ETV Bharat / business

ನಕಲಿ ನೋಟು ದಂಧೆ: ನೇಪಾಳದಲ್ಲಿ ಸಿಕ್ಕಿಬಿದ್ದ ಪಾಕ್,ನೇಪಾಳಿ ಕಿಂಗ್‌ಪಿನ್ಸ್‌

author img

By

Published : May 25, 2019, 7:34 PM IST

ಬಂಧಿತರಿಂದ ನಾಲ್ಕು ಸೂಟ್​ಕೇಸ್​ ವಶಪಡಿಸಿಕೊಂಡಿದ್ದು, ಅದರಲ್ಲಿ ಭಾರತದ ₹ 2,000 ಮುಖಬೆಲೆಯ ₹ 7.67 ಲಕ್ಷ ಕೋಟಿ ರೂ ನಕಲಿ ನೋಟುಗಳು ಸಿಕ್ಕಿವೆ.

ಸಾಂದರ್ಭಿಕ ಚಿತ್ರ

ನೇಪಾಳ: ಭಾರತದ ನಕಲಿ ನೋಟು ಜಾಲ ವಿಸ್ತರಿಸುತ್ತಿದ್ದ ಕಿಂಗ್​ ಪಿನ್​ ಯುನೂಸ್​ ಅನ್ಸಾರಿ ಹಾಗೂ ಪಾಕಿಸ್ತಾನ ಮೂಲದ ಮೂವರನ್ನು ಕಠ್ಮಂಡು ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.

ಅನ್ಸಾರಿ ಜೊತೆ ಮೂವರು ಪಾಕಿಸ್ತಾನಿ ಹಾಗೂ ಇಬ್ಬರು ನೇಪಾಳಿ ಪ್ರಜೆಗಳನ್ನು ತ್ರಿಭುವನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯಲಾಗಿದೆ. ಅನ್ಸಾರಿಯಿಂದ ₹ 7 ಕೋಟಿ ರೂ ಭಾರತದ ನಕಲಿ ನೋಟುಗಳನ್ನು ಜಫ್ತಿ ಮಾಡಿಕೊಂಡಿರುವುದಾಗಿ ನೇಪಾಳದ ಅಧಿಕಾರಿಗಳು ತಿಳಿಸಿದ್ದಾರೆ.

ಬಂಧಿತ ಆರೋಪಿಗಳು ಕತಾರ್​ನಿಂದ ನೇಪಾಳಕ್ಕೆ ಬಂದಿದ್ದರು. ಆದರೆ, ಅವರ ಪಾಸ್​ಪೋರ್ಟ್​ನಲ್ಲಿ ಪಾಕಿಸ್ತಾನದಿಂದ ಪ್ರಯಾಣ ಆರಂಭ ಎಂದು ನಮೂದಿಸಿದೆ ಎಂದು ಹೇಳಿದ್ದಾರೆ.

ಬಂಧಿತರಿಂದ ನಾಲ್ಕು ಸೂಟ್​ಕೇಸ್​ ವಶಪಡಿಸಿಕೊಂಡಿದ್ದು, ಅದರಲ್ಲಿ ಭಾರತದ ₹ 2000 ಮುಖಬೆಲೆಯ ₹ 7.67 ಲಕ್ಷ ಕೋಟಿ ನಕಲಿ ನೋಟುಗಳು ಇರುವುದಾಗಿ ವಿವರಿಸಿದ್ದಾರೆ.

ಸಾಹೆಲ್ ಖಾನ್​ (ಯುನೂಸ್ ಸಂಬಂಧಿ) ಹಾಗೂ ಸುಜಾನಾ ರಾಣಾಭಟ್​ (ಯುನೂಸ್​​ ಚಾಲಕ) ಸೇರಿದಂತೆ ಇಬ್ಬರು ಪೊಲೀಸರ ವಶದಲ್ಲಿದ್ದಾರೆ.ಕಾನೂನು ಬಾಹಿರ ನೋಟುಗಳ ದಂಧೆಗೆ ಸಂಬಂಧಿಸಿದಂತೆ ಕೆಲ ತಿಂಗಳಿಂದ ಅನ್ಸಾರಿ ಜೈಲಿನಿಂದ ಬಿಡುಗಡೆಯಾಗಿದ್ದ. ಈಗ ಮತ್ತೆ ಪೊಲೀಸರ ಅತಿಥಿಯಾಗಿದ್ದಾನೆ.

Intro:Body:Conclusion:

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.