ETV Bharat / business

ದಿವಾಳಿ ಎದ್ದ ಏರ್ ಇಂಡಿಯಾ ಖರೀದಿಗೆ 209 ನೌಕರರು ಸಜ್ಜು: ಕಾರ್ಪೊರೇಟ್ ಶಕ್ತಿ ವಿರುದ್ಧ ಬಿಡ್ಡಿಂಗ್​​

author img

By

Published : Dec 4, 2020, 5:49 PM IST

Updated : Dec 4, 2020, 5:54 PM IST

ಏರ್ ಇಂಡಿಯಾ ನೌಕರರು ಖಾಸಗಿ ಸಂಸ್ಥೆ ನಿಧಿಯ ಸಹಭಾಗಿತ್ವದಲ್ಲಿ ಏರ್​ ಇಂಡಿಯಾ ಖರೀದಿಗೆ ಬಿಡ್ ಮಾಡಲು ತಯಾರಿ ನಡೆಸುತ್ತಿದ್ದಾರೆ. ಇದಕ್ಕಾಗಿ ಪ್ರತಿ ಉದ್ಯೋಗಿಯು ಬಿಡ್‌ಗೆ ತಲಾ 1 ಲಕ್ಷ ರೂ. ನೀಡಲಿದ್ದಾರೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

Air India
ಏರ್ ಇಂಡಿಯಾ

ನವದೆಹಲಿ: ಏರ್ ಇಂಡಿಯಾದ 209 ಉದ್ಯೋಗಿಗಳ ತಂಡ ಖಾಸಗಿ ಹಣಕಾಸುದಾರರ ಸಹಭಾಗಿತ್ವದಲ್ಲಿ ರಾಷ್ಟ್ರೀಯ ವಾಹಕ ಏರ್​ ಇಂಡಿಯಾ ಖರೀದಿ ಆಸಕ್ತಿಗೆ ಬಿಡ್​ ಸಲ್ಲಿಸಲಿದ್ದಾರೆ.

ಐಎಎನ್‌ಎಸ್ ವರದಿ ಅನ್ವಯ, ಏರ್ ಇಂಡಿಯಾ ನೌಕರರು ಖಾಸಗಿ ಸಂಸ್ಥೆಯ ನಿಧಿ ಸಹಭಾಗಿತ್ವದಲ್ಲಿ ಏರ್​ ಇಂಡಿಯಾ ಖರೀದಿಗೆ ಬಿಡ್ ಮಾಡಲು ತಯಾರಿ ನಡೆಸುತ್ತಿದ್ದಾರೆ. ಇದಕ್ಕಾಗಿ ಪ್ರತಿ ಉದ್ಯೋಗಿಯು ಬಿಡ್‌ಗೆ ತಲಾ 1 ಲಕ್ಷ ರೂ. ನೀಡಲಿದ್ದಾರೆ.

ಬಿಡ್ ಪ್ರಕ್ರಿಯೆಯ ನೇತೃತ್ವವನ್ನು ಏರ್ ಇಂಡಿಯಾದ ವಾಣಿಜ್ಯ ನಿರ್ದೇಶಕ ಮೀನಾಕ್ಷಿ ಮಲ್ಲಿಕ್ ವಹಿಸುತ್ತಿದ್ದಾರೆ.

ಪಿಐಎಂಗೆ ಧನ್ಯವಾದಗಳು. ಏರ್ ಇಂಡಿಯಾದ ಉದ್ಯೋಗಿಗಳಿಗೆ ವಿಮಾನಯಾನದ ಉಸ್ತುವಾರಿ ಮತ್ತು ಮಾಲೀಕತ್ವ ಪಡೆಯಲು ಸಾಧ್ಯವಾಗಿಸಿದೆ. ಈ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ವಿವಿಧ ನಿಯಮಗಳು ಮತ್ತು ಷರತ್ತುಗಳನ್ನು ಒದಗಿಸುತ್ತಿದೆ. ನಾವು ಒಟ್ಟಾಗಿ ಇದನ್ನು ಸಾಧಿಸಲು ಉದ್ದೇಶಿಸಿದ್ದೇವೆ ಎಂದು ಮೀನಾಕ್ಷಿ ಮಲ್ಲಿಕ್ ಅವರು ಏರ್ ಇಂಡಿಯಾ ತಂಡದ ಸದಸ್ಯರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ಬಿಡ್‌ ಸಲ್ಲಿಕೆಗೆ ಕೊನೆಯ ದಿನಾಂಕ ಡಿಸೆಂಬರ್ 14 ಆಗಿದೆ.

ಕಾರ್ಪೊರೇಟ್​ ಸಂಸ್ಥೆಗಳಿಗೆ ಬ್ಯಾಂಕ್​​​ ಲೈಸನ್ಸ್​ ನೀಡಿಕೆ ವಿಚಾರ: RBI ಹೇಳುವುದೇನು?

ಎಐ ಮತ್ತು ಅದರ ಸ್ವತ್ತುಗಳ ಉಸ್ತುವಾರಿ ಮತ್ತು ಮಾಲೀಕತ್ವ ತೆಗೆದುಕೊಳ್ಳಲು ಬಯಸಿ ಬಿಡ್ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಿದ್ದೇವೆ. ಮಾಧ್ಯಮ ವರದಿಗಳು ನಿಜವಾಗಿದ್ದರೆ, ನಾವು ಕೆಲವು ದೊಡ್ಡ ಕಾರ್ಪೊರೇಟ್ ವಿರುದ್ಧ ಬಿಡ್ಡಿಂಗ್ ಮಾಡುತ್ತೇವೆ ಎಂದು ಮಲ್ಲಿಕ್ ತಿಳಿಸಿದ್ದಾರೆ.

Last Updated : Dec 4, 2020, 5:54 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.