ETV Bharat / business

ಪಿವಿ ನರಸಿಂಹರಾವ್ ಕಾಲಕ್ಕೆ 1 ಡಾಲರ್​ಗೆ 17 ರೂ. ಇದ್ದ ರೂಪಾಯಿ ಮೌಲ್ಯ ಮೋದಿ ಕಾಲಕ್ಕೆ 74 ರೂ.ಗೆ ಏರಿಕೆ!

author img

By

Published : Dec 19, 2020, 6:31 PM IST

ಕೊರೊನಾ ಪ್ರೇರೇಪಿತ ಆರ್ಥಿಕ ಹೊಡೆತ ಹಾಗೂ ಈ ಹಿಂದಿನ ವರ್ಷದ ನಿಧಾನ ಗತಿಯು ಚಟುವಟಿಕೆಗಳ ನಡುವೆಯೂ ದೇಶಿ ಷೇರು ಮಾರುಕಟ್ಟೆ ದಿನದಿಂದ ದಿನಕ್ಕೆ ಹೊಸ ಎತ್ತರಕ್ಕೆ ಏರುತ್ತಿದೆ. ಇದರ ಜೊತೆಗೆ ಹಣದುಬ್ಬರ ಸಹ ಆರ್​ಬಿಐ ನಿರೀಕ್ಷಿತ ಗುರಿ ದಾಟಿ ಸಾಗುತ್ತಿದೆ. ಪೆಟ್ರೋಲ್ ಮತ್ತು ಡೀಸೆಲ್ ಗಗನ ಮುಖಿಯಾಗಿ ಈಗ ಅಲ್ಪ ವಿರಾಮ ನೀಡಿವೆ. ಕೋವಿಡ್ ಲಸಿಕೆಯ ಸಕರಾತ್ಮಕ ಫಲಿತಾಂಶ ಇಂಧನ ಬೇಡಿಕೆ ಹೆಚ್ಚಿಸಿದ್ದು, ಇದು ಮತ್ತೊಂದು ಸುತ್ತಿನ ದರ ಏರಿಕೆ ಮುನ್ಸೂಚನೆಯಾಗಿ ಕಾಣಿಸುತ್ತಿದೆ.

PM's
ಪ್ರಧಾನಿಗಳು

ನವದೆಹಲಿ: ಜಾಗತೀಕರಣ, ಉದಾರೀಕರಣ ಹಾಗೂ ಖಾಸಗೀಕರಣದಂತಹ ಉದ್ಯಮಿ ಸ್ನೇಹಿ ನೀತಿಗಳನ್ನು ಮುಕ್ತವಾಗಿ ಅಪ್ಪಿಕೊಂಡ ಭಾರತಕ್ಕೆ ಕಳೆದ ಮೂರು ದಶಕಗಳಲ್ಲಿ ಸಾಕಷ್ಟು ಬದಲಾವಣೆ ತಂದಿದೆ.

ಎಲ್​ಪಿಜಿ ಜಾರಿಯಾಗಿ 30 ವರ್ಷಗಳು ಆಗುತ್ತಿವೆ. ಈ ಅವಧಿಯಲ್ಲಿ ನಾಲ್ವರು ಪ್ರಧಾನಿ ಮಂತ್ರಿಗಳು ( ಡಾ. ಸಿಂಗ್ ಮತ್ತು ಮೋದಿ ಎರಡು ಬಾರಿ) ಆಡಳಿತ ನಡೆಸಿದ್ದಾರೆ. ಡಾ. ಮನಮೋಹನ್ ಸಿಂಗ್ ಹಾದಿಯಾಗಿ ನಿರ್ಮಲಾ ಸೀತಾರಾಮನ್​ವರೆಗೂ ಹಲವು ವಿತ್ತ ಮಂತ್ರಿಗಳು ತಮ್ಮ ಆಯವ್ಯಯ ಮಂಡಿಸಿದ್ದಾರೆ. ಹೂಡಿಕೆದಾರರ ಅನುಕೂಲಕ್ಕಾಗಿ ವ್ಯಾಪಾರ- ವಹಿವಾಟು ಸಂಬಂಧಿತ ಹತ್ತಾರು ಕಾಯ್ದೆಗಳು ಜಾರಿಯಾಗಿವೆ, ಲೆಕಕ್ಕೆ ಸಿಗದಷ್ಟು ಕಾಯ್ದೆಗಳು ತಿದ್ದುಪಡಿ ಆಗಿವೆ.

