ETV Bharat / business

ಜಿಎಸ್​ಟಿ ಜಾರಿ 21ನೇ ಶತಮಾನದ ಅತಿದೊಡ್ಡ ಮೂರ್ಖತನ: ಸ್ವಪಕ್ಷ ಬಿಜೆಪಿ ವಿರುದ್ಧ ಸುಬ್ರಮಣಿಯನ್ ಕಿಡಿ

author img

By

Published : Feb 20, 2020, 4:55 AM IST

ಹೈದರಾಬಾದ್​ನ '2030ರ ವೇಳೆಗೆ ಭಾರತದ ಸೂಪರ್​ಪವರ್​ ಆರ್ಥಿಕತೆ' ಕಾರ್ಯಕ್ರಮದಲ್ಲಿ ಮಾತನಾಡಿದ ಜೆಪಿಯ ಹಿರಿಯ ಮುಖಂಡ ಡಾ. ಸುಬ್ರಮಣಿಯನ್ ಸ್ವಾಮಿ, ದೇಶದ ಆರ್ಥಿಕ ಸುಧಾರಣೆಗಳು ಬದಲಾಗಲು ಪ್ರಮುಖ ಕಾರಣರಾದ ಮಾಜಿ ಪ್ರಧಾನಿ ದಿ. ಪಿ.ವಿ. ನರಸಿಂರಾವ್ ಅವರಿಗೆ ಭಾರತ ರತ್ನ ನೀಡಬೇಕು. ದೇಶದಲ್ಲಿ ಕಾಲಕಾಲಕ್ಕೆ ಶೇ 8ರಷ್ಟು ಬೆಳವಣಿಗೆಯನ್ನು ಸಾಧಿಸಿದ್ದರೂ, ಕಾಂಕಗ್ರೆಸ್​ ಮುಖಂಡ ಪಿ.ವಿ ನರಸಿಂಹರಾವ್ ತಂದಿರುವ ಸುಧಾರಣೆಗಲ್ಲಿ ಯಾವುದೇ ಬದಲಾವಣೆಗಳು ಕಂಡುಬಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Subramanian Swamy
ಸುಬ್ರಮಣಿಯನ್ ಸ್ವಾಮಿ

ನವದೆಹಲಿ: ದೇಶಾದ್ಯಂತ ಜಾರಿಯಾದ ಏಕರೂಪದ ತೆರಿಗೆ ಪದ್ಧತಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) 21ನೇ ಶತಮಾನದ ಅತಿದೊಡ್ಡ ಮೂರ್ಖತನ ಎಂದು ಬಿಜೆಪಿಯ ಹಿರಿಯ ಮುಖಂಡ ಡಾ. ಸುಬ್ರಮಣಿಯನ್ ಸ್ವಾಮಿ ವ್ಯಂಗ್ಯವಾಡಿದ್ದಾರೆ.

ಹೈದರಾಬಾದ್​ನ '2030ರ ವೇಳೆಗೆ ಭಾರತದ ಸೂಪರ್​ಪವರ್​ ಆರ್ಥಿಕತೆ' ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದ ಆರ್ಥಿಕ ಸುಧಾರಣೆಗಳು ಬದಲಾಗಲು ಪ್ರಮುಖ ಕಾರಣರಾದ ಮಾಜಿ ಪ್ರಧಾನಿ ದಿ. ಪಿ.ವಿ. ನರಸಿಂರಾವ್ ಅವರಿಗೆ ಭಾರತ ರತ್ನ ನೀಡಬೇಕು. ದೇಶದಲ್ಲಿ ಕಾಲಕಾಲಕ್ಕೆ ಶೇ 8ರಷ್ಟು ಬೆಳವಣಿಗೆಯನ್ನು ಸಾಧಿಸಿದ್ದರೂ, ಕಾಂಕಗ್ರೆಸ್​ ಮುಖಂಡ ಪಿ.ವಿ ನರಸಿಂಹರಾವ್ ತಂದಿರುವ ಸುಧಾರಣೆಗಲ್ಲಿ ಯಾವುದೇ ಬದಲಾವಣೆಗಳು ಕಂಡುಬಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

