ETV Bharat / business

ಸ್ವಿಸ್ ಅಕೌಂಟ್ಸ್​ನಲ್ಲಿ ಭಾರತೀಯರ ಹಣ ಗಣನೀಯ ಇಳಿಕೆ: 3 ದಶಕದಲ್ಲಿ ಅತ್ಯಂತ ಕನಿಷ್ಠ

author img

By

Published : Jun 25, 2020, 11:14 PM IST

1987ರಿಂದ ಸ್ವಿಸ್ ನ್ಯಾಷನಲ್ ಬ್ಯಾಂಕ್ (ಎಸ್‌ಎನ್‌ಬಿ) ದತ್ತಾಂಶವನ್ನು ಸಂಗ್ರಹಿಸಲು ಪ್ರಾರಂಭಿಸಿದ ಮೂರು ದಶಕಗಳಿಗಿಂತಲೂ ಹೆಚ್ಚಿನ ಅವಧಿಯಲ್ಲಿ ಈ ಸಂಖ್ಯೆ ಮೂರನೇ ಅತ್ಯಂತ ಕಡಿಮೆ ಮಟ್ಟಕ್ಕೆ ಇಳಿಕೆಯಾಗಿದೆ. ಸ್ವಿಟ್ಜರ್ಲೆಂಡ್‌ನ ಭಾರತೀಯ ನಿವಾಸಿಗರು ಹೊಂದಿರುವ ಆಸ್ತಿಗಳನ್ನು 'ಕಪ್ಪು ಹಣ' ಎಂದು ಪರಿಗಣಿಸಲಾಗುವುದಿಲ್ಲ ಎಂದು ಸ್ವಿಸ್ ಅಧಿಕಾರಿಗಳು ಯಾವಾಗಲೂ ಸಮರ್ಥಿಸಿಕೊಂಡು ಬರುತ್ತಿದ್ದಾರೆ.

Swiss banks
ಸ್ವಿಸ್ ಬ್ಯಾಂಕ್

ನವದೆಹಲಿ/ಜುರಿಚ್: ಭಾರತ ಮೂಲದ ಶಾಖೆಗಳ ಮೂಲಕ ಸ್ವಿಸ್ ಬ್ಯಾಂಕ್​ಗಳಲ್ಲಿ ಭಾರತೀಯರು ಮತ್ತು ಉದ್ಯಮಗಳು ಇರಿಸಿದ ಹಣವು 2019ರಲ್ಲಿ ಶೇ 6ರಷ್ಟು ಕುಸಿದು 899 ಮಿಲಿಯನ್ ಸ್ವಿಸ್ ಫ್ರಾಂಕ್‌ಗಳಿಗೆ (6,625 ಕೋಟಿ ರೂ.) ತಲುಪಿದೆ ಎಂದು ಸ್ವಿಟ್ಜರ್ಲೆಂಡ್‌ನ ಕೇಂದ್ರ ಬ್ಯಾಂಕಿನ ವಾರ್ಷಿಕ ಅಂಕಿ ಅಂಶಗಳು ತಿಳಿಸಿವೆ.

ಈ ಅಂಕಿಅಂಶಗಳು ಸತತ ಎರಡನೇ ವರ್ಷವೂ ಎಲ್ಲಾ ಸ್ವಿಸ್ ಬ್ಯಾಂಕ್​ಗಳಲ್ಲಿ ಭಾರತೀಯ ಗ್ರಾಹಕರ ಒಟ್ಟು ನಿಧಿಯ ಕುಸಿತವನ್ನು ಸೂಚಿಸುತ್ತದೆ. 1987ರಿಂದ ಸ್ವಿಸ್ ನ್ಯಾಷನಲ್ ಬ್ಯಾಂಕ್ (ಎಸ್‌ಎನ್‌ಬಿ) ದತ್ತಾಂಶವನ್ನು ಸಂಗ್ರಹಿಸಲು ಪ್ರಾರಂಭಿಸಿದ ಮೂರು ದಶಕಗಳಿಗಿಂತಲೂ ಹೆಚ್ಚಿನ ಅವಧಿಯಲ್ಲಿ ಈ ಸಂಖ್ಯೆ ಮೂರನೇ ಅತ್ಯಂತ ಕಡಿಮೆ ಮಟ್ಟಕ್ಕೆ ಇಳಿಕೆಯಾಗಿದೆ.

ಎಸ್‌ಎನ್‌ಬಿ ವಿವರಣೆಯ ಅನ್ವಯ, 2019ರ ಕೊನೆಯಲ್ಲಿ ಒಟ್ಟು ಸಿಎಚ್‌ಎಫ್ 899.46 ಮಿಲಿಯನ್ ಸ್ವಿಸ್ ಫ್ರಾಂಕ್‌ ಬ್ಯಾಂಕ್​ಗಳಲ್ಲಿದೆ. 550 ಮಿಲಿಯನ್ ಫ್ರಾಂಕ್‌ (4,000 ಕೋಟಿ ರೂ.) ಗ್ರಾಹಕ ಠೇವಣಿ, 88 ಮಿಲಿಯನ್ ಫ್ರಾಂಕ್‌ (650 ಕೋಟಿ ರೂ.) ಇತರ ಬ್ಯಾಂಕುಗಳ ಮೂಲಕ ನಡೆಯುತ್ತದೆ. ನಂಬಿಕಸ್ಥರು ಅಥವಾ ಟ್ರಸ್ಟ್‌ಗಳ ಮೂಲಕ 7.4 ಮಿಲಿಯನ್ ಫ್ರಾಂಕ್‌ (50 ಕೋಟಿ ರೂ.) ಮತ್ತು 254 ಮಿಲಿಯನ್ ಫ್ರಾಂಕ್‌ (1,900 ಕೋಟಿ ರೂ.) ಸೆಕ್ಯುರಿಟೀಸ್ ಮತ್ತು ವಿವಿಧ ಹಣಕಾಸು ಸಾಧನಗಳ ರೂಪದಲ್ಲಿದೆ ಎಂದಿದೆ.

ಈ ಅಂಕಿ ಅಂಶವು ಸ್ವಿಸ್ ಮೂಲದ ಬ್ಯಾಂಕ್ ಭಾರತೀಯ ಬ್ಯಾಂಕೇತರ ಗ್ರಾಹಕರ ಠೇವಣಿಗಳ ಮತ್ತು ಸಾಲಗಳನ್ನು ಗಣನೆಗೆ ತೆಗೆದುಕೊಳ್ಳುತ್ತದೆ. 2018ರಲ್ಲಿ ಶೇ 11ರಷ್ಟು ಮತ್ತು 2017ರಲ್ಲಿ 44 ಪ್ರತಿಶತದಷ್ಟು ಕುಸಿತ ತೋರಿಸಿದೆ. ಇದು 2007ರ ಕೊನೆಯಲ್ಲಿ 2.3 ಬಿಲಿಯನ್ (9,000 ರೂ. ಕೋಟಿ) ಯಷ್ಟಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.