ETV Bharat / business

ಬಡವರು ಹಸಿವಿನಿಂದ ಬಳಲದಂತೆ ದೊಡ್ಡ ಆರ್ಥಿಕ ಪ್ಯಾಕೇಜ್ ನೀಡಲಾಗಿದೆ: ರಾಷ್ಟ್ರಪತಿ

author img

By

Published : Jan 29, 2021, 1:27 PM IST

ಕೋವಿಡ್ -19 ಸಾಂಕ್ರಾಮಿಕ ರೋಗದ ಹೊರತಾಗಿಯೂ ಭಾರತವು ಹೂಡಿಕೆದಾರರಿಗೆ ಆಕರ್ಷಕ ತಾಣವಾಗಿ ಹೊರಹೊಮ್ಮಿದೆ. ಭಾರತೀಯರ ಪ್ರಾಣ ಉಳಿಸುವ ಪ್ರಯತ್ನಗಳ ಮಧ್ಯೆ ಆರ್ಥಿಕತೆಗೆ ಉಂಟಾದ ಹಾನಿಯಿಂದ ಚೇತರಿಸಿಕೊಳ್ಳಲು ದೇಶ ಪ್ರಾರಂಭಿಸಿದೆ. ಈ ಕಷ್ಟದ ಸಮಯದಲ್ಲೂ ಭಾರತವು ಜಾಗತಿಕ ಹೂಡಿಕೆದಾರರಿಗೆ ಆಕರ್ಷಕ ತಾಣವಾಗಿ ಹೊರಹೊಮ್ಮಿದೆ ಎಂದು ರಾಷ್ಟ್ರಪತಿ ರಾಮ್​ನಾಥ್ ಕೋವಿಂದ್ ಇದ್ದರು.

President Ram Nath Kovind
President Ram Nath Kovind

ನವದೆಹಲಿ: ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಬಡವರಿಗೆ ಕೇಂದ್ರ ಸರ್ಕಾರವು ದಾಖಲೆ ಪ್ರಮಾಣದಲ್ಲಿ ಆರ್ಥಿಕ ಪ್ಯಾಕೇಜ್ ಘೋಷಿಸಿದೆ ಎಂದು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಹೇಳಿದ್ದಾರೆ.

ಶುಕ್ರವಾರ ಬಜೆಟ್​ನ ಜಂಟಿ ಸಂಸತ್ ಅಧಿವೇಶನ ಉದ್ದೇಶಿಸಿ ಮಾತನಾಡಿದ ರಾಷ್ಟ್ರಪತಿಗಳು, ಆರ್ಥಿಕತೆಯನ್ನು ನಿಭಾಯಿಸಲು ದಾಖಲೆಯ ವಿತ್ತೀಯ ಪ್ಯಾಕೇಜ್ ಘೋಷಣೆಯೊಂದಿಗೆ, ನನ್ನ ಸರ್ಕಾರವು ಯಾವುದೇ ಬಡವ ಹಸಿವಿನಿಂದ ಬಳಲುವುದಿಲ್ಲ ಎಂಬುದನ್ನು ಖಚಿತಪಡಿಸಿದೆ ಎಂದರು.

ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಮಹಿಳೆಯರು, ಬಡ ಹಿರಿಯ ನಾಗರಿಕರು ಮತ್ತು ರೈತರಿಗೆ ಉಚಿತ ಆಹಾರ ಧಾನ್ಯ ಮತ್ತು ನೇರ ನಗದು ಪಾವತಿಯನ್ನು ಸರ್ಕಾರ ಘೋಷಿಸಿತ್ತು ಎಂದು ಹೇಳಿದರು.

ನೂತನ ಎಕ್ಸ್‌ಪ್ರೆಸ್ ಹೆದ್ದಾರಿಗಳು, ಜಲಮಾರ್ಗಗಳು, ರೈಲ್ವೆಯ ಸರಕು ರೈಲುಗಳು ಮತ್ತು ಮೆಟ್ರೋ ಸಂಪರ್ಕ ಸೇರಿದಂತೆ ಭಾರತದ ಮೂಲಸೌಕರ್ಯಗಳ ಅಭಿವೃದ್ಧಿ ಮತ್ತು ಪ್ರಗತಿಯ ಬಗ್ಗೆ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದರು.

ಕೋವಿಡ್ -19 ಸಾಂಕ್ರಾಮಿಕ ರೋಗದ ಹೊರತಾಗಿಯೂ ಭಾರತವು ಹೂಡಿಕೆದಾರರಿಗೆ ಆಕರ್ಷಕ ತಾಣವಾಗಿ ಹೊರಹೊಮ್ಮಿದೆ. ಭಾರತೀಯರ ಪ್ರಾಣ ಉಳಿಸುವ ಪ್ರಯತ್ನಗಳ ಮಧ್ಯೆ ಆರ್ಥಿಕತೆಗೆ ಉಂಟಾದ ಹಾನಿಯಿಂದ ಚೇತರಿಸಿಕೊಳ್ಳಲು ದೇಶ ಪ್ರಾರಂಭಿಸಿದೆ. ಈ ಕಷ್ಟದ ಸಮಯದಲ್ಲೂ ಭಾರತವು ಜಾಗತಿಕ ಹೂಡಿಕೆದಾರರಿಗೆ ಆಕರ್ಷಕ ತಾಣವಾಗಿ ಹೊರಹೊಮ್ಮಿದೆ ಎಂದರು.

ಇದನ್ನೂ ಓದಿ: ಮುಂದಿನ 10 ವರ್ಷ ನಮಗೆ ನಿರ್ಣಾಯಕ ದಿನಗಳು, 2020ರ ಬಜೆಟ್​ ಕ್ರಮಗಳು ಮುಂದುವರಿಸುತ್ತೇವೆ: ಮೋದಿ

ಕೃಷಿ, ಶಿಕ್ಷಣ, ತಂತ್ರಜ್ಞಾನ, ಹಣಕಾಸು ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿನ ಪ್ರಗತಿ ಸಾಧಿಸಲಾಗಿದೆ. ಮಿಲಿಟರಿಯಲ್ಲಿ ಮಹಿಳೆಯರ ನೇಮಕಾತಿ ಬಗ್ಗೆಯೂ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದರು.

'ಜಲ ಜೀವನ್ ಮಿಷನ್'ನ ಮಹತ್ವಾಕಾಂಕ್ಷೆಯ ಯೋಜನೆಯಲ್ಲಿ ಸರ್ಕಾರ ಕಾರ್ಯನಿರ್ವಹಿಸುತ್ತಿದೆ. ಇದರ ಅಡಿ ಪ್ರತಿ ಮನೆಗೂ ಕುಡಿಯುವ ನೀರು ತಲುಪಿಸುವುದರ ಜೊತೆಗೆ, ನೀರಿನ ಸಂರಕ್ಷಣೆ ಬಗ್ಗೆಯೂ ಜಾಗೃತಿ ಮೂಡಿಸಲಾಗುತ್ತಿದೆ. ಈ ಅಭಿಯಾನದ ಅಡಿ ಇದುವರೆಗೆ 3 ಕೋಟಿ ಕುಟುಂಬಗಳಿಗೆ ಪೈಪ್ ಲೈನ್​ ಮೂಲಕ ನೀರು ಸರಬರಾಜು ಮಾಡಲಾಗಿದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.