ETV Bharat / business

ನಿರೀಕ್ಷೆಗೂ ಮೀರಿ ಖಜಾನೆಗೆ ಹರಿದು ಬಂತು ಪರೋಕ್ಷ ತೆರಿಗೆ!

author img

By

Published : Apr 13, 2021, 5:10 PM IST

ಈ ವರ್ಷದ ಬಜೆಟ್ ಮಂಡಿಸುವ ಸಮಯದಲ್ಲಿ ಸರ್ಕಾರವು ನಿರೀಕ್ಷಿಸಿದ್ದಕ್ಕಿಂತ ಉತ್ತಮ ತೆರಿಗೆ ಸಂಗ್ರಹ ಕಂಡು ಬಂದಿದೆ. ಸರಕು ಮತ್ತು ಸೇವೆಗಳ ಬಳಕೆಯ ಮೇಲೆ ತೆರಿಗೆದಾರರು ಪಾವತಿಸುವ ಪರೋಕ್ಷ ತೆರಿಗೆಗಳು, ಜಿಎಸ್​ಟಿ, ಕಸ್ಟಮ್ಸ್ ಮತ್ತು ಅಬಕಾರಿ ಸುಂಕವೂ ಸೇರಿವೆ. ಇದು 2019-20ರ ಹಣಕಾಸು ವರ್ಷದಲ್ಲಿ ನೈಜ ಸಂಗ್ರಹಕ್ಕಿಂತ ಶೇ 12ರಷ್ಟು ಬೆಳವಣಿಗೆ ದಾಖಲಿಸಿದೆ.

tax
tax

ನವದೆಹಲಿ: ಕಳೆದ ಹಣಕಾಸು ವರ್ಷದಲ್ಲಿ ಪರೋಕ್ಷ ತೆರಿಗೆ ಸಂಗ್ರಹವು ಸುಮಾರು 10.71 ಲಕ್ಷ ಕೋಟಿ ರೂ.ಗಳಷ್ಟಾಗಿದ್ದು, ಪರಿಷ್ಕೃತ ಗುರಿ 9.89 ಲಕ್ಷ ಕೋಟಿ ರೂ.ಗಿಂತ ಶೇ 8.3ರಷ್ಟು ಹೆಚ್ಚಳವಾಗಿದೆ ಎಂದು ಹಣಕಾಸು ಸಚಿವಾಲಯ ಬಿಡುಗಡೆ ಮಾಡಿದ ತಾತ್ಕಾಲಿಕ ದತ್ತಾಂಶದಿಂದ ತಿಳಿದು ಬಂದಿದೆ.

ಈ ವರ್ಷದ ಬಜೆಟ್ ಮಂಡಿಸುವ ಸಮಯದಲ್ಲಿ ಸರ್ಕಾರವು ನಿರೀಕ್ಷಿಸಿದ್ದಕ್ಕಿಂತ ಉತ್ತಮ ಸಂಗ್ರಹ ಕಂಡು ಬಂದಿದೆ. ಸರಕು ಮತ್ತು ಸೇವೆಗಳ ಬಳಕೆಯ ಮೇಲೆ ತೆರಿಗೆದಾರರು ಪಾವತಿಸುವ ಪರೋಕ್ಷ ತೆರಿಗೆಗಳು, ಜಿಎಸ್​ಟಿ, ಕಸ್ಟಮ್ಸ್ ಮತ್ತು ಅಬಕಾರಿ ಸುಂಕವೂ ಸೇರಿವೆ. ಇದು 2019 - 20ರ ಹಣಕಾಸು ವರ್ಷದಲ್ಲಿ ನೈಜ ಸಂಗ್ರಹಕ್ಕಿಂತ ಶೇ 12ರಷ್ಟು ಬೆಳವಣಿಗೆ ದಾಖಲಿಸಿದೆ.

2019-20ರಲ್ಲಿ ಸರ್ಕಾರವು 9.54 ಲಕ್ಷ ಕೋಟಿ ರೂ. ಪರೋಕ್ಷ ತೆರಿಗೆಯಾಗಿ ಸಂಗ್ರಹಿಸಿದೆ. ಕೋವಿಡ್ -19 ಜಾಗತಿಕ ಸಾಂಕ್ರಾಮಿಕ ರೋಗದ ಹೊರತಾಗಿಯೂ ಕಳೆದ ವರ್ಷ ದೇಶದ ಒಟ್ಟು ದೇಶೀಯ ಉತ್ಪಾದನೆಯಲ್ಲಿ ಸುಮಾರು ಶೇ 8ರಷ್ಟು ಕುಸಿತ ಉಂಟಾಗುತ್ತದೆ ಎಂದು ನಿರೀಕ್ಷಿಸಲಾಗಿದೆ. ಇದು 1.17 ಲಕ್ಷ ಕೋಟಿ ರೂ.ಗಳಷ್ಟು ಬೆಳವಣಿಗೆಯಾಗಿ ಶೇ 12.3ರಷ್ಟಿದೆ.