ಕೊರೊನಾ ಪ್ರೇರೇಪಿತ ಆರ್ಥಿಕ ಹೊಡೆತ ಹಾಗೂ ಈ ಹಿಂದಿನ ವರ್ಷದ ನಿಧಾನಗತಿಯ ಚಟುವಟಿಕೆಗಳ ನಡುವೆಯೂ ದೇಶಿ ಷೇರು ಮಾರುಕಟ್ಟೆ ದಿನದಿಂದ ದಿನಕ್ಕೆ ಹೊಸ ಎತ್ತರಕ್ಕೆ ಏರುತ್ತಿದೆ. ಇದರ ಜೊತೆಗೆ ಹಣದುಬ್ಬರ ಸಹ ಆರ್​ಬಿಐ ನಿರೀಕ್ಷಿತ ಗುರಿ ದಾಟಿ ಸಾಗುತ್ತಿದೆ. ಪೆಟ್ರೋಲ್ ಮತ್ತು ಡೀಸೆಲ್ ಗಗನ ಮುಖಿಯಾಗಿ ಈಗ ಅಲ್ಪ ವಿರಾಮ ನೀಡಿವೆ. ಕೋವಿಡ್ ಲಸಿಕೆಯ ಸಕರಾತ್ಮಕ ಫಲಿತಾಂಶ ಇಂಧನ ಬೇಡಿಕೆ ಹೆಚ್ಚಿಸಿದ್ದು, ಇದು ಮತ್ತೊಂದು ಸುತ್ತಿನ ದರ ಏರಿಕೆ ಮುನ್ಸೂಚನೆಯಾಗಿ ಕಾಣಿಸುತ್ತಿದೆ.

ವಿದೇಶಿ ವಿನಿಮಯ ಸಂಗ್ರಹ 578.568( 42 ಲಕ್ಷ ಕೋಟಿ ರೂ) ಬಿಲಿಯನ್ ಡಾಲರ್​​ಗೆ ತಲುಪಿದೆ. ಚಿನ್ನದ ಸಂಗ್ರಹ 36.012 ಬಿಲಿಯನ್ ಡಾಲರ್​ಗೆ ಏರಿದೆ. ಐಎಂಎಫ್ ವಿಶೇಷ ಡ್ರಾಯಿಂಗ್ ರೈಟ್ಸ್​ 1.503 ಬಿಲಿಯನ್ ಡಾಲರ್​ನಷ್ಟಿದೆ. ಪೆಟ್ರೋಲಿಯಂ, ಇಂಜಿನಿಯರಿಂಗ್, ರಾಸಾಯನಿಕ ಮತ್ತು ರತ್ನಾಭರಣಗಳ ರಫ್ತು ವಹಿವಾಟು ಇಳಿಕೆ ಕಂಡಿದೆ. ಹಣಕಾಸಿನ ಕೊರತೆ ಈ ವರ್ಷದ ಮೊದಲ ಎಂಟು ತಿಂಗಳಲ್ಲಿ 42 ಬಿಲಿಯನ್ ಡಾಲರ್ ಆಗಿದೆ. ಡಾಲರ್ ವಿರುದ್ಧ ರೂಪಾಯಿ ಮೌಲ್ಯ 74 ರೂ.ಗೆ ತಲುಪಿದೆ. ತಲಾ ಆದಾಯ 6,284 ಡಾಲರ್​ಗೆ ತಲುಪಿದೆ. ಕೊರೊನಾ ಸಂಕಷ್ಟದಲ್ಲಿ ಬಿಎಸ್‌ಇನಲ್ಲಿ ಸಣ್ಣ ಮತ್ತು ಮಧ್ಯಮ ಗಾತ್ರದ ಷೇರು ಮಾರುಕಟ್ಟೆ ಮೌಲ್ಯ ಹೊಂದಿರುವ ಕಂಪನಿಗಳ ಷೇರುಗಳಲ್ಲಿ ಹೂಡಿಕೆ ಮಾಡಿದವರ ಮೊಗದಲ್ಲಿ ಈಗ ಮಂದಹಾಸ ಮೂಡುತ್ತಿದೆ. ಅವರು ಮಾಡಿದ ಹೂಡಿಕೆಗೆ ಭರ್ಜರಿ ಆದಾಯ ಸಿಗುತ್ತಿದೆ.

