ETV Bharat / business

30 ಕೋಟಿ ಡೋಸ್ ಲಸಿಕೆ ಖರೀದಿಗೆ ಬಯೋಲಾಜಿಕಲ್-ಇ ಸಂಸ್ಥೆ ಜತೆ ಕೇಂದ್ರದಿಂದ ₹ 1,500 ಕೋಟಿ ಒಪ್ಪಂದ!

author img

By

Published : Jun 3, 2021, 1:16 PM IST

ಮೊದಲ ಮತ್ತು ಎರಡನೇ ಹಂತದ ಕ್ಲಿನಿಕಲ್ ಪ್ರಯೋಗಗಳಲ್ಲಿ ಭರವಸೆಯ ಫಲಿತಾಂಶಗಳನ್ನು ತೋರಿಸಿರುವ ಬಯಲಾಜಿಕಲ್-ಇ ಸಂಸ್ಥೆಯ ಕೋವಿಡ್ -19 ಲಸಿಕೆ ಸದ್ಯ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗಕ್ಕೆ ಒಳಪಟ್ಟಿದೆ. ಬಯಲಾಜಿಕಲ್-ಇ ಅಭಿವೃದ್ಧಿಪಡಿಸುತ್ತಿರುವ ಆರ್​ಬಿಡಿ ಪ್ರೋಟೀನ್ ಉಪ-ಘಟಕ ಲಸಿಕೆಯಾಗಿದ್ದು, ಮುಂದಿನ ಕೆಲವು ತಿಂಗಳುಗಳಲ್ಲಿ ಲಭ್ಯವಾಗುವ ಸಾಧ್ಯತೆಯಿದೆ.

ಲಸಿಕೆ
ಲಸಿಕೆ

ನವದೆಹಲಿ: 30 ಕೋಟಿ ಡೋಸ್ ಕೋವಿಡ್ ಲಸಿಕೆ ಕಾಯ್ದಿರಿಸಲು ಕೇಂದ್ರ ಆರೋಗ್ಯ ಸಚಿವಾಲಯವು ಹೈದರಾಬಾದ್ ಮೂಲದ ಲಸಿಕೆ ತಯಾರಕ ಸಂಸ್ಥೆ ಬಯಲಾಜಿಕಲ್-ಇ ಜೊತೆ ಅಂತಿಮ ಒಪ್ಪಂದ ಮಾಡಿಕೊಂಡಿದೆ.

ಈ ಲಸಿಕೆಗಳನ್ನು 2021ರ ಆಗಸ್ಟ್-ಡಿಸೆಂಬರ್​ನಿಂದ ಬಯೋಲಾಜಿಕಲ್-ಇ ತಯಾರಿಸಿ ಸಂಗ್ರಹಿಸುತ್ತದೆ. ಈ ಉದ್ದೇಶಕ್ಕಾಗಿ ಕೇಂದ್ರ ಆರೋಗ್ಯ ಸಚಿವಾಲಯವು ಬಯಲಾಜಿಕಲ್-ಇ ಸಂಸ್ಥೆಗೆ 1500 ಕೋಟಿ ರೂ. ಮುಂಗಡ ಪಾವತಿಸಲಿದೆ.

ಮೊದಲ ಮತ್ತು ಎರಡನೇ ಹಂತದ ಕ್ಲಿನಿಕಲ್ ಪ್ರಯೋಗಗಳಲ್ಲಿ ಭರವಸೆಯ ಫಲಿತಾಂಶಗಳನ್ನು ತೋರಿಸಿರುವ ಬಯಲಾಜಿಕಲ್-ಇ ಸಂಸ್ಥೆಯ ಕೋವಿಡ್-19 ಲಸಿಕೆ ಸದ್ಯ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗಕ್ಕೆ ಒಳಪಟ್ಟಿದೆ. ಬಯಲಾಜಿಕಲ್-ಇ ಅಭಿವೃದ್ಧಿಪಡಿಸುತ್ತಿರುವ ಆರ್​ಬಿಡಿ ಪ್ರೋಟೀನ್ ಉಪ-ಘಟಕ ಲಸಿಕೆಯಾಗಿದ್ದು, ಮುಂದಿನ ಕೆಲವು ತಿಂಗಳುಗಳಲ್ಲಿ ಲಭ್ಯವಾಗುವ ಸಾಧ್ಯತೆಯಿದೆ.

ಕೋವಿಡ್-19 ಲಸಿಕೆ ಕುರಿತ ರಾಷ್ಟ್ರೀಯ ತಜ್ಞರ ಗುಂಪು (ಎನ್​ಇವಿವಿಎಸಿ) ಬಯಲಾಜಿಕಲ್-ಇ ಸಂಸ್ಥೆಯ ಪ್ರಸ್ತಾಪ ಪರಿಶೀಲಿಸಿದ ನಂತರ ಅನುಮೋದನೆ ನೀಡಿದೆ. ಇದು ದೇಶೀಯ ಲಸಿಕೆ ತಯಾರಕರಿಗೆ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ (ಆರ್&ಡಿ) ಬೆಂಬಲ ಮತ್ತು ಆರ್ಥಿಕ ನೆರವು ನೀಡುವ ಮೂಲಕ ಪ್ರೋತ್ಸಾಹಿಸುವ ಕೇಂದ್ರ ಸರ್ಕಾರದ ವ್ಯಾಪಕ ಪ್ರಯತ್ನದ ಭಾಗವಾಗಿದೆ.

ಬಯಲಾಜಿಕಲ್-ಇ ಕೋವಿಡ್ ಲಸಿಕೆಯನ್ನು ಕ್ಲಿನಿಕಲ್ ಪೂರ್ವ ಹಂತದಿಂದ ಮೂರನೇ ಹಂತದ ಅಧ್ಯಯನಗಳವರೆಗೆ ಕೇಂದ್ರ ಸರ್ಕಾರ ಬೆಂಬಲಿಸಿದೆ. ಜೈವಿಕ ತಂತ್ರಜ್ಞಾನ ಇಲಾಖೆಯು 100 ಕೋಟಿ ರೂ. ಹಣಕಾಸಿನ ನೆರವು ನೀಡಿದೆ. ಬಯಲಾಜಿಕಲ್-ಇ ಸಂಸ್ಥೆಯ ಜೊತೆ ಸಹಭಾಗಿತ್ವದಲ್ಲಿ ಎಲ್ಲಾ ಪ್ರಾಣಿಗಳ ಸವಾಲು ಮತ್ತು ಮೌಲ್ಯಮಾಪನ ಅಧ್ಯಯನಗಳನ್ನು ಫರಿದಾಬಾದ್​ನ ಸಂಶೋಧನಾ ಸಂಸ್ಥೆಯಾದ ಸಾಕ್ಷ್ಯಾಧಾರ ಆಧರಿತ ಆರೋಗ್ಯ ವಿಜ್ಞಾನ ತಂತ್ರಜ್ಞಾನ ಸಂಸ್ಥೆ (ಟಿಎಚ್ಎಸ್​ಟಿಐ) ಮೂಲಕ ನಡೆಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.