ಕಳೆದ ಹಣಕಾಸು ವರ್ಷದಲ್ಲಿ ಕೇಂದ್ರವು ಸಂಗ್ರಹಿಸಿದ ಒಟ್ಟು ಪರೋಕ್ಷ ತೆರಿಗೆಯ ಶೇ 51ಕ್ಕಿಂತ ಹೆಚ್ಚಾಗಿ 5.48 ಲಕ್ಷ ಕೋಟಿ ರೂ.ಗಳಷ್ಟಾಗಿದೆ. ಇದು ಕೇಂದ್ರ ಜಿಎಸ್‌ಟಿ (ಸಿಜಿಎಸ್‌ಟಿ), ಇಂಟಿಗ್ರೇಟೆಡ್ ಜಿಎಸ್‌ಟಿ (ಐಜಿಎಸ್‌ಟಿ) ಮತ್ತು ಜಿಎಸ್‌ಟಿ ಪರಿಹಾರ ಸೆಸ್ ಒಳಗೊಂಡಿದೆ.

ಕಳೆದ 6 ತಿಂಗಳಲ್ಲಿ ಜಿಎಸ್‌ಟಿ ಸಂಗ್ರಹ ಸುಧಾರಣೆ

ಕಳೆದ ವರ್ಷ ನವೆಂಬರ್‌ನಿಂದ ಸರ್ಕಾರ ಕೈಗೊಂಡ ಕಟ್ಟುನಿಟ್ಟಿನ ಜಾರಿ ಕ್ರಮಗಳಿಂದಾಗಿ ಜಿಎಸ್‌ಟಿ ಕಲೆಕ್ಷನ್ 5.15 ಲಕ್ಷ ಕೋಟಿ ರೂ. ಪರಿಷ್ಕೃತ ಗುರಿ ಮೀರಿ, ಶೇ 6.4ರಷ್ಟು ಹೆಚ್ಚಾಗಿದೆ. ಆದರೆ, ಕಳೆದ ವರ್ಷ ಪರೋಕ್ಷ ಸಂಗ್ರಹದಲ್ಲಿ ಒಟ್ಟಾರೆ ಸಂಗ್ರಹದ ಹೊರತಾಗಿಯೂ, ಜಿಎಸ್‌ಟಿ ಸಂಗ್ರಹವು 2020-21ರಲ್ಲಿ 5.48 ಲಕ್ಷ ಕೋಟಿ ರೂ.ಗೆ ಇಳಿದಿದೆ. ಇದು 2019-20ನೇ ಹಣಕಾಸು ವರ್ಷದಲ್ಲಿ 5.99 ಲಕ್ಷ ಕೋಟಿ ರೂ., 51,000 ಕೋಟಿ ರೂ. ಅಥವಾ ಶೇ 8.5ರಷ್ಟು ಕುಸಿತವಾಗಿದೆ.

ಕೋವಿಡ್‌ನ ಕಾರಣದಿಂದಾಗಿ ಹಣಕಾಸು ವರ್ಷದ ಮೊದಲಾರ್ಧದಲ್ಲಿ ಜಿಎಸ್‌ಟಿ ಸಂಗ್ರಹವು ತೀವ್ರವಾಗಿ ಪರಿಣಾಮ ಬೀರಿತು. ದ್ವಿತೀಯಾರ್ಧದಲ್ಲ, ಜಿಎಸ್​ಟಿ ಸಂಗ್ರಹವು ಉತ್ತಮ ಬೆಳವಣಿಗೆ ದಾಖಲಿಸಿದೆ. ಕಳೆದ ಆರು ತಿಂಗಳಲ್ಲಿ ಪ್ರತಿ ಸಂಗ್ರಹವು 1 ಲಕ್ಷ ಕೋಟಿ ರೂ. ಮೀರಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ (ಐಟಿಸಿ) ವಂಚನೆಗಾಗಿ ನಕಲಿ ಜಿಎಸ್​ಟಿ ಬಿಲ್​​ ಬಳಸುವುದರ ವಿರುದ್ಧ ರಾಷ್ಟ್ರವ್ಯಾಪಿ ನಡೆಸಿದ ಕಾರ್ಯಾಚರಣೆ ಪರಿಣಾಮವಾಗಿ, ಜಿಎಸ್​ಟಿ ಸಂಗ್ರಹವು ಕಳೆದ ಆರು ತಿಂಗಳಲ್ಲಿ 1 ಲಕ್ಷ ಕೋಟಿ ರೂ.ಗಳಿಗಿಂತ ಹೆಚ್ಚಾಗಿದೆ. ಸಾರ್ವಕಾಲಿಕ ಗರಿಷ್ಠ 1.24 ಲಕ್ಷ ಕೋಟಿ ರೂ. ಈ ವರ್ಷ ಮಾರ್ಚ್​ನಲ್ಲಿ ಸಂಗ್ರಹವಾಗಿದೆ.

ಕೇಂದ್ರ ಸರ್ಕಾರವು ಕೈಗೊಂಡ ಹಲವು ಕ್ರಮಗಳ ಅನುಸರಣೆ ಸುಧಾರಿಸಲು ಇದು ಕಾರಣವಾಗಿದೆ ಎಂದು ಹಣಕಾಸು ಸಚಿವಾಲಯ ಹೇಳಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.