ETV Bharat / business

ಬಡ್ಡಿದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡ ಆರ್‌ಬಿಐ; ಶೇ 10.5ರಷ್ಟು ಆರ್ಥಿಕ ವೃದ್ಧಿದರ ನಿರೀಕ್ಷೆ

author img

By

Published : Apr 7, 2021, 12:09 PM IST

ಕೊರೊನಾ ಸೋಂಕು ಹೆಚ್ಚಳದ ಇತ್ತೀಚಿನ ಬೆಳವಣಿಗೆಯು ದೇಶದ ಆರ್ಥಿಕ ಬೆಳವಣಿಗೆಯ ಚೇತರಿಕೆಗೆ ತೊಡಕಾಗಿದೆ ಎಂದು ಆರ್‌ಬಿಐ ಗವರ್ನರ್‌ ಶಕ್ತಿಕಾಂತ್ ದಾಸ್‌ ತಿಳಿಸಿದ್ದಾರೆ.

RBI keeps interest rates on hold as Covid-19 cases surge
ಪೊ ದರದಲ್ಲಿ ಸ್ಥಿರತೆ ಕಾಯ್ದುಕೊಂಡ ಆರ್​ಬಿಐ

ನವದೆಹಲಿ: ಕೊರೊನಾ ಸಾಂಕ್ರಾಮಿಕದಿಂದಾಗಿ ಹದಗೆಟ್ಟಿರುವ ದೇಶದ ಆರ್ಥಿಕ ಸ್ಥಿತಿಗತಿ, ಹಣದುಬ್ಬರದ ಒತ್ತಡ, ಕೇಂದ್ರ ಸರ್ಕಾರದ ಆರ್ಥಿಕ ಪುನಶ್ಚೇತನ ಪ್ಯಾಕೇಜ್ ಘೋಷಣೆಯ ನಡುವೆಯೂ ದೇಶದ ಕೇಂದ್ರೀಯ ಬ್ಯಾಂಕ್‌ ಹಣಕಾಸು ನೀತಿ ಪ್ರಕಟಿಸಿದೆ. ಕೊರೊನಾ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಆರ್‌ಬಿಐ ತನ್ನ ರೆಪೋ ಬಡ್ಡಿದರದಲ್ಲಿ ಯಾವುದೇ ಬದಲಾವಣೆ ಮಾಡದೇ ಶೇ 4 ಅನ್ನು ಮುಂದುವರೆಸಿದೆ.

"ಕೋವಿಡ್ -19 ಸೋಂಕುಗಳ ಇತ್ತೀಚಿನ ಉಲ್ಬಣವು ಆರ್ಥಿಕ ಬೆಳವಣಿಗೆಯ ಚೇತರಿಕೆಯಲ್ಲಿ ಅನಿಶ್ಚಿತತೆಯನ್ನು ಸೃಷ್ಟಿಸಿದೆ. ವಿತ್ತೀಯ ನೀತಿ ಪರಾಮರ್ಶೆ ವೇಳೆ ರೆಪೊ ದರ (ಆರ್​ಬಿಐ ಬಡ್ಡಿ ದರಗಳು) ಶೇ 4ರಷ್ಟಿದೆ. ಆರ್ಥಿಕ ಬೆಳವಣಿಗೆಯಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ರಿವರ್ಸ್​ ರೆಪೊ ದರವನ್ನು ಶೇ 3.5ರಲ್ಲೇ ಉಳಿಸಿಕೊಳ್ಳಲಾಗಿದೆ. ಆರ್ಥಿಕ ಪ್ರಗತಿ/ಪುನಃಶ್ಚೇತನ ಸ್ಥಿರತೆ ಕಾಯ್ದುಕೊಳ್ಳುವವರೆಗೂ ಆರ್​ಬಿಐ ವಿತ್ತೀಯ ನೀತಿಯಲ್ಲಿ ಯಾವುದೇ ಏರುಪೇರು ಇರುವುದಿಲ್ಲ ಎಂದು ಶಕ್ತಿಕಾಂತ್​ ದಾಸ್ ತಿಳಿಸಿದರು.

ಇದನ್ನೂ ಓದಿ: ಮಾರ್ಚ್​ ಅಂತ್ಯದೊಳಗೆ ಎಜಿಆರ್ ಪಾವತಿಸಲು ವಿಫಲವಾದ​ ಕಂಪನಿಗಳು : ದೂರ ಸಂಪರ್ಕ ಇಲಾಖೆಯಿಂದ ಅಫಿಡವಿಟ್

ರೆಪೊ ದರ ಮತ್ತು ರಿವರ್ಸ್ ರೆಪೊ ದರವು ಕ್ರಮವಾಗಿ ಶೇ 4 ಮತ್ತು ಶೇ 3.35 ರಂತೆ ಬದಲಾಗದೆ ಉಳಿದಿವೆ.

ರೆಪೋ, ರಿವರ್ಸ್‌ ರೆಪೋ ದರ ಎಂದರೇನು?

ರೆಪೊ ಎಂದರೆ, ಆರ್‌ಬಿಐ ವಾಣಿಜ್ಯ ಬ್ಯಾಂಕ್​ಗಳಿಗೆ ಅಗತ್ಯವಿದ್ದಾಗ ಸಾಲವನ್ನು ನೀಡುತ್ತದೆ. ಇದು ಹಣದುಬ್ಬರವನ್ನು ನಿಯಂತ್ರಿಸಲು ಕೇಂದ್ರ ಬ್ಯಾಂಕ್ ಬಳಸುವ ಸಾಧನವಾಗಿದೆ. ರಿವರ್ಸ್ ರೆಪೊ ದರವು ಆರ್‌ಬಿಐ ಬ್ಯಾಂಕ್​ಗಳಿಂದ ಎರವಲು ಪಡೆಯುವ ಬಡ್ಡಿ ದರವಾಗಿದೆ.

ಶೇ 10.5 ಆರ್ಥಿಕ ವೃದ್ಧಿದರ ನಿರೀಕ್ಷೆ

2021-22ರ ಆರ್ಥಿಕ ವರ್ಷದಲ್ಲಿ ಜಿಡಿಪಿ ಬೆಳವಣಿಗೆಯು ಶೇ 10.5 ರಷ್ಟು ಇರಲಿದೆ ಎಂದು ರಿಸರ್ವ್‌ ಬ್ಯಾಂಕ್ ಅಂದಾಜು ಮಾಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.