ETV Bharat / business

ವಿಶ್ವಾದ್ಯಂತ ಬಂಗಾರಕ್ಕೆ ಹೆಚ್ಚಿದ ಬೇಡಿಕೆ: ಇಟಿಎಫ್​​​​​​​​​​​​​​ ಭಾರಿ ಕುಸಿತ!

author img

By

Published : Jan 29, 2022, 7:04 AM IST

Updated : Jan 29, 2022, 7:52 AM IST

2021ನೇ ಸಾಲಿನಲ್ಲಿ ಜಾಗತಿಕವಾಗಿ ಬಂಗಾರದ ಬೇಡಿಕೆಯಲ್ಲಿ ಭಾರಿ ಹೆಚ್ಚಳವಾಗಿದೆ. ಜಾಗತಿಕವಾಗಿ ಶೇ 10 ಹೆಚ್ಚುವರಿ ಬೇಡಿಕೆ ಕಂಡು ಬಂದಿದೆ ಎಂದು ವರ್ಲ್ಡ್​ ಗೋಲ್ಡ್​ ಕೌನ್ಸಿಲ್​ ಹೇಳಿದೆ.

Gold demand globally rises 10% in 2021, ETF holdings fall
Gold demand globally rises 10% in 2021, ETF holdings fall

ನವದೆಹಲಿ: ಜಾಗತಿಕವಾಗಿ ಕಳೆದ ಅಕ್ಟೋಬರ್​​​- ಡಿಸೆಂಬರ್​​​​​​ ತ್ರೈಮಾಸಿಕದಲ್ಲಿ ಬಂಗಾರಕ್ಕೆ ಶೇ 50 ಹೆಚ್ಚು ಬೇಡಿಕೆ ಸೃಷ್ಟಿಯಾಗಿದೆ. ಇದೇ ವೇಳೆ 2021ನೇ ಸಾಲಿನಲ್ಲಿ ಒಟ್ಟಾರೆ ಶೇ 10 ಹೆಚ್ಚು ಬೇಡಿಕೆ ಸೃಷ್ಟಿಯಾಗಿದೆ ಎಂದು ವಿಶ್ವ ಚಿನ್ನ ಸಮಿತಿ( ವರ್ಲ್ಡ್​​​ ಗೋಲ್ಡ್​​ ಕೌನ್ಸಿಲ್​) ಹೇಳಿದೆ. ಜಾಗತಿಕವಾಗಿ 4021 ಟನ್​ ಬಂಗಾರಕ್ಕೆ ಬೇಡಿಕೆ ಇದೆ ಎಂದು ಅಂಕಿ- ಅಂಶಗಳು ಹೇಳುತ್ತಿವೆ.

ಗ್ರಾಹಕ - ಚಾಲಿತ ಆಭರಣಗಳು ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಚಿನ್ನಕ್ಕೆ ಬೇಡಿಕೆ ಹೆಚ್ಚಾಗಿದೆ. ಆರ್ಥಿಕ ಬೆಳವಣಿಗೆ ಮತ್ತು ಗ್ರಾಹಕರ ಭಾವನೆಗೆ ಅನುಗುಣವಾಗಿ ವರ್ಷವಿಡೀ ಬಂಗಾರದ ವ್ಯವಹಾರವು ಚೇತರಿಸಿಕೊಂಡಿದೆ. ಇನ್ನು ಕೇಂದ್ರ ಬ್ಯಾಂಕನ ಬಂಗಾರ ನಿಧಿ ಕಳೆದ ಬಾರಿಗಿಂತ ಹೆಚ್ಚಾಗಿದೆ. ಹೂಡಿಕೆ ಬೇಡಿಕೆ ಪರಸ್ಪರ ಏರಿಕೆ ಮತ್ತು ಇಳಿಕೆಯ ಮಿಶ್ರಣವಾಗಿದೆ ಎಂದು ಗೋಲ್ಡ್​ ಕೌನ್ಸಿಲ್​ ಹೇಳಿದೆ.

ಆಭರಣ ತಯಾರಿಕೆ ವಿಭಾಗವು 2021 ರಲ್ಲಿ ಬಲವಾದ ಚೇತರಿಕೆ ಕಂಡಿದ್ದು, 2021 ರಲ್ಲಿ 2,221 ಟನ್‌ಗಳಷ್ಟಾಗಿದೆ. ಅಂದರೆ ಸುಮಾರು ಶೇ 67 ಪ್ರತಿಶತದಷ್ಟು ಬೆಳವಣಿಗೆ ಕಂಡಿದೆ. ನಾಲ್ಕನೇ ತ್ರೈಮಾಸಿಕದಲ್ಲಿ ಹೆಚ್ಚಿನ ಬೇಡಿಕೆ ಕಂಡು ಬಂದಿದೆ ಎಂದು ಕೌನ್ಸಿಲ್ ಹೇಳಿದೆ.

ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

2020ರ ದಾಖಲೆಯ 874 ಟನ್‌ಗಳ ಏರಿಕೆಗೆ ವ್ಯತಿರಿಕ್ತವಾಗಿ 2021 ರಲ್ಲಿ ಚಿನ್ನದ ಇಟಿಎಫ್‌ಗಳ ಜಾಗತಿಕ ಹಿಡುವಳಿಗಳು 173 ಟನ್‌ನಷ್ಟು ಕುಸಿತ ಕಂಡಿವೆ. ಇದಕ್ಕೆ ಬದಲಾಗಿ ಬಾರ್ ಮತ್ತು ನಾಣ್ಯಗಳ ಮೇಲಿನ ಹೂಡಿಕೆಯು ಎಂಟು ವರ್ಷಗಳ ಗರಿಷ್ಠ ಮಟ್ಟಕ್ಕೆ ಅಂದರೆ ಶೇ 31ರಷ್ಟು ಏರಿಕೆ ಕಂಡಿದೆ. ಅಂದಾಜು 1,180 ಟನ್‌ಗಳಷ್ಟು ನಾಣ್ಯಗಳನ್ನು ಗ್ರಾಹಕರು, ಚಿನ್ನೋದ್ಯಮಿಗಳು ಖರೀದಿಸಿದ್ದಾರೆ.

ಕೇಂದ್ರೀಯ ಬ್ಯಾಂಕುಗಳು 2021 ರಲ್ಲಿ ಸುಮಾರು 463 ಟನ್‌ಗಳಷ್ಟು ಚಿನ್ನವನ್ನು ಸಂಗ್ರಹಿಸಿವೆ. 2020 ರ ಒಟ್ಟು ಮೊತ್ತಕ್ಕಿಂತ ಇದು ಸರಿ ಸುಮಾರು 82 ಪ್ರತಿಶತದಷ್ಟು ಹೆಚ್ಚು ಎಂದು ಗೋಲ್ಡ್​ ಕೌನ್ಸಿಲ್​ ಅಂದಾಜಿಸಿದೆ. ಇನ್ನು ಜಾಗತಿಕವಾಗಿ ಮೀಸಲು ನಿಧಿ ಸುಮಾರು 30 ವರ್ಷಗಳ ಗರಿಷ್ಠ ಮಟ್ಟಕ್ಕೆ ಏರಿಕೆ ಕಂಡಿದೆ ಎನ್ನುವುದು ಗಮನಿಸಬೇಕಾದ ಅಂಶವಾಗಿದೆ.

ಇದನ್ನು ಓದಿ:ಕೇಂದ್ರ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರರಾಗಿ ವಿ. ಅನಂತ ನಾಗೇಶ್ವರನ್ ನೇಮಕ

Last Updated :Jan 29, 2022, 7:52 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.