'2030ರ ವೇಳೆಗೆ ಭಾರತದ ಸೂಪರ್​ಪವರ್​ ಆರ್ಥಿಕತೆ' ಕಾರ್ಯಕ್ರಮದಲ್ಲಿ ಮಾತನಾಡಿದ ಸುಬ್ರಮಣಿಯನ್ ಸ್ವಾಮಿ

ಶೇ 3.7ರಷ್ಟು ಹೇಗೆ ಪಡೆದುಕೊಳ್ಳಬೇಕು (ಹೂಡಿಕೆ ಮಾಡುವವರಿಗೆ ಪ್ರೋತ್ಸಾಹ)? ಭ್ರಷ್ಟಾಚಾರದ ವಿರುದ್ಧ ಹೋರಾಡಬೇಕು. ಆದಾಯ ತೆರಿಗೆ, ಜಿಎಸ್​ಟಿಯಿಂದ ಹೂಡಿಕೆದಾರರಲ್ಲಿ ಭಯ ಸೃಷ್ಟಿಸಬಾರದು. ಜಿಎಸ್​ಟಿ ಪದ್ಧತಿಯ ಅನುಷ್ಠಾನ 21ನೇ ಶತಮಾನದ ಅತಿದೊಡ್ಡ ಹುಚ್ಚುತನ. ಈ ಜಿಎಸ್​ಟಿ ತುಂಬ ಕಠಿಣವಾಗಿದೆ. ಅದನ್ನು ಯಾವ ರೂಪದ ಮುಖೇನ ತರಬೇಕು ಎಂಬುದು ಯಾರಿಗೂ ತಿಳಿಯುತಿಲ್ಲ ಎಂದು ವಿಶ್ಲೇಷಿಸಿದರು.

ತೆರಿಗೆ ಮಾಹಿತಿ ಕಂಪ್ಯೂಟರ್​ಗೆ ದಾಖಲಿಸುವಂತೆ ಸರ್ಕಾರ ಬಯಸುತ್ತಿದೆ. ರಾಜಸ್ಥಾನದ ಕೆಲವರು, 'ನಮ್ಮ ಬಳಿ ವಿದ್ಯುತ್​ ಇಲ್ಲ. ನಾವು ಹೇಗೆ ವಿದ್ಯುತ್​ಗೆ ಅಪಲೋಡ್​ ಮಾಡಲು ಸಾಧ್ಯ'ವೆಂದು ಪ್ರಶ್ನಿಸಿದ್ದಾರೆ. ಮೊದಲು ಅದನ್ನು ನಿಮ್ಮ ತಲೆಗೆ ಸೇರಿಸಿಕೊಂಡು ಬಳಿಕ ಪ್ರಧಾನಿ ಬಳಿ ಹೋಗಿ ಹೇಳಿ ಎಂದು ಸಲಹೆ ನೀಡಿದ್ದೇನೆ ಎಂದು ಸ್ವಾಮಿ ತಿಳಿಸಿದರು.

ಭಾರತ ಆರ್ಥಿಕವಾಗಿ ಶಕ್ತಿಯುತ ರಾಷ್ಟ್ರ ಆಗಬೇಕಾದರೆ, ಮುಂದಿನ ದಶಕದಲ್ಲಿ ಶೇ 10ರಷ್ಟು ಬೆಳವಣಿಗೆ ದಾಖಲಿಸಬೇಕು. ಈ ರೀತಿಯಲ್ಲಿ ಬೆಳವಣಿಗೆ ಮುಂದುವರಿದರೆ ಚೀನಾವನ್ನು ಹಿಂದಿಕ್ಕೆ ಮುಂದಿನ 50 ವರ್ಷಗಳಲ್ಲಿ ಭಾರತ ನಂಬರ್​ 1 ಸ್ಥಾನದಲ್ಲಿದ್ದು ಅಮೆರಿಕಕ್ಕೆ ಸವಾಲೊಡ್ಡಬಹುದು ಎಂದು ಅಭಿಪ್ರಾಯಪಟ್ಟರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.