ಕೋವಿಡ್ ಅವಧಿಯ ಷೇರು ಮಾರುಕಟ್ಟೆ

ಕೋವಿಡ್​​ಗೆ ಲಸಿಕೆ ಕಂಡು ಹಿಡಿದಿರುವುದು ಹಾಗೂ ಹಲವು ಕಡೆ ಆಯಾಯ ದೇಶದ ನಾಗರಿಕರಿಗೆ ಲಸಿಕೆ ಹಾಕಲು ಸಿದ್ಧತೆ ನಡೆದಿದೆ. ಈ ಹಿನ್ನೆಲೆಯಲ್ಲಿ ವಿಶ್ವಾದಂತ್ಯ ಆಶಾ ಭಾವನೆ ವ್ಯಕ್ತವಾಗಿದೆ. ಜತೆ ಜತೆಗೆ ವಿಶ್ವದ ಹಲವು ರಾಷ್ಟ್ರಗಳು ಆರ್ಥಿಕ ಕುಸಿತದಿಂದ ಚೇತರಿಕೆ ಹಾದಿ ಹಿಡಿದಿವೆ. ಈ ಸುದ್ದಿ ಈಗ ಷೇರು ಮಾರುಕಟ್ಟೆಯಲ್ಲಿ ಉಲ್ಲಾಸಕ್ಕೆ ಕಾರಣವಾಗಿದೆ. ಹೀಗಾಗಿ ಮುಂಬೈ ಷೇರುಪೇಟೆಯೂ ಹೊಸ ಎತ್ತರಕ್ಕೆ ಏರಿಕೆ ಕಂಡಿದೆ. ಶುಕ್ರವಾರ ಸೆನ್ಸೆಕ್ಸ್​​ 47 ಸಾವಿರದ ಗಡಿ ದಾಟುವ ಮೂಲಕ ಹೊಸ ಇತಿಹಾಸ ಬರೆದಿದೆ. ಷೇರುಪೇಟೆ ಏರಿಕೆ ದಾರಿ ಹಿಡಿದಿರುವುದರ ಹಿಂದಿನ 7 ಕಾರಣಗಳನ್ನು ನೋಡುವುದಾದರೆ, 1990ರಲ್ಲಿ 982 ಅಂಕಗಳಷ್ಟಿದ್ದ ಸೆನ್ಸೆಕ್ಸ್​​ ಈಗ 47 ಸಾವಿರದ ಗಡಿ ದಾಟಿದೆ.

ಮೂರು ದಶಕಗಳ ಕಾಲ ಎಲ್​ಪಿಜಿ ಹಾದಿಯಲ್ಲಿ ಸಾಗಿ ಬಂದು ಕೊರೊನಾ ಕುಲುಮೆಯಲ್ಲಿರುವ ಭಾರತದ ವಿತ್ತೀಯ ಸಂಕ್ಷಿಪ್ತ ನೋಟ ಹೀಗಿದೆ...

ಮೂರ ದಶಕಗಳ ವಿತ್ತೀಯ ನೋಟ

ವರ್ಷ ಸೆನ್ಸೆಕ್ಸ್ ಜಿಡಿಪಿ ವಿದೇಶಿ ವಿನಿಮಯ​ (ಬಿಲಿಯನ್ ಡಾಲರ್​) ತಲಾ ಆದಾಯ (ಡಾಲರ್) ಡಾಲರ್​ vs ರೂ

1990 982 6 1 1160 17

1995 3,110 7 25 1540 31

2000 3972 8 38 2,061 44

2005 9,398 7 141 2,963 44

2010 20,509 9 277 4,554 45

2015 26,118 7 334 5,412 63

2020 46,961 -7 579 6,284 74

ವಿಶ್ವ ಮಾರುಕಟ್ಟೆಗಳ ಬೆಳವಣಿಗೆ ದರ

ನಾಸ್ಡಾಕ್​ - 86

ಸೆನ್ಸೆಕ್ಸ್​ - 80

ಎಸ್​​​ಪಿ 500 - 66

ಡಾ ಜೋನ್ಸ್​ - 63

ನಿಕ್ಕೆ - 38

ಶಾಂಘೈ - 25

ಹಾಂಗ್​ ಸೆಂಗ್ - 18

ETV Bharat Logo

Copyright © 2024 Ushodaya Enterprises Pvt. Ltd., All Rights Reserved.