

ಭಾರತವು ಪ್ರಸ್ತುತ ವಿಶ್ವದ ಅತ್ಯಂತ ಕೆಟ್ಟ ಕೋವಿಡ್ ಬಿಕ್ಕಟ್ಟು ಎದುರಿಸುತ್ತಿದೆ. ದೇಶದಲ್ಲಿ ಕೋವಿಡ್ ಸಾವುಗಳು ಈಗಾಗಲೇ 2.2 ಲಕ್ಷ ದಾಟಿದೆ. ನಿತ್ಯ ನಾಲ್ಕು ಲಕ್ಷದವರೆಗೆ ಪ್ರಕರಣಗಳು ದಾಖಲಾಗುತ್ತಿವೆ. ಆದರೆ, ಮೋದಿ ಸರ್ಕಾರ ಲಾಕ್​ಡೌನ್​ ಹೇರುವ ಬಗ್ಗೆ ಮಾತನಾಡುತ್ತಿಲ್ಲ. ಇದನ್ನು ಕೊನೆಯ ಉಪಾಯವಾಗಿ ಬಳಸಬೇಕು ಎಂದು ಆಶಿಸುತ್ತೇವೆ. ರಾಜ್ಯ ಸರ್ಕಾರಗಳ ಮೇಲೆ ಕೋವಿಡ್​ ದಮನದ ಜವಾಬ್ದಾರಿ ಬಿಟ್ಟಿದ್ದಾರೆ ಎಂದು ಅಭಿಪ್ರಾಯಪಟ್ಟಿದೆ.

ಲಾಕ್‌ಡೌನ್‌ಗಳು ಕಳೆದ ವರ್ಷಕ್ಕಿಂತ ಕಡಿಮೆ ತೀವ್ರವಾಗಿರುತ್ತದೆ ಎಂದು ಗೋಲ್ಡ್ಮನ್ ಅಂದಾಜಿಸಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಇಲ್ಲಿಯವರೆಗೆ ವಿಧಿಸಿರುವ ನಿರ್ಬಂಧಗಳ ತೀವ್ರತೆ ಕಡಿಮೆಯಿದೆ. ರೈಲುಗಳಲ್ಲಿನ ಸರಕು ಸಾಗಣೆ ತಗ್ಗಿಸುವಿಕೆ ಸೇರಿದಂತೆ ಇತರ ಚಟುವಟಿಕೆಗಳು ಜಿಡಿಪಿ ಅಂದಾಜು ತಗ್ಗಿಸುತ್ತದೆ. ಇದು ಬೆಳವಣಿಗೆಯ ನಿರೀಕ್ಷೆಯನ್ನು ಶೇ 11.7ರಿಂದ 11.1ಕ್ಕೆ ಇಳಿಸಿದೆ. 2021ರ ಕ್ಯಾಲೆಂಡರ್ ವರ್ಷದ ಆರ್ಥಿಕ ಬೆಳವಣಿಗೆಯು 10.5 ಪ್ರತಿಶತದಿಂದ ಶೇ 9.7ಕ್ಕೆ ನಿಧಾನವಾಗಲಿದೆ ಎಂದು ಊಹಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.