ETV Bharat / business

ಇನ್ಮುಂದೆ ಆಹಾರ ಧಾನ್ಯಗಳ ಪ್ಯಾಕಿಂಗ್​ಗೆ ಸೆಣಬಿನ ಚೀಲ ಬಳಕೆ ಕಡ್ಡಾಯ!

author img

By

Published : Oct 29, 2020, 9:11 PM IST

ಆಹಾರ ಧಾನ್ಯ ಪ್ಯಾಕಿಂಗ್‌ನಲ್ಲಿ ಸೆಣಬಿನ ಚೀಲಗಳನ್ನು ಕಡ್ಡಾಯವಾಗಿ ಬಳಸುವ ಪ್ರಸ್ತಾಪಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಶೇ 100ರಷ್ಟು ಆಹಾರ ಧಾನ್ಯಗಳು ಮತ್ತು ಶೇ 20ರಷ್ಟು ಸಕ್ಕರೆಯನ್ನು ಸೆಣಬಿನ ಚೀಲಗಳಲ್ಲಿ ತುಂಬಿಸಲಾಗುತ್ತದೆ. ಇದು ಮುಂಬರುವ ವರ್ಷಗಳಲ್ಲಿ ಸೆಣಬಿನ ಬೇಡಿಕೆ ಹೆಚ್ಚಿಸಲು ಕಾರಣವಾಗುತ್ತದೆ.

jute
ಸೆಣಬು

ನವದೆಹಲಿ: ಸೆಣಬು ಬೆಳೆಯುವ ರಾಜ್ಯಗಳಲ್ಲಿನ ರೈತರಿಗೆ ನೇರವಾಗಿ ಅನುಕೂಲವಾಗುವ ಮಹತ್ವದ ನಿರ್ಧಾರವನ್ನು ಕೇಂದ್ರ ಸರ್ಕಾರ ತೆಗೆದುಕೊಂಡಿದೆ.

ಆಹಾರ ಧಾನ್ಯ ಪ್ಯಾಕಿಂಗ್‌ನಲ್ಲಿ ಸೆಣಬಿನ ಚೀಲಗಳನ್ನು ಕಡ್ಡಾಯವಾಗಿ ಬಳಸುವ ಪ್ರಸ್ತಾಪಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಸಕ್ಕರೆ ಪ್ಯಾಕಿಂಗ್‌ಗೆ ಕಡ್ಡಾಯ ಸೀಲಿಂಗ್ ಅನ್ನು ಶೇ 20ರಷ್ಟು ಎಂದು ನಿಗದಿಪಡಿಸಲಾಗಿದೆ.

ಶೇ 100ರಷ್ಟು ಆಹಾರ ಧಾನ್ಯಗಳು ಮತ್ತು ಶೇ 20ರಷ್ಟು ಸಕ್ಕರೆಯನ್ನು ಸೆಣಬಿನ ಚೀಲಗಳಲ್ಲಿ ತುಂಬಿಸಲಾಗುತ್ತದೆ. ಇದು ಮುಂಬರುವ ವರ್ಷಗಳಲ್ಲಿ ಸೆಣಬಿನ ಬೇಡಿಕೆ ಹೆಚ್ಚಿಸಲು ಕಾರಣವಾಗುತ್ತದೆ. ಪ್ರತಿ ರೈತನಿಗೆ ಹೆಕ್ಟೇರ್‌ಗೆ 10,000 ರೂ. ಹೆಚ್ಚುವರಿ ಆದಾಯ ಸಿಗಲಿದೆ ಎಂದು ಸಚಿವರು ಹೇಳಿದರು.

ಈ ನಿರ್ಧಾರವು ಪಶ್ಚಿಮ ಬಂಗಾಳ, ಒಡಿಶಾ, ತ್ರಿಪುರ, ಮೇಘಾಲಯ ಮತ್ತು ಆಂಧ್ರಪ್ರದೇಶದ 4,00,000 ರೈತರಿಗೆ ಪ್ರಯೋಜನ ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ. ಸರ್ಕಾರಿ ಇ-ಮಾರ್ಕೆಟ್ ಪ್ಲೇಸ್ (ಜಿಎಂ) ಪೋರ್ಟಲ್‌ನಲ್ಲಿ ಶೇ 10ರಷ್ಟು ಸೆಣಬಿನ ಚೀಲಗಳು ಹರಾಜಿಗೆ ಮುಕ್ತವಾಗುತ್ತವೆ ಎಂದು ಸಚಿವರು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.