ETV Bharat / business

ಕೋವಿಡ್ ಜಿಗಿತ: ಭಾರತದ ಜಿಡಿಪಿ ಮುನ್ಸೂಚನೆ ಶೇ 10ಕ್ಕೆ ಇಳಿಸಿದ ಬಾರ್ಕ್ಲೇಸ್

author img

By

Published : May 3, 2021, 4:06 PM IST

ಬಾರ್ಕ್ಲೇಸ್ ಪ್ರಕಾರ, ಭಾರತದ 2ನೇ ಕೋವಿಡ್ -19 ಅಲೆ ಮುಂದುವರೆದಂತೆ ಪ್ರಕರಣಗಳು ಮತ್ತು ಸಾವು- ನೋವುಗಳ ಸಂಖ್ಯೆಯ ಸುತ್ತಲೂ ಅನಿಶ್ಚಿತತೆ ಹೆಚ್ಚುತ್ತಿದೆ. ನಿಧಾನಗತಿಯ ವ್ಯಾಕ್ಸಿನೇಷನ್‌ಗಳು ಭಾರತದ ಚೇತರಿಕೆಯ ಭವಿಷ್ಯವನ್ನು ಸಹ ನೋಯಿಸುತ್ತಿವೆ. ಈ ಅನಿಶ್ಚಿತತೆ ಪ್ರತಿಬಿಂಬಿಸಲು ನಾವು ನಮ್ಮ 2021-22ರ ಹಣಕಾಸು ವರ್ಷದ ಜಿಡಿಪಿ ಬೆಳವಣಿಗೆಯ ಮುನ್ಸೂಚನೆಯನ್ನು 100 ಬಿಪಿ ಯಿಂದ ಶೇ 10ಕ್ಕೆ ಇಳಿಸುತ್ತೇವೆ ಎಂದಿದೆ.

GDP
GDP

ನವದೆಹಲಿ: ಬಾರ್ಕ್ಲೇಸ್ ಸೆಕ್ಯುರಿಟೀಸ್, ಭಾರತದ 2021-22ರ ಹಣಕಾಸು ವರ್ಷದ ಜಿಡಿಪಿ ಬೆಳವಣಿಗೆಯ ಮುನ್ಸೂಚನೆಯನ್ನು ಶೇ 11 ರಿಂದ ಶೇ 10ಕ್ಕೆ ಇಳಿಸಿದೆ.

'ಭಾರತ: ಸಂಶೋಧನಾ ಕೋವಿಡ್ -19 ಮತ್ತು ಲಸಿಕೆಗಳ ಸಂಶೋಧನಾ ವರದಿ'ಯಲ್ಲಿ ಬಾರ್ಕ್ಲೇಸ್ ಸಂಶೋಧಕ ರಾಹುಲ್ ಬಜೋರಿಯಾ ಮತ್ತು ಶ್ರೇಯಾ ಸೋಧಾನಿ ಕೋವಿಡ್ -19 ಎರಡನೇ ಅಲೆಯ ಸಾಂಕ್ರಾಮಿಕ ರೋಗದ ಆರ್ಥಿಕ ಪರಿಣಾಮವು ವ್ಯಾಪಕವಾಗಿದೆ ಎಂದು ಹೇಳಿದ್ದಾರೆ.

ಆಗಸ್ಟ್​ವರೆಗೆ ವೈರಸ್ ಹರಡುವುದನ್ನು ತಡೆಗಟ್ಟಲು ರಾಜ್ಯಗಳು ಕಠಿಣ ನಿಗ್ರಹಗಳನ್ನು ಮುಂದುವರಿಸಿದರೆ, ನೈಜ ಜಿಡಿಪಿ ಬೆಳವಣಿಗೆಯ ಮೇಲೆ 120 ಬಿಪಿ ತೊಂದರೆಯುಂಟಾಗುತ್ತದೆ. ಸಾಂಕ್ರಾಮಿಕ ರೋಗವನ್ನು ತ್ವರಿತ ನಿಯಂತ್ರಣಕ್ಕೆ ತರದಿದ್ದರೆ ಹೆಚ್ಚು ನಿರಾಶಾವಾದದ ಸನ್ನಿವೇಶ ಸೃಷ್ಟಿಯಾಗಲಿದೆ. ಆರ್ಥಿಕ ನಷ್ಟಗಳು ಕೂಡ ಹೆಚ್ಚಾಗಬಹುದು ಎಂದರು.

ಆಗಸ್ಟ್ ಅಂತ್ಯದವರೆಗೆ ಈಗಿನ ನಿರ್ಬಂಧಗಳು ಜಾರಿಯಲ್ಲಿದ್ದರೆ, ಇದು ವಾರ್ಷಿಕ ನೈಜ ಜಿಡಿಪಿ ಬೆಳವಣಿಗೆಗೆ ಮತ್ತೊಂದು 120 ಬಿಪಿ ತೊಂದರೆಯುಂಟು ಮಾಡುತ್ತದೆ. 2021-22 ವಿತ್ತೀಯ ವರ್ಷದ ಬೆಳವಣಿಗೆಯನ್ನು ವರ್ಷದಿಂದ ವರ್ಷಕ್ಕೆ ಶೇ 8.8ಕ್ಕೆ ಎಳೆಯಬಹುದು ಎಂದಿದೆ.

ಬಾರ್ಕ್ಲೇಸ್ ಪ್ರಕಾರ, ಭಾರತದ 2ನೇ ಕೋವಿಡ್ -19 ಅಲೆ ಮುಂದುವರೆದಂತೆ ಪ್ರಕರಣಗಳು ಮತ್ತು ಸಾವು - ನೋವುಗಳ ಸಂಖ್ಯೆಯ ಸುತ್ತಲೂ ಅನಿಶ್ಚಿತತೆ ಹೆಚ್ಚುತ್ತಿದೆ. ನಿಧಾನಗತಿಯ ವ್ಯಾಕ್ಸಿನೇಷನ್‌ಗಳು ಭಾರತದ ಚೇತರಿಕೆಯ ಭವಿಷ್ಯವನ್ನು ಸಹ ನೋಯಿಸುತ್ತಿವೆ. ಈ ಅನಿಶ್ಚಿತತೆಯನ್ನು ಪ್ರತಿಬಿಂಬಿಸಲು ನಾವು ನಮ್ಮ 2021-22ರ ಹಣಕಾಸು ವರ್ಷದ ಜಿಡಿಪಿ ಬೆಳವಣಿಗೆಯ ಮುನ್ಸೂಚನೆಯನ್ನು 100 ಬಿಪಿ ಯಿಂದ ಶೇ 10ಕ್ಕೆ ಇಳಿಸುತ್ತೇವೆ ಎಂದು ಅದು ಹೇಳಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.