ETV Bharat / business

ಒಂದು ತಿಂಗಳ ಸಂಬಳವಾದ್ರೂ ಕೊಡಿಸುವಂತೆ ಪ್ರಧಾನಿಗೆ ಜೆಟ್​ ನೌಕರರ ಮನವಿ

author img

By

Published : Apr 28, 2019, 12:44 PM IST

2012ರಲ್ಲಿ ಕಿಂಗ್ ಫಿಷರ್ ಏರ್​ಲೈನ್ಸ್​ ಸ್ಥಗಿತಗೊಂಡ ಬಳಿಕ ಸಂಸ್ಥೆಯ ಪೈಲೆಟ್​ಗಳಿಗೆ ಎಂಟು ತಿಂಗಳ ವೇತನ ಸಿಕ್ಕಿರಲಿಲ್ಲ. ತೀವ್ರ ಹಣಕಾಸಿನ ಮುಗ್ಗಟ್ಟಿಗೆ ಸಿಲುಕಿರುವ ದೇಶದ ಅತಿದೊಡ್ಡ ಖಾಸಗಿ ವಿಮಾನಯಾನ ಸಂಸ್ಥೆ ಜೆಟ್​ ಏರ್​ ವೇಸ್‌ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಸಂಗ್ರಹ ಚಿತ್ರ: ಚಿತ್ತ ಕೃಪೆ ಗೆಟ್ಟಿ

ಮುಂಬೈ: ಜೆಟ್​ ಏರ್​ವೇಸ್​ ಸಿಬ್ಬಂದಿಯ ಒಂದು ತಿಂಗಳ ಸಂಬಳ ನೀಡಲು ಎಸ್​ಬಿಐಗೆ ನಿರ್ದೇಶನ ನೀಡುವಂತೆ ರಾಷ್ಟ್ರೀಯ ಏವಿಯೇಷನ್​ ಗಿಲ್ಡ್​ (ಎನ್​ಎಜಿ) ಪ್ರಧಾನಿಗೆ ಪತ್ರ ಬರೆದಿದೆ.

ನರೇಂದ್ರ ಮೋದಿಗೆ ಪತ್ರದ ಪ್ರತಿಯನ್ನು ಇ-ಮೇಲ್​ ಮಾಡಿದ ಎನ್​ಎಜಿ ಅಧ್ಯಕ್ಷ ಕರನ್ ಚೋಪ್ರಾ , ತುರ್ತು ಹಾಗೂ ಮಾನವೀಯತೆಯ ಆಧಾರದ ಮೇಲೆ ಜೆಟ್​ ಏರ್​ವೇಸ್​ನ ಎಲ್ಲ ಸಿಬ್ಬಂದಿಗೆ ಒಂದು ತಿಂಗಳ ವೇತನ ನೀಡುವಂತೆ ನಾವು ಕೋರುತ್ತಿದ್ದೇವೆ. ಕಿಂಗ್ ಫೀಷರ್​ ಏರ್​ಲೈನ್ಸ್ ಎದುರಿಸಿದ ದುಸ್ಥಿತಿ ಇಲ್ಲಿ ಸಂಭವಿಸದಿರಲಿ ಎಂದು ಉಲ್ಲೇಖಿಸಿದ್ದಾರೆ.

ಜೆಟ್​ ಏರ್​ ನಿರ್ವಹಣೆಗೆ ಅಗತ್ಯವಿರುವ ಮಧ್ಯಂತರ ಹಣಕಾಸು ನೆರವನ್ನು ಬ್ಯಾಂಕ್​ ಒಕ್ಕೂಟ ಈವರೆಗೆ ಸಂದಾಯ ಮಾಡಿಲ್ಲ. ಹೀಗಾಗಿ ವಿಮಾನಯಾನ ಸೇವೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ ಎಂದು ಹೇಳಿದ್ದಾರೆ.

ಕಳೆದ ಆಗಸ್ಟ್​ನಿಂದ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದ ಜೆಟ್​, ಹಿರಿಯ ವ್ಯವಸ್ಥಾಪಕರು, ಪೈಲೆಟ್​ಗ ಹಾಗೂ ಇಂಜಿನಿಯರ್​​ ವೇತನ ನೀಡಿರಲಿಲ್ಲ. ಕಳೆದ ಸೆಪ್ಟೆಂಬರ್​ನಲ್ಲಿ ಅಲ್ಪ ಪ್ರಮಾಣದ ವೇತನವನ್ನು ಮಾತ್ರವೇ ಜೆಟ್​ ಏರ್​ವೇಸ್ ತನ್ನ ಸಿಬ್ಬಂದಿಗೆ ನೀಡಿತ್ತು. ಇನ್ನು ಅಕ್ಟೋಬರ್​ ಹಾಗೂ ನವೆಂಬರ್​ ತಿಂಗಳ ಸಂಬಳವನ್ನು ಸಂಸ್ಥೆ ನೀಡಿಲ್ಲ. ಸಾವಿರಾರು ಕೋಟಿ ರೂ. ನಷ್ಟದಿಂದ ಸಂಕಷ್ಟಕ್ಕೆ ಸಿಲುಕಿರುವ ಸಂಸ್ಥಾಪಕ ಮುಖ್ಯಸ್ಥ ನರೇಶ್‌​ ಗೋಯಲ್​ ಈಗಾಗಲೇ ರಾಜೀನಾಮೆ ಸಲ್ಲಿಸಿದ್ದಾರೆ.

Intro:Body:Conclusion:

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.